ಪೈಲ್ವಾನ್ ಆಡಿಯೋ ರಿಲೀಸ್ ಗೆ ದಿನಗಣನೆ ಶುರು
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಡೇಟ್ ಭಾರಿ ಕುತೂಹಲ ಮೂಡಿಸಿತ್ತು. ಈಗಾಗಲೆ ಚಿತ್ರದುರ್ಗದಲ್ಲಿ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದ್ರೆ, ಉತ್ತರ ಕರ್ನಾಟಕದಲ್ಲಾದ ನೆರೆ ಪ್ರವಾಹ ಪರಿಸ್ಥಿತಿಯಿಂದ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡಿತ್ತು ಚಿತ್ರತಂಡ.
ಕಾರ್ಯಕ್ರಮವನ್ನು ರದ್ದು ಮಾಡಿದ್ದಲ್ಲದೆ ಚಿತ್ರದುರ್ಗದಲ್ಲಿ ಅದ್ಧೂರಿಯಾಗಿ ನಡೆಯಬೇಕಿದ್ದ ಬಿಡುಗಡೆ ಕಾರ್ಯಕ್ರಮದ ಜಾಗ ಕೂಡ ಬದಲಾಗಿತ್ತು. ಚಿತ್ರದುರ್ಗದಿಂದ ಆಡಿಯೋ ರಿಲೀಸ್ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಆದ್ರೆ ಬೆಂಗಳೂರಿನಲ್ಲಿ ಎಲ್ಲಿ, ಯಾವಾಗ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿರಲಿಲ್ಲ.
ಆದ್ರೀಗ ಚಿತ್ರತಂಡ ಪೈಲ್ವಾನ್ ಆಡಿಯೋ ರಿಲೀಸ್ ಕಾರ್ಯಕ್ರಮದ ದಿನಾಂಕವನ್ನು ಬಹಿರಂಗ ಮಾಡಿ ಪೋಸ್ಟರ್ ರಿಲೀಸ್ ಮಾಡಿದೆ. ಹೌದು, ಇದೇ ತಿಂಗಳು 18ರಂದು ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿವೆ. ಅಂದ್ಹಾಗೆ ಬೆಂಗಳೂರಿನ ಕೋರಮಂಗಳ ಬಳಿ ಇರುವ ಇಂಡೋರ್ ಸ್ಟೇಡಿಯಂನಲ್ಲಿ ಪೈಲ್ವಾನ್ ಹಾಡುಗಳ ಹಬ್ಬ ನಡೆಯಲಿದೆ.

ಈಗಾಗಲೆ ಎಲ್ಲರಿಗೂ ಗೊತ್ತಿರುವ ಹಾಗೆ ಚಿತ್ರದ ಹಾಡುಗಳನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಲಿದ್ದಾರೆ. ಈ ಹಿಂದೆ ಮೊದಲು ಕಾರ್ಯಕ್ರಮ ರದ್ದಾದ ಬಗ್ಗೆ ಕಿಚ್ಚ ಸುದೀಪ್ ವಿಷಾದ ವ್ಯಕ್ತಪಡಿಸಿದ್ದರು. ಅಭಿಮಾನಿಗಳಿಗೆ ನಿರಾಸೆ ಉಂಟುಮಾಡಿದೆ. ಪರಿಸ್ಥಿತಿ ಅರ್ಥ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು.


Click it and Unblock the Notifications











