'ಮ್ಯಾಕ್ಸ್' ಪ್ರೀ ಕ್ಲೈಮ್ಯಾಕ್ಸ್ ಫೋಟೊ ಲೀಕ್; ಸೋಶಿಯಲ್ ಮೀಡಿಯಾ ಶೇಕ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ಭರದಿಂದ ಆಗುತ್ತಿದೆ. ಅಭಿಮಾನಿಗಳಂತೂ ಕಿಚ್ಚನ ಆರ್ಭಟ ನೋಡೋಕೆ ಕಾಯುತ್ತಿದ್ದಾರೆ.
ಬಹಳ ದಿನಗಳಿಂದ ಅಭಿಮಾನಿಗಳು 'ಮ್ಯಾಕ್ಸ್' ಅಪ್‌ಡೇಟ್ ಕೇಳ್ತಾ ಬರ್ತಿದ್ದಾರೆ. ಆದರೆ ಎಲ್ಲದಕ್ಕೂ ಸಮಯ ಬರುತ್ತದೆ ಎಂದು ಕಿಚ್ಚ ಹೇಳ್ತಾ ಬಂದಿದ್ದರು. ಸದ್ಯ ಚಿತ್ರೀಕರಣ ಮುಗಿದಿದ್ದು ಇನ್ನು ಮುಂದೆ ಭಾರೀ ಸರ್‌ಪ್ರೈಸ್‌ಗಳು ಸಿಗಲಿವೆ. ಸದ್ಯ ಒಂದೇ ಒಂದು ಫೋಟೊ ಲೀಕ್ ಆಗಿ ಸೋಶಿಯಲ್ ಮೀಡಿಯಾ ಶೇಕ್ ಮಾಡ್ತಿದೆ. ಅದರಲ್ಲಿ ಕಿಚ್ಚನ ಲುಕ್ ರಿವೀಲ್ ಆಗಿಲ್ಲ. ಆದರೂ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಆಕ್ಷನ್ ಸೀನ್ ಗ್ಲಿಂಪ್ಸ್.. ಜಾತ್ರೆಯ ಸೆಟಪ್.. ದೊಡ್ಡ ಕಾಳೀಮಾತೆಯ ವಿಗ್ರಹ.. ಅರ್ಜುನ್ ಮಹಾಕ್ಷಯ್(ಸುದೀಪ್) ಕಾಳಿ ವಿಗ್ರಹ ಮುಂದೆ ನಡೆದು ಬರುತ್ತಿರುವುದನ್ನು ನೋಡಬಹುದು. ಪಕ್ಕಾ ಲೋಕಲ್ ಮಾಸ್ ಅವತಾರದಲ್ಲಿ ಕಿಚ್ಚನನ್ನು ನೋಡಿ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ. ಕ್ಲೈಮ್ಯಾಕ್ಸ್ ಅಥವಾ ಇಂಟ್ರವಲ್ ವೇಳೆಗೆ ಬರುವ ಆಕ್ಷನ್ ಸನ್ನಿವೇಶ ಎಂದು ಅಭಿಮಾನಿಗಳು ನಿರೀಕ್ಷೆ ಮಾಡುತ್ತಿದ್ದಾರೆ.
