'ಪೈಲ್ವಾನ್' ರಿಲೀಸ್ ಡೇಟ್ ಮುಂದಕ್ಕೆ? ಬಿಡುಗಡೆ ದಿನಾಂಕದಲ್ಲಿದೆ ಇಷ್ಟೊಂದು ವಿಶೇಷ

Recommended Video

Pailvan Movie: ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ ಪೈಲ್ವಾನ್' ಸಿನಿಮಾ ರಿಲೀಸ್ ಡೇಟ್ | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ ರಿಲೀಸ್ ಡೇಟ್ ಅಭಿಮಾನಿಗಳಲ್ಲಿ ಬಾರಿ ಕುತೂಹಲ ಮೂಡಿಸಿದೆ. ಈಗಾಗಲೆ ಹೇಳಿದ ಹಾಗೆ ಚಿತ್ರ ಆಗಸ್ಟ್ 9ಕ್ಕೆ ತೆರೆಗೆ ಬರಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿತ್ತು. ವರಮಹಾಲಕ್ಷ್ಮಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ದೊಡ್ಡ ಹಬ್ಬ ಆಗಲಿದೆ ಅಂತ ಹೇಳಲಾಗುತ್ತಿತ್ತು.

ಆದ್ರೀಗ ಮೂಲಗಳ ಪ್ರಕಾರ 'ಪೈಲ್ವಾನ್' ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆಗಸ್ಟ್ 9ಕ್ಕೆ ಎರಡು ದೊಡ್ಡ ಸಿನಿಮಾಗಳಾದ ಕುರುಕ್ಷೇತ್ರ ಮತ್ತು ಪೈಲ್ವಾನ್ ಒಟ್ಟಿಗೆ ಎಂಟ್ರಿ ಕೊಡಲಿವೆ, ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗಲಿದೆ ಎಂದು ಹೇಳಲಾಗುತ್ತಿತ್ತು.

ಆದ್ರೆ ಮೂಲಗಳ ಪ್ರಕಾರ ಕುರುಕ್ಷೇತ್ರ ಸಿನಿಮಾ ಕೂಡ ವರಮಹಾಲಕ್ಷ್ಮಿ ಹಬ್ಬಕ್ಕು ಮೊದಲೆ ರಿಲೀಸ್ ಆಗುತ್ತಿದೆಯಂತೆ. ಈಗ ಪೈಲ್ವಾನ್ ಕೂಡ ಮುಂದಕ್ಕೆ ಹೋಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವಿಶೇಷ ಅಂದ್ರೆ 'ಪೈಲ್ವಾನ್' ಬಿಡುಗಡೆಯಾಗುತ್ತಿರುವ ದಿನಾಂಕ ತುಂಬಾ ವಿಶೇಷ ವಾಗಿದೆ. 'ಪೈಲ್ವಾನ್' ಎಂಟ್ರಿ ಸಮಯ ಹಲವಾರು ವಿಶೇಷತೆಗಳಿಂದ ಕೂಡಿದೆ.

ಸುದೀಪ್ ಹುಟ್ಟುಹಬ್ಬಕ್ಕೆ 'ಪೈಲ್ವಾನ್'?

ಸುದೀಪ್ ಹುಟ್ಟುಹಬ್ಬಕ್ಕೆ 'ಪೈಲ್ವಾನ್'?

'ಪೈಲ್ವಾನ್' ಸಿನಿಮಾಗಾಗಿ ಕಾದು ಕುಳಿತಿರುವ ಅಭಿಮಾನಿಗಳಿಗೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ ಎನ್ನುವ ವಿಷಯ ನಿರಾಸೆ ಮೂಡಿಸಿದ್ರು, ಸಿನಿಮಾ ಸುದೀಪ್ ಹುಟ್ಟುಹಬ್ಬದ ಸಮಯದಲ್ಲಿ ತೆರೆಗೆ ಬರುತ್ತಿದೆ ಎನ್ನುವ ವಿಚಾರ ಸಂತಸ ತರಿಸುವುದಂತು ಪಕ್ಕ. ಈ ಮೂಲಕ ಕಿಚ್ಚನ ಹುಟ್ಟಹಬ್ಬಕ್ಕೆ ಅಭಿಮಾನಿಗಳಿಗೆ ದೊಡ್ಡ ಗಿಫ್ಟ್ ಸಿಗಲಿದೆ. ಅಂದ್ಹಾಗೆ ಸುದೀಪ್ ಹುಟ್ಟುಹಬ್ಬ ಸೆಪ್ಟಂಬರ್ 2 ಆದ್ರೆ ಆಗಸ್ಟ್ 29ರಂದು ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಹುಟ್ಟುಹಬ್ಬದ ದಿನ ಗಣೇಶ ಚತುರ್ಥಿ

