ವಿದೇಶಿ ಕನ್ನಡಿಗರೊಂದಿಗೆ ಕಿಚ್ಚ ಸುದೀಪ್ ನಡೆಸಲಿದ್ದಾರೆ ಮಾತು-ಕತೆ
ಲಾಕ್‌ಡೌನ್‌ನಿಂದಾಗಿ ಯಾವ ಸಿನಿ ಸ್ಟಾರ್‌ಗಳೂ ಮನೆ ಬಿಟ್ಟು ಹೊರಗೆ ಬರಲಾಗಿಲ್ಲ. ಸದಾ ಅಭಿಮಾನಿಗಳ ಜೊತೆ, ಶೂಟಿಂಗ್ ಸೆಟ್‌ನಲ್ಲಿ ಜನರ ಜೊತೆ ಇರುತ್ತಿದ್ದ ಸ್ಟಾರ್‌ಗಳು ಮನೆಗಳಲ್ಲಿ ಏಕಾಂಗಿ ಆಗಿಬಿಟ್ಟಿದ್ದಾರೆ.
Recommended Video
ಆದರೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಕೆಲವು ಸ್ಟಾರ್ ನಟರು. ಸುದೀಪ್ ಸಹ ಆಗಾಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಮಾತು-ಕತೆ ಮಾಡುತ್ತಲೇ ಇರುತ್ತಾರೆ.
ತಮ್ಮ ಅಭಿಮಾನಿಗಳಿಗೆ ಫೇಸ್‌ಬುಕ್ ನಲ್ಲಿ ಶುಭಾಶಯ ಕೋರುವುದು, ಹಿತನುಡಿಗಳನ್ನು ಹೇಳುವುದು, ಪ್ರೇರೇಪಿಸುವ ಕಾರ್ಯವನ್ನು ಮಾಡುತ್ತಿರುತ್ತಾರೆ.

ವಿದೇಶದಲ್ಲಿರುವ ತಮ್ಮ ಅಭಿಮಾನಿಗಳೊಂದಿಗೆ ಸಹ ಸುದೀಪ್ ಮಾತು-ಕತೆ ನಡೆಸಲಿದ್ದಾರೆ. ಇದೊಂದು ದೊಡ್ಡ ಮಟ್ಟದ ಆನ್‌ಲೈನ್ ಚರ್ಚೆ ಆಗಿದ್ದು, ಸುದೀಪ್ ಅವರು ಕೆನಡಾ ಮತ್ತು ಅಮೆರಿಕದ ಕನ್ನಡಿಗರನ್ನುದ್ದೇಶಿಸಿ ಲೈವ್ ಮಾತುಕತೆ ನಡೆಸಲಿದ್ದಾರೆ.
ಈ ಆನ್‌ಲೈನ್ ಚರ್ಚೆಯನ್ನು 'ಮೈಸೂರು ಸ್ಟುಡಿಯೋಸ್ ಕೆನಡಾ' ಆಯೋಜಿಸಿದೆ. ಅಮೆರಿಕ ಮತ್ತು ಕೆನಡಾ ದ ಹಲವು ಕನ್ನಡ ಸಂಘಟನೆಗಳು ಸಹಕಾರ ನೀಡಿವೆ. ಮಾತುಕತೆಯು ಜೂನ್ 6 ರಂದು ಭಾರತೀಯ ಕಾಲಮಾನ ರಾತ್ರಿ 9 ಕ್ಕೆ ಪ್ರಾರಂಭವಾಗಲಿದೆ. ಈ ಸಂವಾದವು ಜೂಮ್ ಆಪ್ ಮೂಲಕ ನಡೆಯಲಿದೆ.


Click it and Unblock the Notifications











