'ಪೈಲ್ವಾನ್' ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಐವರು ಸೂಪರ್ ಸ್ಟಾರ್ಸ್

Recommended Video

Pailwan Movie: ಸುದೀಪ್ ಪೈಲ್ವಾನ್ ಬಾಕ್ಸಿಂಗ್ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಐವರು ಸೂಪರ್ ಸ್ಟಾರ್ಸ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ್ದೆ ಹವಾ. ಪುಟ್ಟ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕವೆ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ 'ಪೈಲ್ವಾನ್' ಈಗ ಮತ್ತೊಂದು ಬಜರ್ದಸ್ತ್ ಸುದ್ದಿ ನೀಡಿದೆ.

ಹೌದು, 'ಪೈಲ್ವಾನ್' ಅಡ್ಡಾದಿಂದ ಮತ್ತೊಂದು ಪೋಸ್ಟರ್ ಬಿಡುಗಡೆಗೆ ಸಮಯ ನಿಗದಿಯಾಗಿದೆ. ಈಗಾಗಲೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಸುದೀಪ್ ಮತ್ತು ನಿರ್ದೇಶಕ ಕೃಷ್ಣ. ಆದ್ರೆ ವಿಶೇಷ ಅಂದ್ರೆ ಈ ಪೋಸ್ಟರ್ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

ಐದು ಭಾಷೆಯ ಸೂಪರ್ ಸ್ಟಾರ್ಸ್ ರಿಲೀಸ್ ಮಾಡುತ್ತಿದ್ದಾರೆ. ಚಿತ್ರತಂಡದಿಂದ ಪೋಸ್ಟರ್ ರಿಲೀಸ್ ಆಗುತ್ತಿದೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳ ಕಾತುರತೆ ಮತ್ತಷ್ಟು ಹೆಚ್ಚಾಗಿದೆ. ಕಿಚ್ಚನ ಮತ್ತೊಂದು ಪೈಲ್ವಾನ್ ಅವತಾರ ನೋಡಲು ಕಾಯುತ್ತಿದ್ದಾರೆ. ಮುಂದೆ ಓದಿ..

ಸಂಜೆ 4 ಗಂಟೆ ಬಾಕ್ಸಿಂಗ್ ಪೋಸ್ಟರ್

ಸಂಜೆ 4 ಗಂಟೆ ಬಾಕ್ಸಿಂಗ್ ಪೋಸ್ಟರ್

ಸ್ಯಾಂಡಲ್ ವುಡ್ ನ ಮಾಣಿಕ್ಯ, ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಬಾಕ್ಸಿಂಗ್ ಪೋಸ್ಟರ್ ಇಂದು ಸಂಜೆ ರಿವೀಲ್ ಆಗುತ್ತಿದೆ. ಇದು ತುಂಬಾ ವಿಶೇಷವಾದ ಪೋಸ್ಟರ್ ಆಗಿರಲಿದೆಯಂತೆ. ಇಂದು ಸಂಜೆ 4ಗಂಟೆಗೆ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಸ್ವತಹ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. ಕಿಚ್ಚನ ಹೊಸ ಲುಕ್ ಹೇಗಿರಲಿದೆ ಎಂದು ನೋಡಲು ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ ಸುದೀಪಿಯನ್ಸ್.

ಐದು ಭಾಷೆಯಲ್ಲಿ ಪೋಸ್ಟರ್ ರಿಲೀಸ್

ವಿಶೇಷ ಅಂದ್ರೆ 'ಪೈಲ್ವಾನ್' ಸಿನಿಮಾ 8 ಭಾಷೆಯಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಐದು ಭಾಷೆಯ ಪೋಸ್ಟರ್ಸ್ ರಿಲೀಸ್ ಮಾಡಲಾಗುತ್ತಿದೆ. ಈ ಐದು ಭಾಷೆಯ ಬಾಕ್ಸಿಂಗ್ ಪೋಸ್ಟರ್ಸ್ ಅನ್ನು ಐದು ಭಾಷೆಯ ಸೂಪರ್ ಸ್ಟಾರ್ಸ್ ರಿಲೀಸ್ ಮಾಡುತ್ತಿರುವುದು ಮತ್ತೊಂದು ವಿಶೇಷ.

ಹಿಂದಿ ಪೋಸ್ಟರ್ ಸುನೀಲ್ ಶೆಟ್ಟಿ

ಹಿಂದಿ ಪೋಸ್ಟರ್ ಸುನೀಲ್ ಶೆಟ್ಟಿ

'ಪೈಲ್ವಾನ್' ಸಿನಿಮಾ ಹಿಂದಿಯಲ್ಲು ರಿಲೀಸ್ ಆಗುತ್ತಿದೆ. ಇಂದು ಸಂಜೆ ರಿಲೀಸ್ ಆಗುತ್ತಿರುವ ಹಿಂದಿ ಪೋಸ್ಟರ್ ಅನ್ನು ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ರಿಲೀಸ್ ಮಾಡುತ್ತಿದ್ದಾರೆ. ಸುನೀಲ್ ಶೆಟ್ಟಿ 'ಪೈಲ್ವಾನ್' ಚಿತ್ರದಲ್ಲಿ ಸರ್ಕಾರ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುನೀಲ್ ಶೆಟ್ಟಿ ಅಭಿನಯದ ಮೊದಲ ಕನ್ನಡ ಸಿನಿಮಾ.

ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ

ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ

'ಪೈಲ್ವಾನ್' ತೆಲುಗು ಪೋಸ್ಟರ್ ಅನ್ನು ಮೆಗಾ ಸ್ಟಾರ್ ಚಿರಂಜೀವಿ ರಿಲೀಸ್ ಮಾಡುತ್ತಿದ್ದಾರೆ. ಸುದೀಪ್ ಅವರ 'ಪೈಲ್ವಾನ್' ಅವತಾರ ನೋಡಿ ಸಂತಸ ಪಟ್ಟಿರುವ ಮೆಗಾ ಸ್ಟಾರ್ ಚಿತ್ರದ ತೆಲುಗು ಪೋಸ್ಟರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ. ಚಿರಂಜೀವಿ ಅಭಿನಯದ 'ಸೈರಾ' ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ತಮಿಳು ಪೋಸ್ಟರ್ ವಿಜಯ್ ಸೇತುಪತಿ

ತಮಿಳು ಪೋಸ್ಟರ್ ವಿಜಯ್ ಸೇತುಪತಿ

ಚಿತ್ರದ ತಮಿಳು ಪೋಸ್ಟರ್ ಅನ್ನು ವಿಜಯ್ ಸೇತುಪತಿ ರಿಲೀಸ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ವಿಜಯ್ ಸೇತುಪತಿ ಕನ್ನಡ ಸ್ಟಾರ್ ನಟನ ಚಿತ್ರದ ಪೋಸ್ಟರ್ ಒಂದನ್ನು ರಿಲೀಸ್ ಮಾಡುತ್ತಿರುವುದು ವಿಶೇಷ. 'ಸೈರಾ' ನರಸಿಂಹ ರೆಡ್ಡಿ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ಅಭಿನಯಿಸಿದ್ದಾರೆ.

ಮಲಯಾಳಂನಲ್ಲಿ ಮೋಹನ್ ಲಾಲ್

ಮಲಯಾಳಂನಲ್ಲಿ ಮೋಹನ್ ಲಾಲ್

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.

ಮೋಹನ್ ಲಾಲ್ ಮತ್ತು ಸುದೀಪ್ ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ಅಲ್ಲದೆ ಮೋಹನ್ ಲಾಲ್ ಸಿನಿಮಾದಲ್ಲಿ ಸುದೀಪ್ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದ್ರೀಗ ಸುದೀಪ್ ಅವರ ಬಾಕ್ಸಿಂಗ್ ಪೋಸ್ಟರ್ ಅನ್ನು ರಿಲೀಸ್ ಮಾಡುತ್ತಿದ್ದಾರೆ.

ಕನ್ನಡ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಕಿಚ್ಚ

ಕನ್ನಡ ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಕಿಚ್ಚ

ಇಂದು ಸಂಜೆ ರಿಲೀಸ್ ಆಗುತ್ತಿರುವ 'ಪೈಲ್ವಾನ್' ಬಾಕ್ಸಿಂಗ್ ಕನ್ನಡ ಪೋಸ್ಟರ್ ಅನ್ನು ಸ್ವತಹ ಕಿಚ್ಚ ಸುದೀಪ್ ರಿಲೀಸ್ ಮಾಡುತ್ತಿದ್ದಾರೆ. ಮೊದಲ ಬಾರಿಗೆ ಸುದೀಪ್ ಈ ಪರಿ ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚಿದ್ದಾರೆ. ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ 'ಪೈಲ್ವಾನ್' ಚಿತ್ರಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಗಸ್ಟ್ ನಲ್ಲಿ ತೆರೆಗೆ ಬರಲಿದೆ 'ಪೈಲ್ವಾನ್'

ಆಗಸ್ಟ್ ನಲ್ಲಿ ತೆರೆಗೆ ಬರಲಿದೆ 'ಪೈಲ್ವಾನ್'

ಬಹು ನಿರೀಕ್ಷೆಯ 'ಪೈಲ್ವಾನ್' ಆಗಸ್ಟ್ ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಅಂದ್ಹಾಗೆ ಆಗಸ್ಟ್ 8 ವರಮಹಾಲಕ್ಷ್ಮಿ ಹಬ್ಬದಿಂದ 'ಪೈಲ್ವಾನ್' ಅಬ್ಬರ ಶುರುವಾಗಲಿದೆ. ಹೆಬ್ಬುಲಿ ಚಿತ್ರ ನಿರ್ದೇಶನ ಮಾಡಿದ್ದ ನಿರ್ದೇಶಕ ಕೃಷ್ಣ 'ಪೈಲ್ವಾನ್' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಆರ್ ಆರ್ ಆರ್ ಮೋಷನ್ ಪಿಕ್ಟರ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬಂದಿದೆ. ವಿಶೇಷ ಅಂದ್ರೆ ಸಿನಿಮಾ 8 ಭಾಷೆಯಲ್ಲಿ ತೆರೆಗೆ ಬರುತ್ತಿದೆ.

More from Filmibeat

English summary
Kannada actor Sudeep starrer 'Pailwan' movie boxing poster released by five super stars.This boxing poster release in five language.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X