»   » ದರ್ಶನ್ ಬಗ್ಗೆ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಸುದೀಪ್

ದರ್ಶನ್ ಬಗ್ಗೆ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಸುದೀಪ್

Posted By:
Subscribe to Filmibeat Kannada

ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ನಲ್ಲಿ 'ಕುರುಕ್ಷೇತ್ರ' ಚಿತ್ರ ಹಾಗೂ ದರ್ಶನ್ ಗೆ ಶುಭ ಕೋರಿದ್ದರು. ಈ ಟ್ವಿಟ್ ನಂತರ ಇವರಿಬ್ಬರ ಮಧ್ಯೆ ಮತ್ತೆ ಸ್ನೇಹ ಚಿಗುರಿದೆ ಎಂಬ ಮಾತುಗಳು ಕೇಳಿ ಬಂತು.

ಇದೀಗ, ದರ್ಶನ್ ಹಾಗೂ ಕುರುಕ್ಷೇತ್ರ ಚಿತ್ರದ ಬಗ್ಗೆ ಸಂದರ್ಶನದಲ್ಲಿ ಸುದೀಪ್ ಮನಬಿಚ್ಚಿ ಮಾತನಾಡಿದ್ದಾರೆ. ಹೌದು, ಹಿರಿಯ ಪತ್ರಕರ್ತ ಜೋಗಿ ಅವರು 'ಒಪನ್ ಹೌಸ್ ವಿತ್ ಸುದೀಪ್' ಎಂಬ ಹೆಸರಿನಲ್ಲಿ ಕಿಚ್ಚ ಸುದೀಪ್ ಅವರನ್ನ ಸಂದರ್ಶನ ಮಾಡಿದ್ದರು. ಈ ಕಾರ್ಯಕ್ರಮ ಇತ್ತೀಗಷ್ಟೇ ಸುರ್ವಣ ನ್ಯೂಸ್ ನಲ್ಲಿ ಪ್ರಸಾರವಾಗಿತ್ತು. ಈ ಸಂದರ್ಶನದಲ್ಲಿ ಸುದೀಪ್ ಮುಕ್ತವಾಗಿ ಹಲವು ವಿಷ್ಯಗಳನ್ನ ಹಂಚಿಕೊಂಡಿದ್ದಾರೆ.

ಹಾಗಿದ್ರೆ, ದರ್ಶನ್ ಮತ್ತು ಕುರುಕ್ಷೇತ್ರದ ಬಗ್ಗೆ ಸುದೀಪ್ ಹೃದಯಾಳದಿಂದ ಬಂದ ಮಾತುಗಳೇನು? ಮುಂದೆ ಓದಿ.....

ಜೋಗಿ ಅವರು ಕೇಳಿದ ಪ್ರಶ್ನೆ

''ಕುರುಕ್ಷೇತ್ರ ಮುಹೂರ್ತ ಆಯಿತು. ನೀವು ದರ್ಶನ್ ಅವರಿಗೆ ವಿಶ್ ಮಾಡಿ ಒಂದು ಟ್ವೀಟ್ ಮಾಡಿದ್ರಿ. ನಂತರ ನಿಮ್ಮಿಬ್ಬರ ಸ್ನೇಹ ಮತ್ತೆ ಮರುಕಳಿಸಿದೆ ಎಂದು ಪತ್ರಿಕೆಗಳಲ್ಲಿ ವರದಿ ಆಯಿತು. ಚಿತ್ರರಂಗದಲ್ಲೂ ಈ ಬಗ್ಗೆ ಸಂತೋಷ ವ್ಯಕ್ತವಾಯಿತು. ಈ ಬಗ್ಗೆ ನೀವು ಏನ್ ಹೇಳ್ತೀರಾ?'' ಎಂದು ಜೋಗಿ ಅವರು ಸುದೀಪ್ ಗೆ ಪ್ರಶ್ನಿಸಿದರು.

