For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್‌ ರೋಣ' ಅಡ್ವಾನ್ಸ್ ಬುಕ್ಕಿಂಗ್‌: 2Dಗಿಂತ 3Dಗೆ ಒಳ್ಳೆ ರೆಸ್ಪಾನ್ಸ್?

  |

  ಬಾಕ್ಸಾಫೀಸ್‌ನಲ್ಲಿ'ವಿಕ್ರಾಂತ್‌ ರೋಣ' ಸುದೀಪ್ ಆರ್ಭಟಕ್ಕೆ ಕ್ಷಣಗಣನೆ ಶುರುವಾಗಿದೆ. ಸುದೀಪಿಯನ್ಸ್ ಫಸ್ಟ್‌ ಡೇ ಫಸ್ಟ್‌ ಶೋ ಸಿನಿಮಾ ನೋಡೋಕೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುವಂತಾಗಿದೆ. ರಿಲೀಸ್ ಡೇಟ್ ಹತ್ತಿರವಾದಂತೆಲ್ಲಾ ಚಿತ್ರತಂಡ ಪ್ರಮೋಷನ್‌ ಸ್ಪೀಡ್ ಹೆಚ್ಚಿಸ್ತಿದೆ. ದೇಶ ವಿದೇಶಗಳಲ್ಲಿ 'ವಿಕ್ರಾಂತ್‌ ರೋಣ' ಹವಾ ಜೋರಾಗಿದ್ದು, ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಪ್ರೇಕ್ಷಕರು ಟಿಕೆಟ್‌ಗಾಗಿ ಮುಗಿಬಿದ್ದಿದ್ದು, ಟಿಕೆಟ್ ಬುಕ್ಕಿಂಗ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈ ಕ್ರೇಜ್ ನೋಡ್ತಿದ್ರೆ, ಫಸ್ಟ್‌ ಡೇ ಒಳ್ಳೆ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ.

  'ವಿಕ್ರಾಂತ್‌ ರೋಣ' ಸಿನಿಮಾ 2D ಹಾಗೂ 3D ವರ್ಷನ್‌ಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ಬಹಳ ಅದ್ಧೂರಿಯಾಗಿ ನಿರ್ಮಾಣವಾಗಿರುವ ಚಿತ್ರವನ್ನು ಅಷ್ಟೇ ರೋಚಕವಾಗಿ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ. ನೂರಾರು ತಂತ್ರಜ್ಞರು ಹಗಳಿರುಳು ಶ್ರಮಿಸಿ, ಒಳ್ಳೆ ಔಟ್‌ಪುಟ್‌ ಬರುವಂತೆ ನೋಡಿಕೊಂಡಿದ್ದಾರೆ. ಈಗಾಗಲೇ ಫಸ್ಟ್ ಕಾಪಿ ನೋಡಿ ಅನೂಪ್ ಭಂಡಾರಿ ಅಂಡ್ ಟೀಂ ಖುಷಿಯಾಗಿದ್ದು, ಪ್ರೇಕ್ಷಕರು ಸಿನಿಮಾ ನೋಡಿ ಏನ್‌ ಹೇಳ್ತಾರೋ ಅಂತ ಕೇಳೋಕೆ ಕಾಯ್ತಿದ್ದಾರೆ. ಜಾಕ್‌ ಮಂಜು ಹಾಗೂ ಅಲಂಕಾರ್ ಪಾಂಡಿಯನ್ 90 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುದೀಪ್ ಜೊತೆಗೆ ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ.

  'ವಿಕ್ರಾಂತ್ ರೋಣ' ಪಾರ್ಟ್ 2 ಪಕ್ಕಾ!'ವಿಕ್ರಾಂತ್ ರೋಣ' ಪಾರ್ಟ್ 2 ಪಕ್ಕಾ!

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕರಿಯರ್‌ನಲ್ಲೇ ಬಹಳ ಸ್ಪೆಷಲ್ ಸಿನಿಮಾ 'ವಿಕ್ರಾಂತ್‌ ರೋಣ'. ಈ ಫ್ಯಾಂಟಸಿ ಆಕ್ಷನ್ ಅಡ್ವೆಂಚರಸ್ ಸಿನಿಮಾದಲ್ಲಿ ಪೊಲೀಸ್ ಆಫೀಸರ್‌ ರೋಲ್‌ನಲ್ಲಿ ನಟಿಸಿರೋ ಸಿನಿಮಾ ಸಾಕಷ್ಟು ಸರ್‌ಪ್ರೈಸ್‌ಗಳನ್ನು ಹೊತ್ತು ಬರ್ತಿದ್ದಾರೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಸಾಂಗ್ಸ್, ವಿಲಿಯಮ್ ಡೇವಿಡ್ ಸಿನಿಮಾಟೋಗ್ರಫಿ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ. ಸಿನಿಮಾ ಟ್ರೈಲರ್‌ ಕೂಡ ಸೂಪರ್ ಹಿಟ್ ಆಗಿದೆ.

