'ಸುದೀಪ್ 23ರ ಯುವಕನಂತೆ ಕಾಣ್ತಾರೆ' ಎಂದ ಸ್ಟಾರ್ ನಿರ್ದೇಶಕ

ಕನ್ನಡದ ಸೂಪರ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ವಯಸ್ಸು ದಾಖಲೆಗಳ ಪ್ರಕಾರ 45 ವರ್ಷ. ಸದ್ಯ ಕನ್ನಡ ಇಂಡಸ್ಟ್ರಿಯಲ್ಲಿ ನೋಡುವುದಾರೇ ಹಿರಿಯ ನಟರು ಕೂಡ ಹೌದು. ಸಿನಿಜಗತ್ತಿಗೆ ಬರುವ ಅನೇಕ ಯುವಕಲಾವಿದರಿಗೆ ಸುದೀಪ್ ಬೆಂಬಲ ನೀಡ್ತಾರೆ.

ಈಗ ವಿಶೇಷ ಅಂದ್ರೆ ಕಿಚ್ಚ ಸುದೀಪ್ ತಮ್ಮ ಸಿನಿ ಬದುಕು ಆರಂಭಿಸಿ 23 ವರ್ಷ ಆಗಿದೆ. ಜನವರಿ 31ರಂದು 23 ವರ್ಷ ಪೂರೈಸಲಿದ್ದಾರೆ ಅಭಿನಯ ಚಕ್ರವರ್ತಿ. ಈ ಸಂಭ್ರಮವನ್ನ ಅದ್ಧೂರಿಯಾಗಿ ಆಚರಿಸಲು ಸುದೀಪ್ ಬಳಗ ಸಜ್ಜಾಗಿದೆ.

ಈ ನಡುವೆ ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರು ''ಸುದೀಪ್ ಅವರು ಈಗಲೂ 23 ವರ್ಷದ ಯುವಕನಂತೆ ಕಾಣ್ತಾರೆ'' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಸುದೀಪ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ.....

ಸುದೀಪ್ 23ರ ಯುವಕ

ಸುದೀಪ್ 23ರ ಯುವಕ

ಇಂಡಸ್ಟ್ರಿಯಲ್ಲಿ 23 ವರ್ಷ ಪೂರೈಸಿದ್ದಕ್ಕೆ ಶುಭಕೋರಿರುವ ಪವನ್ ಒಡೆಯರ್ ''ಸುದೀಪ್ ಸರ್ ನಿಮಗೆ ಧನ್ಯವಾದಗಳು. 23 ವರ್ಷದಿಂದ ಜನರನ್ನ ರಂಜಿಸುತ್ತಿದ್ದೀರಾ. ಆದ್ರೆ, ಈಗಲೂ ನೀವು 23ವರ್ಷದ ತರುಣನಂತೆ ಕಾಣ್ತೀರಾ'' ಎಂದು ಹೇಳಿದ್ದಾರೆ.

ಥ್ಯಾಂಕ್ ಯೂ ಫಾರ್ ಸ್ವೀಟ್ ವರ್ಡ್

ಥ್ಯಾಂಕ್ ಯೂ ಫಾರ್ ಸ್ವೀಟ್ ವರ್ಡ್

ನಿರ್ದೇಶಕ ಪವನ್ ಒಡೆಯರ್ ಅವರು ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ''ನಿಮ್ಮ ಸಿಹಿಯಾದ ಹಾರೈಕೆಗೆ ಧನ್ಯವಾದಗಳು, ಜನವರಿ 31ರಂದು ನಾನು ಇಂಡಸ್ಟ್ರಿಗೆ ಬಂದು 23 ವರ್ಷ ಆಗ್ತಿದೆ. ನಿಮ್ಮ ಪ್ರಕಾರ ನಾನು 23ರ ಯುವಕನಂತೆ ಕಾಣ್ತೀದ್ದೀನಿ ಅಂದ್ರೆ ಅದಕ್ಕೆ ನಾನು ಕೃತಜ್ಞತೆ ತಿಳಿಸುತ್ತೇನೆ'' ಎಂದಿದ್ದಾರೆ.

'ಬ್ರಹ್ಮ' ಸಿನಿಮಾದಲ್ಲಿ ಸುದೀಪ್

'ಬ್ರಹ್ಮ' ಸಿನಿಮಾದಲ್ಲಿ ಸುದೀಪ್

ಆರಂಭದಲ್ಲಿ ಟಿವಿ ಜಾಹೀರಾತಿನ ಮೂಲಕ ಬಣ್ಣ ಹಚ್ಚಿದ್ದ ಸುದೀಪ್ 1996ರಲ್ಲಿ ಬ್ರಹ್ಮ ಸಿನಿಮಾದ ಮೂಲಕ ನಟನೆ ಶುರು ಮಾಡಿದ್ದರು. ಆದ್ರೆ, ಕಾರಣಾಂತರಗಳಿಂದ ಈ ಸಿನಿಮಾ ರಿಲೀಸ್ ಆಗಲಿಲ್ಲ. ಇದಾದ ಬಳಿಕ 'ಓ ಕುಸಮ ಬಾಲೆ' ಚಿತ್ರದಲ್ಲಿ ನಟಿಸಿದ್ದರು. ದುರಾದೃಷ್ಟವಶಾತ್ ಆ ಸಿನಿಮಾನೂ ಬಿಡುಗಡೆಯಾಗಿಲ್ಲ.

ಬ್ರೇಕ್ ನೀಡಿದ ಸ್ಪರ್ಶ

ಬ್ರೇಕ್ ನೀಡಿದ ಸ್ಪರ್ಶ

ನಂತರ ತಾಯವ್ವ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಂಡರು. ಬಳಿಕ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಸ್ಪರ್ಶ ಸಿನಿಮಾದಲ್ಲಿ ಕಿಚ್ಚ ನಾಯಕನಾದರು. ಈ ಚಿತ್ರ ಕಿಚ್ಚನಿಗೆ ಬ್ರೇಕ್ ನೀಡಿತು. ಇಲ್ಲಿಂದ ಆರಂಭವಾದ ಸುದೀಪ್ ಅವರ ಸಿನಿ ಜರ್ನಿ ಹುಚ್ಚ, ವಾಲಿ, ಚೆಂದು, ಧಮ್, ನಂದಿ, ಕಿಚ್ಚ, ಪಾರ್ಥ, ರಂಗ ಎಸ್ ಎಸ್ ಎಲ್ ಸಿ, ನಲ್ಲ, ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ನೀಡಿದ್ರು.

ಪೈಲ್ವಾನ್-ಕೋಟಿಗೊಬ್ಬ 3

ಪೈಲ್ವಾನ್-ಕೋಟಿಗೊಬ್ಬ 3

ಸದ್ಯ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಅದರ ಜೊತೆಯಲ್ಲೆ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್ ನಡೆಯುತ್ತಿದೆ. ತೆಲುಗಿನ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ, ಬಾಲಿವುಡ್ ನ ದಬಾಂಗ್ 3 ಚಿತ್ರದಲ್ಲಿ ಆಮೇಲೆ ಹಾಲಿವುಡ್ ರೈಸನ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

More from Filmibeat

English summary
The handsome actor, Abhinaya Chakravarthy, Kichcha Sudeep completes 23 years in the film industry. so, director pavan wadeyar taken his twitter account to wish kiccha sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X