twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ಸ್ಮಾರಕ ಹೋರಾಟಕ್ಕೆ ಕೈಜೋಡಿಸಲು ಅಭಿಮಾನಿಗಳಿಗೆ ಕರೆ ನೀಡಿದ ಸುದೀಪ್

    |

    ಡಾ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಹೋರಾಟಕ್ಕೆ ಕಿಚ್ಚ ಸುದೀಪ್ ಪೂರ್ಣ ಬೆಂಬಲ ನೀಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಭಿಮಾನಿ ಸಂಘಟನೆಗಳಿಗೆ ಈ ಹೋರಾಟಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.

    ನವೆಂಬರ್ 1 ರಂದು ಡಾ ವಿಷ್ಣು ಸೇನಾ ಸಮಿತಿ ವತಿಯಿಂದ ವಿಷ್ಣು ಸ್ಮಾರಕ ವಿಚಾರವಾಗಿ ಚಳುವಳಿ ನಡೆಯಲಿದೆ. ಈ ಹೋರಾಟಕ್ಕೆ ನಾನು ಕಾರಣಾಂತರಗಳಿಂದ ಭಾಗಿಯಾಗಲು ಸಾಧ್ಯವಾಗಲಿಲ್ಲ. ಹೈದ್ರಾಬಾದ್ ನಲ್ಲಿ ಶೂಟಿಂಗ್ ಮಾಡುತ್ತಿದ್ದೇನೆ, ಬಿಟ್ಟು ಬರಲು ಆಗಿಲ್ಲ. ದಯವಿಟ್ಟು ನನ್ನ ಅಭಿಮಾನಿಗಳು ಈ ಹೋರಾಟದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡಿದ್ದಾರೆ.

    ವಿಷ್ಣುದಾದಾ ಜೊತೆ ಬಾಂಧವ್ಯ ಬೆಸೆದಿದ್ದು ಹೇಗೆಂದು ಹೇಳಿಕೊಂಡ ಸುದೀಪ್ವಿಷ್ಣುದಾದಾ ಜೊತೆ ಬಾಂಧವ್ಯ ಬೆಸೆದಿದ್ದು ಹೇಗೆಂದು ಹೇಳಿಕೊಂಡ ಸುದೀಪ್

    'ಇದು ಬಹಳ ಮಹತ್ವವಾದ ಕಾರ್ಯ. ಇದರಲ್ಲಿ ಫಲಿತಾಂಶ ಬರಲೇಬೇಕು. ನಿಮ್ಮಲ್ಲರ ಸಹಕಾರ ಇರಲಿ. ಈ ಚಳವಳಿ ಯಶಸ್ವಿಯಾಗಲಿ. ಆದಷ್ಟೂ ಬೇಗ ಸರ್ಕಾರ ಇದನ್ನ ಬಗೆಹರಿಸಿಲಿ, ನಿಮಗೆ ನ್ಯಾಯ ಸಿಗಲಿ. ಶಾಂತಿಯುವ ಹೋರಾಟವಿರಲಿ' ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

    Sudeep supports vishnuvardhan memorial

    ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ ವಿಷ್ಣು ಸ್ಮಾರಕ ವಿಚಾರಕ್ಕೆ ನಾವೇ ಮುಂದೆ ನಿಲ್ಲುತ್ತೇವೆ ಎಂದ ಶಿವಣ್ಣ

    ಕನ್ನಡ ಚಿತ್ರರಂಗದ ನಟರು ಕೈಜೋಡಿಸಿದರೇ ಖಂಡಿತಾ ವಿಷ್ಣು ಸ್ಮಾರಕ ನಿರ್ಮಾಣ ಕೆಲಸ ಆಗುತ್ತೆ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಆದ್ರೆ, ಪರೋಕ್ಷವಾಗಿ ಸ್ಮಾರಕ ನಿರ್ಮಾಣಕ್ಕೆ ಬೆಂಬಲ ನೀಡುವ ಕಲಾವಿದರು, ಮುಂದಾಳತ್ವ ವಹಿಸಿ ಮುಂದೆ ಬಂದಿದ್ದು ಕಡಿಮೆ.

    ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.? ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?

    ಇನ್ನು ವಿಷ್ಣು ಸ್ಮಾರಕ ವಿಚಾರದಲ್ಲಿ ನಟ ಸುದೀಪ್ ಆಗಾಗ ಮಾತನಾಡಿ ಅಭಿಮಾನಿಗಳಿಗೆ ಧೈರ್ಯ ಮತ್ತು ಸ್ಫೂರ್ತಿ ತುಂಬುತ್ತಿದ್ದಾರೆ. ಬಹುಶಃ ಇದನ್ನೆಲ್ಲಾ ನೋಡಿದ್ರೆ, ಆದಷ್ಟೂ ಬೇಗ ಈ ಸಮಸ್ಯೆ ಬಗೆಹರಿದು ಸಾಹಸ ಸಿಂಹನ ಸ್ಮಾರಕ ಆರಂಭವಾಗುತ್ತೆ ಎಂಬ ಭರವಸೆ ಮೂಡುತ್ತಿದೆ.

    English summary
    Kiccha Sudeep supports to dr vishnu sena samiti protest. vishnuvardhan fans are protesting for vishnuvardhan memorial on november 1st.
    Thursday, November 1, 2018, 12:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X