‘ಫ್ಯಾಂಟಮ್’ಗಾಗಿ ಹೈದರಾಬಾದ್ ಗೆ ಹೊರಟ ಸುದೀಪ್: ಕಿಚ್ಚನಿಗೆ ಜೊತೆಯಾಗ್ತಾರಾ ತೆಲುಗು ಸುಂದರಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸದ್ಯ 'ಕೋಟಿಗೊಬ್ಬ-3' ಸಿನಿಮಾ ಮುಗಿಸಿ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸುದೀಪ್ ಅಭಿನಯದ ಬಹುನಿರೀಕ್ಷೆಯ 'ಫ್ಯಾಂಟಮ್' ಸಿನಿಮಾದ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಇದಾಗಿದೆ.
Recommended Video
'ಫ್ಯಾಂಟಮ್' ಸಿನಿಮಾ ಪ್ರಿ-ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿ ಅನೇಕ ದಿನಗಳೆ ಆಗಿತ್ತು. ಆದರೆ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಂಭವಾಗಿತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ಇಂದಿನಿಂದ ಚಿತ್ರೀಕರಣ ಪ್ರಾರಂಭಿಸಿರುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಮುಂದೆ ಓದಿ..

ಚಿತ್ರದ ಬಗ್ಗೆ ಅನೂಪ್ ಭಂಡಾರಿ ಅಪ್ ಡೇಟ್
ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ ಇವತ್ತಿನಿಂದ ಚಿತ್ರೀಕರಣ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಅಂದ್ಹಾಗೆ ಈಗಾಗಲೆ ಫೋಟೋಶೂಟ್ ಮತ್ತು ಟೀಸರ್ ಶೂಟ್ ಮಾಡಿಸಲಾಗಿದೆಯಂತೆ. ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಫ್ಯಾಂಟಮ್ ಸಿನಿಮಾದ ಫೋಟೋಶೂಟ್ ಮತ್ತು ಪ್ರೋಮ್ ಶೂಟ್ ತುಂಬಾ ವಿಭಿನ್ನವಾಗಿರಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.

ಗನ್ ಹಿಡಿದು ಬಂದ ಸುದೀಪ್
ನಿರ್ದೇಶಕ ಅನೂಪ್ ಭಂಡಾರಿ ಚಿತ್ರದ ಬಗ್ಗೆ ಅಪ್ ಡೇಟ್ ನೀಡುತ್ತ, ಕಿಚ್ಚನ ಒಂದು ಲುಕ್ ಕೂಡ ರಿವೀಲ್ ಮಾಡಿದ್ದಾರೆ. ಈ ಪೋಸ್ಟರ್ ನಲ್ಲಿ ಸುದೀಪ್ ಗನ್ ಹಿಡಿದು ಖಡಕ್ ಲುಕ್ ನಲ್ಲಿ ಪೋಸ್ ನೀಡಿದ್ದಾರೆ.

ಹೈದರಾಬಾದ್ ನಲ್ಲಿ ಚಿತ್ರೀಕರಣ
‘ಫ್ಯಾಂಟಮ್' ಮೊದಲ ಶೆಡ್ಯೂಲ್ ಹೈದರಾಬಾದ್ ನಲ್ಲಿ ಪ್ರಾರಂಭವಾಗಲಿದೆ. ಈಗಾಗಲೆ ಕಿಚ್ಚ ಅಂಡ್ ಟೀಂ ಹೈದರಾಬಾದ್ ನಲ್ಲಿ ಬೀಡುಬಿಟ್ಟಿದ್ದು ಮೊದಲ ದಿನದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿ ಮತ್ತೆ ಬೆಂಗಳೂರಿನಲ್ಲಿ ಎರಡನೆ ಹಂತದ ಚಿತ್ರೀಕರಣ ಮಾಡಲಿದೆಯಂತೆ ಫ್ಯಾಂಟಮ್ ಟೀಂ.

ಕಿಚ್ಚನಿಗೆ ಯಾರಾಗ್ತಾರೆ ನಾಯಕಿ?
ಇನ್ನು ವಿಶೇಷ ಅಂದರೆ ಚಿತ್ರದಲ್ಲಿ ಸುದೀಪ್ ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ. ಕಿಚ್ಚನ ಜೊತೆ ಕನ್ನಡದ ನಟಿ ರೋಮ್ಯಾನ್ಸ್ ಮಾಡುತ್ತಾರಾ ಅಥವಾ ಪರಭಾಷೆಯ ಸುಂದರಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

ಸಮಂತಾ ಅಕ್ಕಿನೇನಿ ಅಭಿನಯಿಸುವ ಸಾಧ್ಯತೆ
ಈಗಾಗಲೆ ಬರುತ್ತಿರುವ ಸುದ್ದಿಯ ಪ್ರಕಾರ ಕಿಚ್ಚನ ಜೊತೆ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮೊದಲು ಈಗ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಈಗ ಮತ್ತೆ ಒಂದಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಒಂದು ವೇಳೆ ಸಮಂತಾ ಕಿಚ್ಚನಿಗಿ ಜೋಡಿಯಾದರೆ ಎರಡನೆ ಬಾರಿಗೆ ಇಬ್ಬರು ಸ್ಕ್ರೀನ್ ಶೇರ್ ಮಾಡುತ್ತಿರುವುದ್ದಲ್ಲದೆ, ಮೊದಲ ಬಾರಿಗೆ ಸಮಂತಾ ಕನ್ನಡ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.


Click it and Unblock the Notifications











