ಅಂದು ಅಷ್ಟೇ, ಇಂದು ಅಷ್ಟೇ : ಹೈದರಾಬಾದ್ ನಲ್ಲಿ ಕಿಚ್ಚನ ಕನ್ನಡ ಪ್ರೇಮ
Recommended Video
ಕನ್ನಡದ ಕಿಚ್ಚ ಸುದೀಪ್ ತೆಲುಗು ಸಿನಿಮಾ ಮಾಡಿದ್ದಾರೆ. ತಮಿಳು ಸಿನಿಮಾ ಮಾಡಿದ್ದಾರೆ. ಹಿಂದಿ ಸಿನಿಮಾವನ್ನೂ ಮಾಡಿದ್ದಾರೆ. ಆದರೆ, ಎಂದಿಗೂ ಸುದೀಪ್ ತಮ್ಮ ಕನ್ನಡ ಪ್ರೇಮವನ್ನು ಮರೆತಿಲ್ಲ.
ನಿನ್ನೆ ಹೈದರಾಬಾದ್ ನಲ್ಲಿ 'ಪೈಲ್ವಾನ್' ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಿತು. ವೇದಿಕೆ ಮೇಲೆ ನಿಂತ ಸುದೀಪ್ ಮಾತು ಶುರು ಮಾಡಿದರು. ತೆಲುಗು ನೆಲದಲ್ಲಿ ಇದ್ದರೂ, ಮೊದಲು ಸುದೀಪ್ ಮಾತು ಶುರು ಮಾಡಿದ್ದು ಕನ್ನಡದಲ್ಲಿ.
'ಎಲ್ಲರಿಗೂ ನಮಸ್ಕಾರ..' ಎಂದು ಕನ್ನಡದಲ್ಲಿ ಮಾತನಾಡಿದ ಕಿಚ್ಚ ನಂತರ ತೆಲುಗಿನಲ್ಲಿ ನಮಸ್ಕಾರ ಹೇಳಿದರು. ಬಳಿಕ ತಮಗೆ ತೆಲುಗು ಮಾತನಾಡಲು ಸರಿಯಾಗಿ ಬರುವುದಿಲ್ಲ ಎಂದು ಹೇಳಿ ಇಂಗ್ಲೀಷ್ ನಲ್ಲಿ ಮಾತು ಮುಂದುವರೆಸಿದರು.

ಸುದೀಪ್ ಈ ರೀತಿ ಕನ್ನಡ ಪ್ರೇಮ ತೋರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬೇರೆ ಭಾಷೆಯ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಸುದೀಪ್ ತಮ್ಮ ಮಾತು ಶುರು ಮಾಡುವುದು ಕನ್ನಡದಲ್ಲಿಯೇ. 'ಈಗ' ಸಿನಿಮಾದ ಸಮಯದಲ್ಲಿಯೂ ಸುದೀಪ್ ಇದೇ ರೀತಿ ಕನ್ನಡಿಗರ ಮೆಚ್ಚುಗೆ ಪಡೆದಿದ್ದರು.
''ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು'' ಎನ್ನುವ ಕುವೆಂಪು ಅವರ ನುಡಿಯ ಹಾಗೆ ಸುದೀಪ್ ಅನ್ಯ ರಾಜ್ಯದಲ್ಲಿಯೂ ಕನ್ನಡಾಭಿಮಾನ ತೋರಿಸುತ್ತಿದ್ದಾರೆ.


Click it and Unblock the Notifications











