ಕೋಟೆನಾಡಿನಲ್ಲಿ ಮೊಳಗಲಿದೆ 'ಪೈಲ್ವಾನ್' ಹಾಡುಗಳು
Recommended Video
ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದ ಆಡಿಯೋ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಆ ದಿನ ಇನ್ನೇನು ಹತ್ತಿರ ಬರುತ್ತಿದೆ. ಅದ್ಧೂರಿಯಾಗಿ ಚಿತ್ರದ ಹಾಡುಗಳು ತೆರೆಗೆೆ ಬರುತ್ತಿವೆ. ಈ ಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸುದೀಪಿಯನ್ಸ್ ತುದಿಗಾಲಿನಲ್ಲಿ ನಿಂತಿದ್ದಾರೆ.
ಈಗಾಗಲೆ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಪೈಲ್ವಾನ್ ಆಗಸ್ಟ್ ಕೊನೆಯಲ್ಲಿ ತೆರೆಗೆ ತರುವ ಭರ್ಜರಿ ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಅದಕ್ಕು ಮೊದಲು ಹಾಡುಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ ಪೈಲ್ವಾನ್.
ಪೈಲ್ವಾನ್ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಚಿತ್ರಾಭಿಮಾನಿಗಳಿದೆ. ಯಾವಾಗ ತೆರೆಗೆ ಬರುತ್ತೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ದಿನಾಂಕ ನಿಗದಿಯಾಗಿರುವ ಖುಷಿ ಹೇಳತೀರದಾಗಿದೆ. ಅಂದ್ಹಾಗೆ ಚಿತ್ರದ ಹಾಡುಗಳು ಯಾವಾಗ ತೆರೆಗೆ ಬರುತ್ತೆ? ಈ ಅದ್ಧೂರಿ ಕಾರ್ಯಕ್ರಮ ಎಲ್ಲಿ ನಡೆಯುತ್ತಿದೆ? ಮುಂದೆ ಓದಿ..

ಜುಲೈ 27 ಕ್ಕೆ ಮೊಳಗಲಿದೆ ಪೈಲ್ವಾನ್ ಹಾಡುಗಳು
ಬಹುನಿರೀಕ್ಷೆಯ ಪೈಲ್ವಾನ್ ಚಿತ್ರದ ಹಾಡುಗಳು ಇದೆ ತಿಂಗಳು ಕೊನೆಯಲ್ಲಿ ಅಂದ್ರೆ ಜುಲೈ 27ಕ್ಕೆ ತೆರೆಗೆ ಬರುತ್ತಿವೆ. ಅದ್ಧೂರಿ ಕಾರ್ಯಕ್ರಮದ ಮೂಲಕ ಚಿತ್ರದ ಹಾಡುಗಳು ತೆರೆಗೆ ಬರಲಿವೆ. ಈ ದೊಡ್ಡ ಸಮಾರಂಭಕ್ಕೆ ಯಾರೆಲ್ಲ ಆಗಮಿಸಲಿದ್ದಾರೆ. ಯಾರೆಲ್ಲ ಅತಿಥಿಗಳು ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಸಧ್ಯದಲ್ಲೇ ಮಾಹಿತಿ ಹೊರಬೀಳಲಿದೆ.

ಕೋಟೆನಾಡಿನಲ್ಲಿ ಹಾಡುಗಳು ಬಿಡುಗಡೆ
ಕೋಟೆನಾಡು ಚಿತ್ರದುರ್ಗದಲ್ಲಿ ಪೈಲ್ವಾನ್ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ. ಚಿತ್ರದುರ್ಗದ ಜನತೆಯ ಮುಂದೆ ಅದ್ಧೂರಿಯಾಗಿ ಚಿತ್ರದ ಹಾಡುಗಳು ಮಾರುಕಟ್ಟೆಗೆ ಬರಲಿವೆ. ಈ ಹಿಂದೆ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿದ್ದ, ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಆಡಿಯೋ ದಾವಣಗೆರೆಯಲ್ಲಿ ರಿಲೀಸ್ ಆಗಿತ್ತು. ಈ ಬಾರಿ ಚಿತ್ರದುರ್ಗದ ಕಡೆ ಪಯಣ ಬೆಳೆಯುತ್ತಿದ್ದಾರೆ ಕೃಷ್ಣ ಮತ್ತು ತಂಡದವರು.

ಲಹರಿ ಮ್ಯೂಸಿಕ್ ಪಾಲಾದ ಆಡಿಯೋ ಹಕ್ಕು
ಖ್ಯಾತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿಕ್ ಪೈಲ್ವಾನ್ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ದಾಖಲೆ ಮೊತ್ತಕ್ಕೆ ಚಿತ್ರದ ಆಡಿಯೋ ಹಕ್ಕು ಮಾರಾಟವಾಗಿದೆ. ಎಷ್ಟು ಮೊತ್ತ ಎನ್ನುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಲಿಲ್ಲ ಚಿತ್ರತಂಡ. ಪೈಲ್ವಾನ್ ಸುಮಾರು 8 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪರಭಾಷೆಯಲ್ಲು ಹಾಡುಗಳು ಅದ್ಧೂರಿಯಾಗಿ ರಿಲೀಸ್
ಪೈಲ್ವಾನ್ ಸುಮಾರು 8 ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಈ ಎಲ್ಲಾ ಬಆಷೆಯಲ್ಲು ಹಾಡುಗಳನ್ನು ಅದ್ಧೂರಿಯಾಗಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ. ಸದ್ಯ ಕನ್ನಡ ವರ್ಶನ್ ಹಾಡುಗಳು 27ಕ್ಕೆ ತೆರೆಗೆ ಬರುತ್ತಿದೆ. ಆದ್ರೆ ಬೇರೆ ಬೇರೆ ಭಾಷೆಯ ಹಾಡುಗಳು ಎರಡು ಮೂರು ದಿನಗಳ ಅಂತರದಲ್ಲಿ ತೆರೆಗೆ ಬರಲಿದೆಯಂತೆ. ಈ ಬಗ್ಗೆ ಪ್ಲಾನ್ ಮಾಡಿ ದಿನಾಂಕ ನಿಗದಿಯಾದ ನಂತರ ಬಹಿರಂಗ ಪಡಿಸಲಿದೆಯಂತೆ ಚಿತ್ರತಂಡ.


Click it and Unblock the Notifications











