'ಕಬ್ಜ' ಚಿತ್ರವನ್ನು ಕಿಚ್ಚ ಸುದೀಪ್ ಒಪ್ಪಿಕೊಂಡಿದ್ದು ಯಾರಿಗೋಸ್ಕರ?
ಭಾರತೀಯ ಸಿನಿಮಾ ರಂಗದಲ್ಲಿ ಆರ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಬಹಳ ವಿಶೇಷವಾಗಿದೆ. ಕನ್ನಡದ ಚಿತ್ರವೊಂದು ಭಾರತದ ಏಳು ಪ್ರಮುಖ ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಭಾರಿ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಸ್ವತಃ ಚಂದ್ರು ಅವರೇ ಹೇಳಿರುವಂತೆ ಕೆಜಿಎಫ್ ಚಾಪ್ಟರ್ 1 ಸಿನಿಮಾದ ಬಂದ್ಮೇಲೆ ಇಂತಹದೊಂದು ಪ್ರಾಜೆಕ್ಟ್ ಮಾಡಬೇಕೆಂದು ಆಸೆಯಿಂದ ತಯಾರಾಗುತ್ತಿರುವ ಸಿನಿಮಾ ಇದು.
ಸರ್ಪ್ರೈಸ್ ಎಂಬಂತೆ ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಸುತ್ತಿರುವ ವಿಚಾರವನ್ನು ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಕಬ್ಜ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ಈ ಪಾತ್ರದ ಬಗ್ಗೆ ಸುದೀಪ್ ಇದುವರೆಗೂ ಮಾತನಾಡಿರಲಿಲ್ಲ. ಇದೀಗ, ಕಬ್ಜ ಚಿತ್ರವನ್ನು ಏಕೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮುಂದೆ ಓದಿ...

ಚಂದ್ರು ಬಂದ್ರೆ ಇಲ್ಲ ಅನ್ನೋಕೆ ಕಷ್ಟ
''ಚಂದ್ರು ಅವರು ಬಂದು ಕೂತ್ಕೊಂಡ್ರೆ ಇಲ್ಲ ಅನ್ನೋಕೆ ಕಷ್ಟ. ಅವರೊಂದು ರೀತಿ ಮಗು ಥರ. ಈ ಪಾತ್ರಕ್ಕೆ ನಾನೇ ಏಕೆ ಎಂಬ ಸಣ್ಣ ಪ್ರಶ್ನೆ ನನ್ನಲ್ಲಿ ಇರುತ್ತದೆ. ಅದು ಯಾವುದೇ ಚಿತ್ರವಾದರು. ಅದನ್ನು ಅವರು ಹೇಳಿದ್ಮೇಲೆ ಅನಿಸುತ್ತದೆ, 'ಹೌದು ಇರಬಹುದು ಅಲ್ವೇ' ಅಂತ. ಅವರು ಹೇಳಿದ್ದು, ಅವರು ಚಿತ್ರೀಕರಿಸಿರುವ ದೃಶ್ಯಗಳು ಇಷ್ಟ ಆಯ್ತು. ಬಹಳ ದೊಡ್ಡ ಕನಸಿನೊಂದಿಗೆ ಸಿನಿಮಾ ಮಾಡ್ತಿದ್ದಾರೆ. ಅದರಲ್ಲಿ ನಾನು ಭಾಗಿಯಾಗಿರುವುದು ಸಂತಸ ತಂದಿದೆ'' ಎಂದು ಸುದೀಪ್ ತಿಳಿಸಿದರು.

ಸೂಪರ್ ಸ್ಟಾರ್ ಚಿತ್ರದಲ್ಲಿ ನಾನು
''ಬಹಳ ದೊಡ್ಡ ಸೂಪರ್ ಸ್ಟಾರ್ ಚಿತ್ರದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವುದು ಖುಷಿನೇ. ಬಹಳ ದೊಡ್ಡ ಹೆಸರು, ನಾವು ಅವರ ಚಿತ್ರಗಳನ್ನು ನೋಡಿ ಬಂದವರು. ಅವರೊಟ್ಟಿಗೆ 'ಮುಕುಂದ ಮುರಾರಿ' ಸಿನಿಮಾ ಮಾಡಿದೆ, ಅವರೊಟ್ಟಿಗೆ ಕೂತು ಮಾತಾಡುತ್ತೇನೆ ಅಂದ ಮಾತ್ರಕ್ಕೆ ಅವರನ್ನು ನೋಡುವ ರೀತಿ ಬದಲಾಗಿಲ್ಲ. ಇನ್ನೊಂದು ಸಲ ಅವರ ಜೊತೆ ನಟಿಸುವ ಅವಕಾಶ'' ಎಂದು ಸುದೀಪ್ ಹೇಳಿಕೊಂಡಿದ್ದಾರೆ.
Recommended Video

ಕಬ್ಜ ದೃಶ್ಯ ಚೆನ್ನಾಗಿದೆ
''ಕಬ್ಜ ಸಿನಿಮಾದ ಕೆಲವು ದೃಶ್ಯಗಳನ್ನು ನೋಡಿದೆ, ನಿಜವಾಗಲೂ ತುಂಬ ಅದ್ಭುತವಾಗಿ ಈ ಚಿತ್ರವನ್ನು ಕೆತ್ತಿದ್ದಾರೆ. ಉಪೇಂದ್ರ ಅವರು ಬಹಳ ಚೆನ್ನಾಗಿ ಮಾಡಿದ್ದಾರೆ ಹಾಗೂ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ'' ಎಂದು ಸುದೀಪ್ ಅವರು ಆರ್ ಚಂದ್ರು ನಿರ್ದೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಭಾರ್ಗವ್ ಬಕ್ಷಿ' ಪಾತ್ರದಲ್ಲಿ ಸುದೀಪ್
ಅಂದ್ಹಾಗೆ, 'ಕಬ್ಜ' ಸಿನಿಮಾದಲ್ಲಿ 70-80 ರ ದಶಕದ ಅಂಡರ್‌ವರ್ಲ್ಡ್ ಕತೆಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಸುದೀಪ್ ಅವರು ಭಾರ್ಗವ್ ಬಕ್ಷಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸುದೀಪ್ ಅವರದ್ದು ಸಹ ಡಾನ್ ಪಾತ್ರ ಎಂದು ಹೇಳಲಾಗಿದೆ. ಸಂಪೂರ್ಣವಾಗಿ ರೆಟ್ರೋ ಶೈಲಿಯಲ್ಲಿ ಸಿನಿಮಾ ತಯಾರಾಗಲಿದೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.


Click it and Unblock the Notifications