ಸುದೀಪ್ ಆಪ್ತ ನಟ ಪ್ರದೀಪ್ ಕೂಡ ಈ ಫೋಟೊ ಶೇರ್ ಮಾಡಿದ್ದಾರೆ. "ನಾನು ಪ್ರಾಮೀಸ್ ಮಾಡ್ತೀನಿ. 'ಮ್ಯಾಕ್ಸ್' ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ನಿಜಕ್ಕೂ ಹಬ್ಬ. ಅದನ್ನು ನೀವು ಸಖತ್ ಎಂಜಾಯ್ ಮಾಡ್ತೀರಾ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಯಾವ ರೀತಿ ನೋಡಲು ಬಹಳ ದಿನಗಳಿಂದ ಕಾಯುತ್ತಿದ್ದಾರೋ, ನಿಜಕ್ಕೂ ಸುದೀಪ್ ಅಣ್ಣ ಜಬರ್ದಸ್ತ್, ನನ್ನ ನಂಬಿ ಸಿನಿಮಾ ಅಪ್‌ಡೇಟ್ ತಡವಾಗಬಹುದು, ಆದರೆ ತೆರೆಮೇಲೆ ವಿಷ್ಯುವಲ್ಸ್ ಮಾತ್ರ ಇನ್ನು ದಿನ ಕಾದಿದ್ದಕ್ಕೂ ಸಾರ್ಥಕ ಎನ್ನುವಂತಿರುತ್ತದೆ" ಎಂದು ಬರೆದುಕೊಂಡಿದ್ದಾರೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮ್ಯಾಕ್ಸ್' ಸಿನಿಮಾ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಮಹಾಬಲಿಪುರಂನಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಸುದೀಪ್ 'ಮ್ಯಾಕ್ಸ್' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೆಗ್ಡೆ, ಸುಕೃತಾ ವಾಗ್ಲೆ, ಉಗ್ರಂ ಮಂಜು, ಸುನಿಲ್ ಸೇರಿದಂತೆ ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿದೆ.
ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು 'ಮ್ಯಾಕ್ಸ್' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ. ಮಹಾಕ್ಷಯ್ ಎನ್ನುವುದನ್ನು ಚಿತ್ರದಲ್ಲಿ ಶಾರ್ಟ್ ಆಗಿ 'ಮ್ಯಾಕ್ಸ್' ಎಂದು ಕರೆಯಲಿದ್ದು ಅದೇ ಚಿತ್ರದ ಟೈಟಲ್ ಆಗಿದೆ.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ನಟಿಸಿರುವ ಸಿನಿಮಾ 'ಮ್ಯಾಕ್ಸ್'. ಬರೋಬ್ಬರಿ 2 ವರ್ಷಗಳ ಬಳಿಕ ಮತ್ತೆ ಕಿಚ್ಚನ ಸಿನಿಮಾ ತೆರೆಗೆ ಬರುತ್ತಿದೆ. ಸೆಪ್ಟೆಂಬರ್ 2ಕ್ಕೆ ಸುದೀಪ್ ಹುಟ್ಟುಹಬ್ಬ. ಅದಕ್ಕಿಂತ ಒಂದು ಮುಂಚೆ ಅಂದ್ರೆ ಆಗಸ್ಟ್ ಕೊನೆ ವಾರದಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನದಲ್ಲಿದೆ ಚಿತ್ರತಂಡ.
'ವಿಕ್ರಾಂತ್ ರೋಣ' ಬಳಿಕ ಸುದೀಪ್ ಒಂದು ವರ್ಷ ವಿಶ್ರಾಂತಿ ಪಡೆದಿದ್ದರು. ಆದರೆ ಆ ಗ್ಯಾಪ್‌ನಲ್ಲಿ ಮೂರ್ನಾಲ್ಕು ಸ್ಕ್ರಿಪ್ಟ್ ಫೈನಲ್ ಮಾಡಿದ್ದರು. 'ಮ್ಯಾಕ್ಸ್' ಬಳಿಕ ತಮಿಳು ನಿರ್ದೇಶಕ ಚೇರನ್ ಸಾರಥ್ಯದ ಸಿನಿಮಾ ಒಪ್ಪಿಕೊಂಡಿದ್ದರು. ಬಳಿಕ 'ಬಿಲ್ಲಾ ರಂಗ ಬಾಷ' ಸಿನಿಮಾ ಆರಂಭವಾಗುವ ನಿರೀಕ್ಷೆಯಿದೆ. ತಾವೇ ಒಂದು ಸಿನಿಮಾವನ್ನು ನಿರ್ದೇಶಿಸಿ ನಟಿಸುವ ಲೆಕ್ಕಾಚಾರದಲ್ಲೂ ಇದ್ದಾರೆ.


Click it and Unblock the Notifications