ಹುಟ್ಟುಹಬ್ಬದ ದಿನ ಗಣೇಶ ಚತುರ್ಥಿ

ಈ ಬಾರಿಯ ಸುದೀಪ್ ಹುಟ್ಟುಹಬ್ಬದ ವಿಶೇಷ ಅಂದ್ರೆ ಗಣೇಶ ಚತುರ್ಥಿ ದಿನ ಬಂದಿದೆ. ಹಬ್ಬದ ಸಂಭ್ರಮ ಒಂದೆಡೆ ಆದ್ರೆ, ಮತ್ತೊಂದೆಡೆ ಕಿಚ್ಚನ ಅಭಿಮಾನಿಗಳಿಗೆ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮ. ಇದೆರಡರ ಜೊತೆಗೆ ಪೈಲ್ವಾನ್ ಸಿನಿಮಾ ಬೇರೆ ರಿಲೀಸ್ ಆಗುತ್ತಿದೆ. ಅಭಿಮಾನಿಗಳ ಸಂಭ್ರಮ ಕೇಳಬೇಕಾ. ಈ ಮೂರು ಹಬ್ಬವನ್ನು ಒಟ್ಟಿಗೆ ಎಂಜಾಯ್ ಮಾಡುವ ಘಳಿಗೆ ಸುದೀಪ್ ಅಭಿಮಾನಿಗಳ ಪಾಲಾಗಿದೆ.

2,500 ಚಿತ್ರಮಂದಿರಗಳಲ್ಲಿ 'ಪೈಲ್ವಾನ್'?

2,500 ಚಿತ್ರಮಂದಿರಗಳಲ್ಲಿ 'ಪೈಲ್ವಾನ್'?

ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ದೇಶದಾದ್ಯತ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅವರ 'ಪೈಲ್ವಾನ್' ಸಿನಿಮಾ ಬರೋಬ್ಬರಿ 2,500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಅಂದ್ಮೇಲೆ ದೇಶ-ವಿದೇಶದಲ್ಲಿ 'ಪೈಲ್ವಾನ್' ಅಬ್ಬರ ಹೆಚ್ಚಾಗುವುದರಲ್ಲಿ ಯಾವುದೆ ಅನುಮಾನವಿಲ್ಲ. 'ಕೆಜಿಎಫ್' ಚಿತ್ರದ ಮಾದರಿಯಲ್ಲೆ ದೊಡ್ಡ ಮಟ್ಟಕ್ಕೆ ಚಿತ್ರವನ್ನು ತೆರೆಗೆ ತರಲು ತಯಾರಿ ಮಾಡುತ್ತಿದೆ ಚಿತ್ರತಂಡ.

ತೆಲುಗು ವಿತರಣೆ ಹಕ್ಕು ಮಾರಾಟ

ತೆಲುಗು ವಿತರಣೆ ಹಕ್ಕು ಮಾರಾಟ

'ಪೈಲ್ವಾನ್' ಚಿತ್ರದ ತೆಲುಗು ವಿತರಣೆ ಹಕ್ಕು ಈಗಾಗಲೆ ಮಾರಾಟ ವಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆ 'ಪೈಲ್ವಾನ್' ಚಿತ್ರದ ವಿತರಣೆ ಹಕ್ಕನ್ನು ಕೊಂಡುಕೊಂಡಿದ್ದಾರಂತೆ. 'ವಾರಾಹಿ ಚಲನ ಚಿತ್ರಂ' ಸಂಸ್ಥೆ 'ಪೈಲ್ವಾನ್' ಚಿತ್ರದ ತೆಲುಗು ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ವಿಶೇಷ ಅಂದ್ರೆ ಈ ಹಿಂದೆ 'ಕೆಜಿಎಫ್' ಚಿತ್ರದ ವಿತರಣೆ ಹಕ್ಕನ್ನು ಇದೆ ಸಂಸ್ಥೆ ಕೊಂಡುಕೊಂಡಿತ್ತು.

ಆಡಿಯೋ ರಿಲೀಸ್ ಗೆ ತಯಾರಿ

ಆಡಿಯೋ ರಿಲೀಸ್ ಗೆ ತಯಾರಿ

ಈಗಾಗಲೆ ಟೀಸರ್ ಮತ್ತು ಪೋಸ್ಟರ್ ಗಳ ಮೂಲಕ ಸದ್ದು ಮಾಡುತ್ತಿರುವ ಪೈಲ್ವಾನ್ ಚಿತ್ರದ ಆಡಿಯೋ ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂಲಗಳ ಪ್ರಕಾರ ಚಿತ್ರದ ಆಡಿಯೋ ಮುಂದಿನ ವಾರ ತೆರೆಗೆ ಬರುವ ಸಾಧ್ಯತೆ ಇದೆ. ಈಗಾಗಲೆ ದೊಡ್ಡ ಆಡಿಯೋ ಕಂಪನಿ ಜೊತೆ ಮಾತುಕತೆ ಕೂಡ ಆಗಿದೆಯಂತೆ.

More from Filmibeat

English summary
Kannada actor Kiccha Sudeep starrer Pailwan release date postponed. Pailwan to be released for Sudeep's birthday. Pailwan all set to be in August 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X