For Quick Alerts
  ALLOW NOTIFICATIONS  
  For Daily Alerts

  ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ : ಬೆಂಬಲ ಸೂಚಿಸಿದ ಕಿಚ್ಚ

  |

  ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯ ಸುಧಾರಿಸಲಿ ಎಂದು ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅದರ ಜೊತೆಗೆ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬ ಕೂಗು ಕೂಡ ಜೋರಾಗುತ್ತಿದೆ.

  ಈ ಬಗ್ಗೆ ಇದೀಗ ನಟ ಸುದೀಪ್ ಕೂಡ ಮಾತನಾಡಿದ್ದಾರೆ. ಇಂದು ನಗರದ 'ಗೋಲ್ಡ್ ಕ್ರಾಫ್ಟ್ ಜಿಮ್' ಉದ್ಘಾಟನಾ ಕಾರ್ಯಕ್ರಮಕ್ಕೆ ಕಿಚ್ಚ ಆಗಮಿಸಿದ್ದರು. ಈ ವೇಳೆ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂಬ ಮನವಿ ಬಗ್ಗೆ ಕೇಳಿದ ಪ್ರಶ್ನೆಗೆ ಸಹ ಸುದೀಪ್ ಉತ್ತರ ನೀಡಿದ್ದಾರೆ.

  ಸಿದ್ದಗಂಗಾ ಶ್ರೀಗಳ ಆರೋಗ್ಯಕ್ಕಾಗಿ ಉಪೇಂದ್ರ ಟೀಮ್ ಪ್ರಾರ್ಥನೆ

  ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎನ್ನುವುದು ನನ್ನ ಬೇಡಿಕೆ ಕೂಡ ಆಗಿದೆ. ಆ ಕೆಲಸ ಶ್ಲಾಘನೀಯ. ಭಾರತ ರತ್ನ ನೀಡಬೇಕು ಎನ್ನುವ ಮನವಿಗೆ ನನ್ನ ಬೆಂಬಲ ಇದೆ ಎಂದು ಸುದೀಪ್ ಹೇಳಿದ್ದಾರೆ.

  ಮತ್ತೊಂದು ಕಡೆ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದ ದಿನಾಂಕ ಕೂಡ ಶ್ರೀಗಳ ಅನಾರೋಗ್ಯದ ಹಿನ್ನಲೆಯಲ್ಲಿ ಪೋಸ್ಟ್ ಪೋನ್ ಮಾಡಲಾಗಿದೆ.

  English summary
  Kannada actor Sudeep supports bharat ratna for Siddaganga Shivakumar swamiji campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X