Vikrant Rona Release Date Teaser: ಈ ಮೂವರು ದಿಗ್ಗಜರಿಂದ 'ವಿಕ್ರಾಂತ್ ರೋಣ' ಟೀಸರ್ ರಿಲೀಸ್

ಕನ್ನಡದಲ್ಲಿ 'ಕೆಜಿಎಫ್ 2' ಬಳಿಕ ಬರಲಿರುವ ಬಹುನಿರೀಕ್ಷಿತ ಚಿತ್ರ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ'.'ಕೋಟಿಗೊಬ್ಬ 3' ಚಿತ್ರದ ಬಳಿಕ ಕಿಚ್ಚ ಸುದೀಪ್ ಕೈಗೆತ್ತಿಕೊಂಡಿರುವ ಸಿನಿಮಾ ಇದು. 'ವಿಕ್ರಾಂತ್ ರೋಣ' ಹಲವು ಕಾರಣಕ್ಕೆ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈ ಚಿತ್ರದ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದ್ದು, ಸಿನಿ ಪ್ರೇಕ್ಷಕರು ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಈ ಹಿಂದೆಯೇ ಸಿನಿಮಾದ ರಿಲೀಸ್ ದಿನಾಂಕ ಪ್ರಕಟ ಮಾಡಲಾಗಿತ್ತು. ಆದರೆ ಕೊರೊನಾ, ಲಾಕ್‌ಡೌನ್ ಕಾರಣ ಚಿತ್ರವನ್ನು ಮುಂದೂಡಲಾಗಿತ್ತು. ಆದರೆ 'ವಿಕ್ರಾಂತ್ ರೋಣ'ನನ್ನು ಕಣ್ತುಂಬಿಕೊಳ್ಳಲು ಇನ್ನು ಹೆಚ್ಚು ದಿನ ಕಾಯಬೇಕಾಗಿಲ್ಲ. ಇನ್ನೇನು ಸಿನಿಮಾ ರಿಲೀಸ್ ಹತ್ತಿರ ಬಂದಿದೆ. ಈ ಕಾರಣಕ್ಕೆ ಯುಗಾದಿ ಹಬ್ಬಕ್ಕೆ ಚಿತ್ರತಂಡ ಸರ್ಪ್ರೈಸ್ ನೀಡಲು ರೆಡಿಯಾಗಿದೆ.

ಯುಗಾದಿ ಹಬ್ಬದ ಪ್ರಯುಕ್ತ 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ದೊಡ್ಡದೊಂದು ಅಪ್ಡೇಟ್ ಸಿಗಲಿದೆ. ಏಪ್ರಿಲ್ 2ನೇ ತಾರೀಕಿನಂದು, ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಯಾವಾಗ ರಿಲೀಸ್ ಆಗುತ್ತೆ ಎನ್ನುವುದನ್ನು ಟೀಸರ್ ಮೂಲಕ ಚಿತ್ರತಂಡ ಹೇಳಲಿದೆ.

'ವಿಕ್ರಾಂತ್ ರೋಣ' ಸರ್ಪ್ರೈಸ್‌ಗೆ ಸಿದ್ಧರಾಗಿ!

ಯುಗಾದಿ ಹಬ್ಬದ ನಿಮಿತ್ತ ಏಪ್ರಿಲ್ 2ರಂದು ಬೆಳಗ್ಗೆ 9.55ಕ್ಕೆ 'ವಿಕ್ರಾಂತ್ ರೋಣ' ರಿಲೀಸ್ ಆಗಲಿದೆ. ಇದು ಚಿತ್ರದ ಒಂದು ಟೀಸರ್ ಮಾತ್ರ ಆಗಿರುವುದಿಲ್ಲ. ಬದಲಿಗೆ ಈ ಟೀಸರ್ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಹೇಳುತ್ತದೆ. ಈ ಟೀಸರ್ ಮೂಲಕ ಚಿತ್ರದ ರಿಲೀಸ್ ದಿನಾಂಕ ಪ್ರಕಟಗೊಳ್ಳಲಿದೆ. ಈ ಸುದ್ದಿ ಕಿಚ್ಚನ ಫ್ಯಾನ್ಸ್ ಬಳಗದಲ್ಲಿ ಸಂತಸ ಮೂಡಿಸಿದೆ. ಇದು ಪ್ಯಾನ್ ಇಂಡಿಯಾ ಚಿತ್ರ ಆದ ಕಾರಣ, ಬಹುಭಾಷೆಯ ಹೆಸರಾಂತ ನಟರು ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ.

ಚಿರಂಜೀವಿಯಿಂದ 'ವಿಕ್ರಾಂತ್ ರೋಣ' ಟೀಸರ್!