   3D ವರ್ಷನ್‌ ಟಿಕೆಟ್ ಬುಕ್ಕಿಂಗ್ ಜೋರು

  3D ವರ್ಷನ್‌ ಟಿಕೆಟ್ ಬುಕ್ಕಿಂಗ್ ಜೋರು

  27 ಗಂಟೆಗಳ ಹಿಂದೆ 'ವಿಕ್ರಾಂತ್‌ ರೋಣ' ಸಿನಿಮಾ ಅಡ್ವಾನ್ಸ್ ಟಿಕೆಟ್‌ ಬುಕ್ಕಿಂಗ್ ಶುರುವಾಯಿತು. ಪ್ರೇಕ್ಷಕರು ಸಿನಿಮಾ ನೋಡೋಕೆ ಕಾತರರಾಗಿದ್ದು, ಟಿಕೆಟ್‌ ಬುಕ್ ಮಾಡಲು ಮುಗಿಬಿದ್ದಿದ್ದಾರೆ. ಆದರೆ 2Dಗಿಂತ 3D ವರ್ಷನ್ ನೋಡೋಕೆ ಪ್ರೇಕ್ಷಕರು ಹೆಚ್ಚು ಉತ್ಸುಕರಾಗಿರುವಂತೆ ಕಾಣುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ 3D ವರ್ಷನ್‌ನ ಹಲವು ಶೋಗಳ ಟಿಕೆಟ್‌ ಸೋಲ್ಡ್‌ಔಟ್ ಆಗೋಗಿದೆ. 2D ಹೋಲಿಸಿದರೆ 3D ವರ್ಷನ್‌ಗೆ ರೆಸ್ಪಾನ್ಸ್ ಸಖತ್ ಆಗಿ ಸಿಗುತ್ತಿದೆ.

  ಪುನೀತ್- ಸುದೀಪ್ ಅದ್ಬುತ ಕಟೌಟ್: ಪ್ರಚಾರದ ಗಿಮಿಕ್ ಎಂದು ಮೊಸರಲ್ಲಿ ಕಲ್ಲು ಹುಡುಕಿದರು!ಪುನೀತ್- ಸುದೀಪ್ ಅದ್ಬುತ ಕಟೌಟ್: ಪ್ರಚಾರದ ಗಿಮಿಕ್ ಎಂದು ಮೊಸರಲ್ಲಿ ಕಲ್ಲು ಹುಡುಕಿದರು!

   ಮುಂಜಾಬೆ ಶೋಗಾಗಿ ಫ್ಯಾನ್ಸ್ ಕಾತರ!

  ಮುಂಜಾಬೆ ಶೋಗಾಗಿ ಫ್ಯಾನ್ಸ್ ಕಾತರ!

  'ವಿಕ್ರಾಂತ್‌ ರೋಣ' ಸಿನಿಮಾ ಮಿಡ್‌ ನೈಟ್‌ ಶೋಗಳು ಇರುವುದಿಲ್ಲ ಅನ್ನಲಾಗುತ್ತಿದೆ. ಬೆಳಗ್ಗೆ 6 ಗಂಟೆ ಹಾಗೂ 8 ಗಂಟೆಗೆ ಮೊದಲ ಪ್ರದರ್ಶನ ಶುರುವಾಗುವ ನಿರೀಕ್ಷೆಯಿದೆ. ಆದರೆ ಆ ಶೋಗಳ ಸಂಖ್ಯೆ ಬುಕ್‌ ಮೈ ಶೋನಲ್ಲಿ ಕಮ್ಮಿ ತೋರಿಸುತ್ತಿದೆ. ಎಲ್ಲರಿಗಿಂತ ಮೊದಲು ಸಿನಿಮಾ ನೋಡಲು ಕಾಯುತ್ತಿರುವ ಅಭಿಮಾನಿಗಳು ಮಾರ್ನಿಂಗ್ ಶೋಗಳ ಟಿಕೆಟ್‌ ಬುಕ್ಕಿಂಗ್‌ಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ. ಇದು ಕೂಡ ಟಿಕೆಟ್ ಬುಕ್ಕಿಂಗ್ ಹಿನ್ನಡೆಗೆ ಕಾರಣ ಇರಬಹುದು.

   ಚೆನ್ನೈ, ಹೈದರಾಬಾದ್‌ನಲ್ಲೂ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್

  ಚೆನ್ನೈ, ಹೈದರಾಬಾದ್‌ನಲ್ಲೂ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್

  ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಲ್ಲೂ 5 ದಿನ ಮೊದಲೇ 'ವಿಕ್ರಾಂತ್‌ ರೋಣ' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಹೈದರಾಬಾದ್‌ನಲ್ಲಿ ಸಾಕಷ್ಟು ಶೋಗಳು ಕೊಟ್ಟಿದ್ದು, ಟಿಕೆಟ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಹೊರರಾಜ್ಯಗಳಲ್ಲಿ ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದ್ದು, ಟಿಕೆಟ್‌ ಬುಕ್ಕಿಂಗ್ ಶುರುವಾಗಿದೆ.

   ಮೊದಲ ದಿನ 50 ಕೋಟಿ ಗಳಿಸುತ್ತಾ ಸಿನಿಮಾ?

  ಮೊದಲ ದಿನ 50 ಕೋಟಿ ಗಳಿಸುತ್ತಾ ಸಿನಿಮಾ?

  ಮೊದಲ ದಿನ ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಸುಮಾರು 25 ರಿಂದ 30 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ. ಇನ್ನು ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾದರೆ ಮತ್ತಷ್ಟು ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳಲಿದೆ. ಅಲ್ಲದೇ ಇದು ಕೇವಲ ದೇಶಾದ್ಯಂತ ಸಿನಿಮಾ ಫಸ್ಟ್‌ ಡೇ ಕಲೆಕ್ಷನ್ ಲೆಕ್ಕಾಚಾರ. ವಿದೇಶದ 1200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್‌ ಆಗಲಿದ್ದು, ಅನಾಯಾಸವಾಗಿ 50 ಕೋಟಿ ರೂ. ಗಡಿ ದಾಟುವ ನಿರೀಕ್ಷೆಇದೆ.

  English summary
  Sudeep Starrer Vikrant Rona Advance Ticket Booking 3D Is Better Than 2D, Know More.
  Monday, July 25, 2022, 17:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X