For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನಟನೆಯ ರಾಬರ್ಟ್ ಸಿನಿಮಾಕ್ಕೆ ಸಂಕಷ್ಟ: ಸುದೀಪ್ ಹೇಳಿದ್ದು ಹೀಗೆ

  |

  ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದ ಬಿಡುಗಡೆಗೆ ತೆಲುಗು ಚಿತ್ರರಂಗದಿಂದ ಅಡ್ಡಿ ಎದುರಾದ ಕಾರಣ, ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

  ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt

  ರಾಬರ್ಟ್ ಸಿನಿಮಾದ ಬಿಡುಗಡೆಗೆ ಅಡ್ಡಿ ಎದುರಾದ ಬಗ್ಗೆ ಇಂದು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಕಿಚ್ಚ ಸುದೀಪ್. 'ನಾನು ಇನ್ನೊಂದು ಸಿನಿಮಾವನ್ನು ಹ್ಯಾಂಡಲ್ ಮಾಡುವಷ್ಟು ದೊಡ್ಡ ಕಲಾವಿದ ಅಲ್ಲ' ಎಂದು ವಿನಯದಿಂದ ಹೇಳಿದ್ದಾರೆ.

  'ನನ್ನ ಸಿನಿಮಾಕ್ಕೆ ಏನಾದರೂ ಸಮಸ್ಯೆಯಾದರೆ ನಾನು ನನ್ನ ಸಿನಿಮಾ ಕಾಪಾಡಿಕೊಳ್ಳುತ್ತೇನೆ. ಅಂತೆಯೇ ಅವರವರ ಸಿನಿಮಾಗಳನ್ನು ಕಾಪಾಡಿಕೊಳ್ಳುವ ಶಕ್ತಿ ದೇವರು ಎಲ್ಲರಿಗೂ ಕೊಟ್ಟಿರುತ್ತಾನೆ. ಅದರ ಬಗ್ಗೆ ನಾನು ಏನು ಹೇಳಲಿ' ಎಂದು ಮಾತು ಮುಗಿಸಿದರು ಸುದೀಪ್.

  ಮಾರ್ಚ್ 11 ರಂದು ಬಿಡುಗಡೆ ಆಗಲಿರುವ ಸಿನಿಮಾ

  ಮಾರ್ಚ್ 11 ರಂದು ಬಿಡುಗಡೆ ಆಗಲಿರುವ ಸಿನಿಮಾ

  'ರಾಬರ್ಟ್' ಸಿನಿಮಾ ಬಿಡುಗಡೆ ಆಗಲಿರುವ ಮಾರ್ಚ್ 11 ರಂದು ತೆಲುಗಿನ ಮೂರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಆ ದಿನದಂದು ರಾಬರ್ಟ್ ಸಿನಿಮಾದ ಬಿಡುಗಡೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ತೆಲುಗು ಚಿತ್ರರಂಗ ತಕರಾರು ತೆಗೆದಿತ್ತು. ಈ ಬಗ್ಗೆ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ದೂರು ನೀಡಿದ್ದರು.

  400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ

  400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ

  ಆದರೆ ಈಗ ಸಮಸ್ಯೆ ಬಗೆಹರಿದಿದ್ದು, ರಾಬರ್ಟ್ ಸಿನಿಮಾದ ತೆಲುಗು ಅವತರಣಿಕೆಯು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 400 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

  ಸುದೀಪ್ ಹಾಗೂ ದರ್ಶನ್ ಒಳ್ಳೆಯ ಗೆಳೆಯರಾಗಿದ್ದರು

  ಸುದೀಪ್ ಹಾಗೂ ದರ್ಶನ್ ಒಳ್ಳೆಯ ಗೆಳೆಯರಾಗಿದ್ದರು

  ನಟ ಸುದೀಪ್ ಹಾಗೂ ದರ್ಶನ್ ಈ ಹಿಂದೆ ಉತ್ತಮ ಗೆಳೆಯರಾಗಿದ್ದು. ಈಗ ಪರಸ್ಪರ ದೂರವಾಗಿದ್ದಾರೆ. ಇಬ್ಬರಿಗೂ ಸಂದರ್ಶನದ ಸಮಯದಲ್ಲಿ ಪರಸ್ಪರರ ಬಗ್ಗೆ ಪ್ರಶ್ನೆಗಳು ಎದುರಾಗುತ್ತವೆ. ಆದರೆ ಇಬ್ಬರೂ ಸಹ ವಿವಾದಕ್ಕೆ ಆಸ್ಪದ ನೀಡದಂತೆ ಉತ್ತರ ನೀಡಿ ಮುಂದೆ ಸಾಗುತ್ತಾರೆ.

  ಚಿತ್ರರಂಗ ಪ್ರವೇಶಿಸಿ 25 ವರ್ಷ

  ಚಿತ್ರರಂಗ ಪ್ರವೇಶಿಸಿ 25 ವರ್ಷ

  ನಟ ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷವಾಗಿದೆ. ಈ ಶುಭ ಸಂದರ್ಭವನ್ನು ದುಬೈನ ಬುರ್ಜ್ ಖಲೀಫಾನಲ್ಲಿ ಆಚರಿಸಲಾಗುತ್ತಿದೆ. ಅಲ್ಲಿಯೇ ಸುದೀಪ್ ರ ಮುಂದಿನ ಸಿನಿಮಾ 'ವಿಕ್ರಾಂತ್ ರೋಣ' ದ ಟೀಸರ್ ಸಹ ಬಿಡುಗಡೆ ಆಗಲಿದೆ.

  English summary
  Actor Sudeep talked about Darshan's Robert movie release issue. He said everyone has power to save their movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X