'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

ಎಲ್ಲರನ್ನ ಒಟ್ಟಿಗೆ ನೋಡುವುದು ಖುಷಿ

''ಕುರುಕ್ಷೇತ್ರ ಮುಹೂರ್ತ ಆಗಿದ್ದು ಟ್ವಿಟ್ಟರ್ ನಲ್ಲಿ ನೋಡಿದೆ. ನೀವು ನನ್ನ ಸಿನಿಮಾಗಳನ್ನ ನೋಡಿರಬಹುದು. 'ಮಾಣಿಕ್ಯ', 'ಆಟೋಗ್ರಾಫ್', 'ಶಾಂತಿ ನಿವಾಸ'.....ನನಗೆ ತುಂಬ ಪಾತ್ರಗಳಿದ್ರೆ ತುಂಬ ಇಷ್ಟ. ರವಿ ಸರ್, ಅಂಬರೀಷ್ ಅಣ್ಣ, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಎಲ್ಲರೂ ಒಟ್ಟಿಗೆ ಇರುವುದು ನನಗೆ ಇಷ್ಟವಾಯಿತು. ಮುನಿರತ್ನ ಅವರ ಪ್ರಯತ್ನಕ್ಕೆ ಮೆಚ್ಚಲೇಬೇಕು. ಇದು ಸಾಮಾನ್ಯವಾದ ವಿಷ್ಯವಲ್ಲ. ಸೋ ವಿಶ್ ಮಾಡ್ಬೇಕು ಎನಿಸಿತು'' - ಸುದೀಪ್, ನಟ

'ನಮ್ಮ ಮಧ್ಯೆ ಬಿರುಕಿಲ್ಲ, ನಾವು ಚೆನ್ನಾಗಿದ್ದೀವಿ' ಎಂದ ಸುದೀಪ್

ದರ್ಶನ್ ಪಾತ್ರದ ಬಗ್ಗೆ ಮೆಚ್ಚುಗೆ

''ದರ್ಶನ್ ಅವರ ಫೋಟೋ ನೋಡಿದೆ. ಅದರಲ್ಲಿ ನಾನೊಬ್ಬ ಕಲಾವಿದನಾಗಿ ನನ್ನನ್ನ ನಾನೇ ಊಹಿಸಿಕೊಂಡೆ. ಆದ್ರೆ, ಅದು ಹಾಸ್ಯಾಸ್ಪದವಾಗಿತ್ತು'' ಎಂದು ಸುದೀಪ್ ನಕ್ಕರು. ನಂತರ ಮಾತನಾಡಿದ ಅವರು ''ಆ ಪಾತ್ರಕ್ಕೆ ಅವರನ್ನ ಬಿಟ್ರೆ ಬೇರೆ ಯಾರಿಗೂ ಸೂಕ್ತವಾಗಲ್ಲ ಎನಿಸಿತು'' ಎಂದು ಸಮರ್ಥಿಸಿಕೊಂಡರು.

ದರ್ಶನ್ 'ಲಕ್ಕಿ'

''ಐತಿಹಾಸಿಕ ಸಿನಿಮಾಗಳ ವಿಚಾರದಲ್ಲಿ ದರ್ಶನ್ ಲಕ್ಕಿ. ಎರಡು ಬಾರಿ ಅವಕಾಶ ಪಡೆದುಕೊಂಡಿದ್ದಾರೆ. ಮೊದಲನಯೇದು 'ಸಂಗೊಳ್ಳಿ ರಾಯಣ್ಣ', ಈಗ ಕುರುಕ್ಷೇತ್ರ...'' - ಸುದೀಪ್, ನಟ

Kiccha Sudeep Appreciate To Sculptor | Filmibeat Kannada

ಒಂದೊಳ್ಳೆ ಸಿನಿಮಾಗೆ ವಿಶ್ ಮಾಡಿದೆ

''ನನಗೆ ಗೊತ್ತಿರುವಾಗೆ ಇಲ್ಲಿಯವರೆಗೂ ಆತ ನನ್ನ ಬಗ್ಗೆ ಕೂತು ಕೆಟ್ಟದ್ದು ಮಾತಾಡಿರುವುದು ನಮ್ಮ ಕಿವಿಗೆ ಬಿದ್ದಿಲ್ಲ. ಸೋ, ಒಂದೊಳ್ಳೆ ಸಿನಿಮಾ ಬಂದಾಗ ವಿಶ್ ಮಾಡ್ಬೇಕು ಎನಿಸಿತು. ನಾನು ಮಾಡದೆ ಅಷ್ಟೇ'' - ಸುದೀಪ್, ನಟ

ಒಂದಾದ ಸುದೀಪ್-ದರ್ಶನ್ ಬಳಗದಿಂದ ಒಗ್ಗಟ್ಟಿನ ಮಂತ್ರ

English summary
Kannada Actor Sudeep Talk about Darshan's 50th movie kurukshetra in 'open house with Sudeep' Programme With Journalist Jogi.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada