ಸುದೀಪ್ 'ಪೈಲ್ವಾನ್' ಮೊದಲ ದಿನ ಎಷ್ಟು ಕೋಟಿ ಬಾಚಿಕೊಂಡಿದೆ?
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ನಿನ್ನೆ ರಾಜ್ಯದಾದ್ಯಂತ ತೆರೆಗೆ ಬಂದಿದೆ. ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಪೈಲ್ವಾನ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕನ್ನಡ ಮಾತ್ರವಲ್ಲದೆ ಐದು ಭಾಷೆಯಲ್ಲಿ ತೆರೆಗೆ ಬಂದಿರುವ ಪೈಲ್ವಾನ್ ಗೆ ಎಲ್ಲಾ ಕಡೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಜಿಎಫ್ ಸಿನಿಮಾದ ನಂತರ ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟಕ್ಕೆ ಏಕಕಾಲಕ್ಕೆ ಐದು ಭಾಷೆಯಲ್ಲಿ ತೆರೆಗೆ ಬಂದ ಸಿನಿಮಾವಾಗಿದೆ. ಹಾಗಾಗಿ ಪೈಲ್ವಾನ್ ನ ಮೊದಲ ದಿನದ ಕಲೆಕ್ಷನ್ ಎಷ್ಟಾಗಿರ ಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಮೊದಲ ದಿನ 10 ಕೋಟಿ
ಪೈಲ್ವಾನ್ ರಿಲೀಸ್ ಆದ ಮೊದಲ ದಿನ 10 ಕೋಟಿ ಬಾಚಿಕೊಂಡಿದೆ ಎಂದು ಸಿನಿ ಪಂಡಿತರು ಹೇಳಿದ್ದಾರೆ. ಗೊತ್ತಿರಲಿ ಇದು ಕೇವಲ ಕನ್ನಡದ ಕಲೆಕ್ಷನ್ ಮಾತ್ರ. ಇನ್ನು ಬೇರೆ ಬೇರೆ ಭಾಷೆಯಲ್ಲಿ ಎಷ್ಟು ಗಳಿಸಿದೆ ಎನ್ನುವುದು ಸರಿಯಾದ ಲೆಕ್ಕ ಸಿಕ್ಕಿಲ್ಲ. ಕಲೆಕ್ಷನ್ ಬಗ್ಗೆ ಚಿತ್ರತಂಡ ಯಾವುದೆ ಮಾಹಿತಿ ಬಹಿರಂಗ ಪಡಿಸಲ್ಲಿಲ್ಲ. ಆದ್ರೆ 10 ಕೋಟಿ ಬಾಚಿಕೊಂಡಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ ಅಷ್ಟೆ.

ಪೈಲ್ವಾನ್ ಗಿಂತ ದಿ ವಿಲನ್ ಕಲೆಕ್ಷನ್ ಜಾಸ್ತಿ
ಪೈಲ್ವಾನ್ ಸಿನಿಮಾಗೆ ಹೋಲಿಕೆ ಮಾಡಿದರೆ ದಿ ವಿಲನ್ ಸಿನಿಮಾನೆ ಹೆಚ್ಚು ಗಳಿಕೆ ಮಾಡಿತ್ತು ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ದಿ ವಿಲನ್ ಕನ್ನಡದಲ್ಲಿ ಮಾತ್ರ ತೆರೆಗೆ ಬಂದಿತ್ತು. ಪೈಲ್ವಾನ್ ಐದು ಭಾಷೆಯಲ್ಲಿ ರಿಲೀಸ್ ಆಗಿದೆ. ಬೇರೆ ಬೇರೆ ಭಾಷೆಯಲ್ಲಿ ಎಷ್ಟು ಗಳಿಸಿದೆ ಎನ್ನುವ ಮಾಹಿತಿ ಬರಬೇಕಿದೆ.

ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ತೆರೆಗೆ
ಪೈಲ್ವಾನ್ ಸಿನಿಮಾ ಅತೀ ಹೆಚ್ಚು ಚಿತ್ರಮಂದಿರಗಳ್ಲಿ ತೆರೆಗೆ ಬಂದಿದೆ. ಕರ್ನಾಟಕದಲ್ಲೆ ಸುಮಾರು 400ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿದೆ. ಬೇರೆ ಬೇರೆ ಭಾಷೆಯಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಪೈಲ್ವಾನ್ ಅಬ್ಬರ ಶುರುವಾಗಿದೆ. ಬೆಳಗ್ಗೆ 5.30 ರಿಂದನೆ ಪೈಲ್ವಾನ್ ಚಿತ್ರದ ಮೊದಲ ಶೋ ಪ್ರಾರಂಭವಾಗಿದೆ.

ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ
ಅಭಿನಯ ಚಕ್ರವರ್ತಿ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಕುಸ್ತಿ ಅಖಾಡದಲ್ಲಿ ತೊಡೆ ತಟ್ಟಿನಿಂತಿದ್ದರು. ಕಿಚ್ಚನ ಪೈಲ್ವಾನ್ ಅವತಾರಕ್ಕೆ ಅಭಿಮಾನಿಗಳು ಫಿದಾ ಅಗಿದ್ದಾರೆ. ಎಲ್ಲಾ ಕಡೆಯಿಂದನೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ವೀಕೆಂಡ್ ನಲ್ಲಿ ಪೈಲ್ವಾನ್ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


Click it and Unblock the Notifications











