ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ 'ಕೋಟಿಗೊಬ್ಬ-3' ಟೀಸರ್

'ಪೈಲ್ವಾನ್', 'ಸೈರಾ ನರಸಿಂಹ ರೆಡ್ಡಿ', 'ದಬಾಂಗ್-3' ಚಿತ್ರಗಳ ಬಳಿಕ ಕಿಚ್ಚ ಸುದೀಪ್ ಅಭಿನಯದ ಚಿತ್ರ 'ಕೋಟಿಗೊಬ್ಬ-3'.

Recommended Video

ಎಲ್ಲ ಕಡೆ ಧೂಳೆಬ್ಬಿಸುತ್ತಿದೆ ಕೊಟಿಗೊಬ್ಬ 3 ಚಿತ್ರದ ಟೀಸರ್ | Filmibeat Kannada

2016 ರಲ್ಲಿ ಬಿಡುಗಡೆಯಾದ 'ಕೋಟಿಗೊಬ್ಬ-2' ಹಿಟ್ ಆದ್ಮೇಲೆ 'ಕೋಟಿಗೊಬ್ಬ-3' ಚಿತ್ರಕ್ಕೆ ಸುದೀಪ್ ಗ್ರೀನ್ ಸಿಗ್ನಲ್ ನೀಡಿದ್ದರು. ಶಿವಕಾರ್ತಿಕ್ ನಿರ್ದೇಶನದ ಸೂರಪ್ಪ ಬಾಬು ನಿರ್ಮಾಣದ 'ಕೋಟಿಗೊಬ್ಬ-3' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ಟೀಸರ್ ಬಿಡುಗಡೆ ಆಗಿದೆ.

ಶಿವರಾತ್ರಿ ಹಬ್ಬದ ಶುಭ ಸಂದರ್ಭದಂದು ರಿಲೀಸ್ ಆದ 'ಕೋಟಿಗೊಬ್ಬ-3' ಚಿತ್ರದ ಟೀಸರ್ ಅಕ್ಷರಶಃ ಧೂಳೆಬ್ಬಿಸಿದೆ. ಸದ್ಯ ಯೂಟ್ಯೂಬ್ ನಲ್ಲಿ 'ಕೋಟಿಗೊಬ್ಬ-3' ಚಿತ್ರದ ಟೀಸರ್ ನಂಬರ್ 1 ಟ್ರೆಂಡಿಂಗ್ ನಲ್ಲಿದೆ.

Sudeep starrer Kotigobba 3 teaser trending No.1 in Youtube

ಇಲ್ಲಿಯವರೆಗೂ 'ಕೋಟಿಗೊಬ್ಬ-3' ಚಿತ್ರದ ಟೀಸರ್ ಗೆ 15 ಲಕ್ಷಕ್ಕೂ ಹೆಚ್ಚು ವ್ಯೂಸ್ ಲಭಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕೋಟಿಗೊಬ್ಬ-3' ಕಂಪ್ಲೀಟ್ ಆಕ್ಷನ್ ಪ್ಯಾಕ್ಡ್ ಚಿತ್ರ ಅನ್ನೋದು ಟೀಸರ್ ನಲ್ಲೇ ಸ್ಪಷ್ಟವಾಗಿದೆ. ಇಂಟರ್ ನ್ಯಾಷನಲ್ ಕಿಲಾಡಿಯಾಗಿ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಭಿನ್ನ-ವಿಭಿನ್ನ ಲುಕ್ಸ್ ನಲ್ಲಿ ಕಾಣಿಸಿಕೊಂಡರೂ, ಚಿತ್ರದಲ್ಲಿ ಸುದೀಪ್ ಡಬಲ್ ಅಲ್ಲ 'ಸಿಂಗಲ್ ಸಿಂಹ' ಎಂಬುದು ಟೀಸರ್ ನಲ್ಲೇ ಕ್ಲಿಯರ್ ಆಗಿದೆ.

ಅರ್ಜುನ್ ಜನ್ಯ ಸಂಗೀತ ನೀಡಿರುವ ಬಹು ನಿರೀಕ್ಷೆ ಹುಟ್ಟುಹಾಕಿರುವ 'ಕೋಟಿಗೊಬ್ಬ-3' ಚಿತ್ರ ಈ ವರ್ಷದ ಬೇಸಿಗೆಯಲ್ಲಿ ನಿಮ್ಮ ಮುಂದೆ ಬರಲಿದೆ.

More from Filmibeat

English summary
Kiccha Sudeep starrer Kotigobba 3 teaser trending No.1 in Youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X