ಇತ್ತೀಚೆಗೆ ಚಿತ್ರರಂಗದಲ್ಲಿ ಇದ್ದ ಕೆಲವು ಕಟ್ಟು ಪಾಡುಗಳು ಮಾಯವಾಗಿವೆ. ಪ್ಯಾನ್ ಇಂಡಿಯಾ ಚಿತ್ರಗಳು ಹೆಚ್ಚೆಚ್ಚು ಬರುತ್ತಿರ ಕಾರಣಕ್ಕೆ ಎಲ್ಲಾ ಚಿತ್ರರಂಗದವರ ಒಡನಾಟ ಹೆಚ್ಚಾಗಿದೆ. ಪರಭಾಷೆಯ ಸ್ಟಾರ್ ನಟರು ಕನ್ನಡ ಚಿತ್ರಗಳ ಬಗ್ಗೆ ಮಾತನಾಡುವುದು, ಕನ್ನಡದ ನಟರುಗಳು ಪರಭಾಷೆಯ ಚಿತ್ರಗಳ ಬಗ್ಗೆ ಮಾತನಾಡುವುದು ಕೂಡ ಈಗ ಸಹಜ ಎನ್ನುವಂತಾಗಿದೆ. ಹಾಗೆ 'ವಿಕ್ರಾಂತ್ ರೋಣ' ಚಿತ್ರದ ಟೀಸರನ್ನು ತೆಲುಗಿನಲ್ಲಿ ರಿಲೀಸ್ ಮಾಡಲಿದ್ದಾರೆ ಮೆಗಾ ಸ್ಟಾರ್ ಚಿರಂಜೀವಿ.

ಮೋಹನ್ ಲಾಲ್, ಸಿಂಬುಯಿಂದ ಟೀಸರ್ ರಿಲೀಸ್!

ಚಿರಂಜೀವಿ 'ವಿಕ್ರಾಂತ್ ರೋಣ' ತೆಲುಗು ಟೀಸರ್ ರಿಲೀಸ್ ಮಾಡಲಿದ್ದಾರೆ. ಅಂತೆಯೇ ತಮಿಳು ಟೀಸರ್ ರಿಲೀಸ್ ಮಾಡಲಿದ್ದಾರೆ. ತಮಿಳು ನಟ ಸಿಂಬು, ಇನ್ನು ಮಲಯಾಳಂ ಟೀಸರ್ ರಿಲೀಸ್ ಮಾಡುತ್ತಿದ್ದಾರೆ ಮಲಯಾಳಂ ನಟ ಮೋಹನ್‌ ಲಾಲ್. ಈ ಮೂವರು ಸ್ಟಾರ್ ನಟರು 'ವಿಕ್ರಾಂತ್ ರೋಣ' ಚಿತ್ರದ ಟೀಸರ್ ರಿಲೀಸ್ ಮಾಡಲಿದ್ದಾರೆ. ಈ ವಿಚಾರವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಮೂಲಕ ಹಂಚಿಕೊಂಡಿದ್ದಾರೆ.

'ವಿಕ್ರಾಂತ್ ರೋಣ' ಅದ್ಧೂರಿ ವೆಚ್ಚದ 3D ಸಿನಿಮಾ!

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಅದ್ಧೂರಿ ವೆಚ್ಚದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣ, 3ಡಿ ಆ್ಯಕ್ಷನ್ ಅಡ್ವೆಂಚರ್‌, ಮಿಸ್ಟ್ರಿ ಥ್ರಿಲ್ಲರ್ ಒಳಗೊಂಡಿದೆ. ಕನ್ನಡ, ಹಿಂದಿ, ತೆಲುಗು ಸೇರಿ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲದೆ ಇಂಗ್ಲಿಷ್, ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಭಾಷೆಗೂ ಡಬ್ ಆಗುತ್ತಿದೆ. ಈ ಚಿತ್ರವನ್ನು ಶಾಲಿನಿ ಪ್ರೊಡಕ್ಷನ್ಸ್ ಮೂಲಕ ಜಾಕ್ ಮಂಜುನಾಥ್ ಅವರು ನಿರ್ಮಿಸುತ್ತಿದ್ದು, ಅಲಂಕಾರ್ ಪಾಂಡಿಯನ್ ಕೋ ಪ್ರೊಡ್ಯೂಸರ್ ಆಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ , ನಿರೂಪ್ ಭಂಡಾರಿ, ನೀತಾ ಅಶೋಕ್ ಚಿತ್ರದ ಉಳಿದ ತಾರಾಗಣ.

More from Filmibeat

English summary
Sudeep Starrer Vikrant Rona Movie Release Date Teaser Release By Chiranjeevi, Mohanlal, Simbu On April 2nd Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X