'ಸಂಕ್ರಾಂತಿ'ಗೆ ಟೀಸರ್, 'ಯುಗಾದಿ'ಗೆ ಪಿಕ್ಚರ್: ಇದು 'ಪೈಲ್ವಾನ್' ಪ್ಲಾನ್.!
Recommended Video

ಕಿಚ್ಚನ ಅಭಿಮಾನಿಗಳಿಗೆ ಸಿಹಿ ಸುದ್ದಿ..! | FILMIBEAT KANNADA
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಟೀಸರ್ ಮೊನ್ನೆಯಷ್ಟೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ 'ಪೈಲ್ವಾನ್' ಟೀಸರ್ ನ ವೀಕ್ಷಿಸಿ ಪರಭಾಷೆಯ ತಾರೆಯರು ಉಘೇ ಉಘೇ ಎಂದಿದ್ದರು.
'ಪೈಲ್ವಾನ್' ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಾಗಿರುವಾಗಲೇ, ಚಿತ್ರತಂಡದಿಂದ ಒಂದು ಸಿಹಿ ಸುದ್ದಿ ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ, ಯುಗಾದಿ ಹಬ್ಬದ ಶುಭ ಸಂದರ್ಭದಂದು 'ಪೈಲ್ವಾನ್' ಚಿತ್ರ ತೆರೆಕಾಣುವ ಸಾಧ್ಯತೆ ಇದೆ.
ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರದ ಶೂಟಿಂಗ್ ಈಗಾಗಲೇ ಬಹುತೇಕ ಕಂಪ್ಲೀಟ್ ಆಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಸದ್ಯದಲ್ಲೇ ಪೂರ್ಣಗೊಳ್ಳಲಿದೆ.

ಏಳು ಭಾಷೆಗಳಲ್ಲಿ 'ಪೈಲ್ವಾನ್' ರೆಡಿ ಆಗುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ತೆರೆಗೆ ತರಲು ಕೃಷ್ಣ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. 'ಪೈಲ್ವಾನ್' ಬಗ್ಗೆ ನಿರೀಕ್ಷೆ ಹೆಚ್ಚಾಗಿರುವ ಕಾರಣ, ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯುವುದು ಕನ್ಫರ್ಮ್.
English summary
Kannada Actor Kiccha Sudeep starrer 'Phailwan' to release in April 2019.


Click it and Unblock the Notifications