ಕೋಟಿಗೊಬ್ಬ-3, ಬಿಗ್ ಬಾಸ್-7 ಮುಗಿಸಿ ಫ್ಯಾಂಟಮ್ ಗೆ ಎಂಟ್ರಿ ಕೊಟ್ಟ ಸುದೀಪ್

Recommended Video

ಬಿಗ್ ಬಾಸ್, ಮುಗೀತು, ಕೋಟಿಗೊಬ್ಬ 3 ಮುಗೀತು ಮುಂದೇನು..? | Kiccha Sudeep | Biggboss | BBK7 | Phantom

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾಗಳ ಜೊತೆಗೆ ಕಿರುತರೆಯಲ್ಲೂ ಬ್ಯುಸಿಯಾಗಿದ್ದರು. ಸದ್ಯ ಕಿಚ್ಚ ಬಹುನಿರೀಕ್ಷೆಯ ಕೋಟಿಗೊಬ್ಬ-3 ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಸೀಸನ್-7 ಕೂಡ ಮುಗಿದಿದೆ. ಸದ್ಯ ಕೊಂಚ ಬ್ರೇಕ್ ಪಡೆದಿರುವ ಸುದೀಪ್ ಮುಂದಿನ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಹೌದು, ಸುದೀಪ್ ಫ್ಯಾಂಟಮ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೆ ಚಿತ್ರದ ಪ್ರಿಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆ. ಅಂದ್ಹಾಗೆ ಫ್ಯಾಂಟಮ್ ನಿರ್ದೇಶಕ ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಮೊದಲ ಬಾರಿಗೆ ಅನೂಪ್ ಅಭಿನಯ ಚಕ್ರವರ್ತಿಗೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಬಹುನಿರೀಕ್ಷೆಯ ಚಿತ್ರದ ಚಿತ್ರೀಕರಣ ಮುಂದಿನ ವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೆ ಚಿತ್ರಕ್ಕೆ ರಂಗಿತರಂಗ ಖ್ಯಾತಿಯ ನಟ ನಿರೂಪ್ ಭಂಡಾರಿ ಕೂಡ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಉಳಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಚಿತ್ರತಂಡ ಇನ್ನು ರಿವೀಲ್ ಮಾಡಿಲ್ಲ.

Sudeep Starrer Phantom Movie Shooting Will Start From Second Week February

ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸುದೀಪ್ ಗೆ ನಾಯಕಿಯಾಗಿ ತೆಲುಗಿನ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೆ ಸಮಂತಾ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆಯಂತೆ. ಆದರೆ ಸಮಂತಾ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆಯಾ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಒಂದು ವೇಳೆ ಫ್ಯಾಂಟಮ್ ನಲ್ಲಿ ಸುದೀಪ್ ಗೆ ನಾಯಕಿಯಾದರೆ ಮೊದಲ ಬಾರಿಗೆ ಸಮಂತಾ ಕನ್ನಡ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಸಾಕಷ್ಟು ವಿಚಾರಗಳಲ್ಲಿ ನಿರೀಕ್ಷೆ ಹೆಚ್ಚಿಸಿರುವ ಫ್ಯಾಂಟಮ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Kannada Actor Sudeep starrer Phantom movie shooting will start from second week February.
Read more about: sudeep ಸುದೀಪ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X