Just In
Don't Miss!
- News
ದೆಹಲಿ ಆವರಿಸಿದ ದಟ್ಟ ಮಂಜು; 50ಕ್ಕೂ ಹೆಚ್ಚು ವಿಮಾನಗಳು ವಿಳಂಬ
- Lifestyle
ನೀವು ಅಸಡ್ಡೆ ಮಾಡುವ ಆಲೂಗಡ್ಡೆಯಲ್ಲಿದೆ ಸೌಂದರ್ಯವರ್ಧಕ ಗುಣಗಳು
- Education
NIA Recruitment 2021: 15 ಡೆಪ್ಯುರಿಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಬೇಡಿಕೆ ಹೆಚ್ಚಿದಂತೆ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಕಾಯುವಿಕೆ ಅವಧಿಯಲ್ಲಿ ಮತ್ತಷ್ಟು ಹೆಚ್ಚಳ
- Finance
ತನ್ನ ಗೌಪ್ಯತೆ ನೀತಿ ಮತ್ತು ಸೇವಾ ನಿಯಮಗಳ ನವೀಕರಣವನ್ನು ಮುಂದೂಡಿದ ವಾಟ್ಸಾಪ್
- Sports
ಐಪಿಎಲ್ ಹರಾಜಿಗೆ ಅರ್ಜುನ್ ತೆಂಡೂಲ್ಕರ್ ಅರ್ಹ, ಎಂಐ ಆರಿಸುತ್ತಾ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾರ್ಡ್ಸ್ ನಲ್ಲಿ ಕ್ರಿಕೆಟ್ ಪಂದ್ಯ ಗೆದ್ದು ಅಗಲಿದ ಸ್ನೇಹಿತನಿಗೆ ಗೆಲುವು ಅರ್ಪಿಸಿದ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡ ಮತ್ತೊಮ್ಮೆ ಲಾರ್ಡ್ಸ್ ಮೈದಾನದಲ್ಲಿ ಗೆದ್ದು ಕೇಕೆ ಹಾಕಿದ್ದಾರೆ. ಸುದೀಪ ಮತ್ತು ತಂಡ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಆಗಲೆ ಮೊದಲ ಮ್ಯಾಚ್ ಗೆದ್ದು ಸಂತಸದಿಂದ ಬೀಗಿದ್ದ ಸುದೀಪ ಬಳಗ ಮತ್ತೊಮ್ಮೆ ಗೆಲುವು ದಾಖಲಿಸಿದೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಪಂದ್ಯ ನಡೆದಿದ್ದು ಸುದೀಪ ಟೀಂ ರೋಚಕ ಗೆಲುವು ಪಡೆದಿದೆ. ಅಭಿನಯ ಚಕ್ರವರ್ತಿಯ ತಂಡದಲ್ಲಿ ಪ್ರದೀಪ್, ರಾಜೀವ್ ಸೇರಿದಂತೆ ಅನೇಕರಿದ್ದಾರೆ. ಎಲ್ಲರು ಕೂಡ ಸಂತಸದಿಂದ ಕುಣಿದು ಕುಪ್ಪಳಿಸಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ಮೊದಲ ಪಂದ್ಯ ಗೆದ್ದು ಬೀಗಿದ ಸುದೀಪ ತಂಡ
ಆದ್ರೆ ಈ ಸಂತಸದ ನಡುವೆ ಮಾಣಿಕ್ಯನ ಬಳಗಕ್ಕೆ ಅಷ್ಟೆ ದುಃಖ ಕೂಡ ಕಾಡುತ್ತಿದೆ. ಯಾಕಂದ್ರೆ ಸುದೀಪ್ ಸ್ನೇಹಿತ, ನಟ ಮತ್ತು ಕ್ರಿಕೆಟ್ ಆಟಗಾರ ಧ್ರುವ ಸದಾ ಅವರ ಜೊತೆಯಲ್ಲಿಯೆ ಇರುತ್ತಿದ್ದರು. ಕಳೆದ ಬಾರಿ ಕ್ರಿಕೆಟ್ ಕಾಶಿಯಲ್ಲಿ ಕಾರ್ಪೋರೇಟ್ ಪಂದ್ಯ ಆಡುವಾಗ ಧ್ರುವ ಜೊತೆಯಲ್ಲಿದ್ರು. ಆದ್ರೆ ಈ ಬಾರಿ ಅವರನ್ನು ತುಂಬ ಮಿಸ್ ಮಾಡಿಕೊಂಡ ತಂಡ ಈ ಗೆಲುವನ್ನು ಅಗಲಿದ ಧ್ರುವ ಅವರಿಗೆ ಅರ್ಪಿಸಿದ್ದಾರೆ.'
ಪಂದ್ಯ ಗೆದ್ದ ಖುಷಿಯನ್ನು ಸದೀಪ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪಂದ್ಯದ ಆಯೋಜಕರಿಗೆ, ಉತ್ತಮ ಆಥಿತ್ಯ ನೀಡಿದ ಲಾರ್ಡ್ಸ್ ಅಧಿಕಾರಿಗಳಿಗೆ ಕಿಚ್ಚ ಧನ್ಯವಾದ ತಿಳಿಸುವ ಜೊತೆಗೆ ಈ ಗೆಲುವನ್ನು ಧ್ರುವ ಅವರಿಗೆ ಅರ್ಪಿಸಿರುವುದಾಗ ಹೇಳಿದ್ದಾರೆ.
ಮತ್ತೊಮ್ಮೆ ಗೆದ್ದು ಬೀಗಿದ ಸುದೀಪ ತಂಡಕ್ಕೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದುಬರುತ್ತಿದೆ. ಸದ್ಯ ಇಂಗ್ಲೆಂಡ್ ನಲ್ಲಿ ಬೀಡು ಬಿಟ್ಟಿರುವ ಕಿಚ್ಚ ವಿಶ್ವ ಕಪ್ ಕ್ರಿಕೆಟ್ ಕೂಡ ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ. ಭಾನುವಾರ ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ.