ಕೊರೊನಾ ವೈರಸ್ ಹಾವಳಿಯ ನಡುವೆಯೂ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾದ ನಟ ಸುದೀಪ್
ಕೊರೊನಾ ವೈರಸ್ ಹಾವಳಿಯ ಪರಿಣಾಮ ಸುಮಾರು 2 ತಿಂಗಳಿಂದ ಚಿತ್ರೀಕರಣ ಬಂದ್ ಆಗಿದೆ. ಸದ್ಯ ಲಾಕ್ ಡೌನ್ ಸಡಳಿಕೆಯಾಗಿದ್ದು, ಕೆಲವು ರಾಜ್ಯಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. ಆದರೂ ಇದುವರೆಗೂ ಯಾವ ಸಿನಿಮಾತಂಡವು ಚಿತ್ರೀಕರಣಕ್ಕೆ ಇಳಿದಿಲ್ಲ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಪರಿಣಾಮ ಚಿತ್ರೀಕರಣ ಪ್ರಾರಂಭಿಸಲು ಭಯಪಡುತ್ತಿದ್ದಾರೆ.
Recommended Video
ಆದರೆ ಕನ್ನಡದ ಫ್ಯಾಂಟಮ್ ಸಿನಿಮಾ ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ. ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷೆಯ ಫ್ಯಾಂಟಮ್ ಸಿನಿಮಾ ಚಿತ್ರೀಕರಣಕ್ಕೆ ಹೊರಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದೆ ತಿಂಗಳು 21ಕ್ಕೆ ಚಿತ್ರತಂಡ ಹೈದರಾಬಾದ್ ಗೆ ಪ್ರಯಾಣ ಬೆಳೆಸಲಿದೆ. ಮುಂದೆ ಓದಿ..

ಕೊರೊನಾ ಹಾವಳಿಯ ನಡುವೆಯೂ ಚಿತ್ರೀಕರಣ ಪ್ರಾರಂಭ
ಕೊರೊನಾ ವೈರಸ್ ಹಾವಳಿಯ ನಡುವೆಯೂ ಚಿತ್ರೀಕರಣ ಪ್ರಾರಂಭಿಸಿದ ಮೊದಲ ಕನ್ನಡ ಸಿನಿಮಾ ಇದಾಗಲಿದೆ. ಸರ್ಕಾರದ ಅನುಮತಿ ಪಡೆದು ಚಿತ್ರತಂಡ ಚಿತ್ರೀಕರಣಕ್ಕೆ ಹೊರಟಿದೆ. ಲಾಕ್ ಡೌನ್ ಗೂ ಮೊದಲು ಸಿನಿಮಾತಂಡ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ ಹಾಕಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿತ್ತು.

ಒಂದು ವಾರ ಕ್ವಾರಂಟೈನ್ ನಲ್ಲಿ ಚಿತ್ರತಂಡ
ಜೂನ್ 15ರಿಂದ ಹೈದರಾಬಾದ್ ನಲ್ಲಿ ಸೆಟ್ ಹಾಕಲಿದ್ದು, ಜುಲೈನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾತಂಡ ಇದೆ ತಿಂಗಳು 21ಕ್ಕೆ ಹೈದರಾಬಾದ್ ಗೆ ಹೋಗಲಿದೆ. ಹೈದರಾಬಾದ್ ಗೆ ತೆರಳಿದ ನಂತರ ಅಲ್ಲಿ ಒಂದು ವಾರ ಸ್ವಯಂ ಕ್ವಾರಂಟೈನ್ ನಲ್ಲಿ ಇರಲಿದ್ದಾರಂತೆ. ಆ ನಂತರ ಚಿತ್ರೀಕರಣ ಪ್ರಾರಂಭಿಸಲಿದೆ ಚಿತ್ರತಂಡ.

ಚಿತ್ರೀಕರಣ ಸ್ಥಳದಲ್ಲಿ ವೈದ್ಯರು
ಚಿತ್ರೀಕರಣಕ್ಕೂ ಮೊದಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಸಿನಿಮಾತಂಡ. ಚಿತ್ರೀಕರಣ ಸೆಟ್ ನಲ್ಲಿ ಕಡಿಮೆ ಜನ ಇರುವಂತೆ ಚಿತ್ರತಂಡ ನೋಡಿಕೊಳ್ಳಬೇಕಿದೆ. ಜೊತೆಗೆ ಚಿತ್ರೀಕರಣ ಸಮಯದಲ್ಲಿ ಒಬ್ಬ ವೈದ್ಯರು, ಮೂರು ಜನ ನರ್ಸ್ ಮತ್ತು ಒಂದು ಅಂಬುಲೆನ್ಸ್ ಕಡ್ಡಾಯವಾಗಿ ಇರುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆಯಂತೆ. ಸರ್ಕಾರದ ನಿಯಮದಂತೆ ಚಿತ್ರೀಕರಣ ನಡೆಯಲಿದೆಯಂತೆ.

ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ
ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾಗೆ ನಿರ್ದೇಶಕ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಬಾರಿಗೆ ಸುದೀಪ್ ಮತ್ತು ಅನೂಪ್ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ. ಸುದೀಪ್ ಗೆ ನಾಯಕಿಯಾಗಿ ನಟಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ನಿರೂಪ್ ಭಂಡಾರಿ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











