'ಫ್ಯಾಂಟಮ್' ಚಿತ್ರದ ಸುದೀಪ್ ಪಾತ್ರ ಬಹಿರಂಗ: ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಾ 'ಫ್ಯಾಂಟಮ್'?
ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಲಾಕ್ ಡೌನ್ ಬಳಿಕ ಸಿನಿಮಾ ಶೂಟಿಂಗ್ ಪ್ರಾರಂಭ ಮಾಡಿದ್ದ ಸಿನಿಮಾತಂಡ ಇದೀಗ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ಸಿನಿಮಾ ಪ್ರಾರಂಭವಾದಗಿನಿಂದಲೂ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಅದ್ದೂರಿ ಸೆಟ್ ನಿರ್ಮಾಣ ಮಾಡಿ, ಫ್ಯಾಂಟಮ್ ಲೋಕವನ್ನು ಸೃಷ್ಟಿಸಲಾಗಿದೆ. ಆಗಸ್ಟ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಸುಮಾರು 3 ತಿಂಗಳ ಸತತ ಶೂಟಿಂಗ್ ಮಾಡಿ ಇದೀಗ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಚಿತ್ರದಲ್ಲಿ ಸುದೀಪ್ ವಿಕ್ರಾಂತ್ ರೋಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಕ್ರಾಂತ್ ರೋಣ ಯಾರು ಎನ್ನುವುದು ಈಗ ಬಹಿರಂಗವಾಗಿದೆ. ಮುಂದೆ ಓದಿ...

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ಮಿಂಚಿಂಗ್
ಸುದೀಪ್ ಸಿನಿಮಾದಲ್ಲಿ ವಿಕ್ರಾಂತ್ ರೋಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಿಕ್ರಾಂತ್ ರೋಣ ಯಾರು ಎನ್ನುವುದು ಈಗ ಬಹಿರಂಗವಾಗಿದೆ. ಹೌದು ವಿಕ್ರಾಂತ್ ರೋಣ ಪೊಲೀಸ್ ಅಧಿಕಾರಿ ಎನ್ನುವ ವಿಚಾರ ಈಗ ಬಹಿರಂಗವಾಗಿದೆ. ಸುದೀಪ್ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಅನೇಕ ಸಿನಿಮಾಗಳಲ್ಲಿ ಪೊಲೀಸ್ ಆಗಿ ಮಿಂಚಿರುವ ಸುದೀಪ್
ಈಗಾಗಲೇ ಹುಬ್ಬಳ್ಳಿ, ವೀರ ಮದಕರಿ, ಕೆಂಪೇಗೌಡ ಸಿನಿಮಾಗಳಲ್ಲಿ ಸುದೀಪ್ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ. ಫ್ಯಾಂಟಮ್ ಸಿನಿಮಾದಲ್ಲೂ ಸುದೀಪ್ ಪೊಲೀಸ್ ಎನ್ನುವ ವಿಚಾರ ಬಹಿರಂಗವಾಗಿದೆ. ಖಡಕ್ ಲುಕ್, ಗೆಟಪ್ ನೋಡಿದ್ರೆ ಸುದೀಪ್ ಪೊಲೀಸ್ ಅಧಿಕಾರಿ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಪ್ಯಾನ್ ಇಂಡಿಯಾ ರಿಲೀಸ್ ಸಾಧ್ಯತೆ
ಇನ್ನೂ ವಿಶೇಷ ಎಂದರೆ ಈ ಸಿನಿಮಾವನ್ನು ಪ್ಯಾನ್ ಇಂಡಿಯಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆಯಂತೆ. ಕನ್ನಡದ ಜೊತೆಗೆ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ತೆರೆಗೆ ಬರುವ ಸಾಧ್ಯತೆ ಇದೆ. ಅಂದ್ಮೇಲೆ ಸುದೀಪ್ ಪೈಲ್ವಾನ್ ಸಿನಿಮಾದ ಬಳಿಕ ಮತ್ತೆ ಫ್ಯಾಂಟಮ್ ಮೂಲಕ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಲಿದ್ದಾರೆ.

ಸವಾಲಿನ ದೃಶ್ಯ ಚಿತ್ರೀಕರಣ
ಫ್ಯಾಂಟಮ್ ಸದ್ಯ ಕೊನೆಯ ಹಂತದ ಚಿತ್ರೀಕಣ ಮಾಡುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರೇ ಟ್ವೀಟ್ ಮಾಡಿ ಬಹಿರಂಗ ಪಡಿಸಿದ್ದಾರೆ. 'ಫ್ಯಾಂಟಮ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ತುಂಬಾ ಸವಾಲಿನ ದೃಶ್ಯ ಚಿತ್ರೀಕರಣ ಮಾಡಬೇಕಿದೆ. ನಾವು ದೃಶ್ಯೀಕರಿಸಿದ ರೀತಿಯಲ್ಲಿ ಸೆರೆಹಿಡಿಯುವುದು ಮತ್ತೊಂದು ಟಾಸ್ಕ್ ಆಗಿದೆ' ಎಂದು ಸುದೀಪ್ ಹೇಳಿದ್ದಾರೆ.
Recommended Video

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ರಿಲೀಸ್?
ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಚಿತ್ರೀಕರಣ ಸದ್ಯದಲ್ಲೇ ಮುಕ್ತಾಯವಾಗಲಿದೆ. ಬಳಿಕ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಬ್ಯುಸಿಯಾಗಲಿದೆ. ಮೂಲಗಳ ಪ್ರಕಾರ ಸಿನಿಮಾ ಮುಂದಿನ ವರ್ಷ 2021 ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಪ್ಲಾನ್ ಮಾಡಿದೆಯಂತೆ ಸಿನಿಮಾತಂಡ.


Click it and Unblock the Notifications











