ಕಿಚ್ಚ ಸುದೀಪ್ ತೆಲುಗು ಚಿತ್ರ ಏಪ್ರಿಲ್ 18ಕ್ಕೆ ರಿಲೀಸ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ತೆಲುಗು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 'ಈಗ' ಚಿತ್ರದ ಬಳಿಕ ಸುದೀಪ್ ಮತ್ತೊಮ್ಮೆ ಆಂಧ್ರ ಸಿನಿ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.
ಕನ್ನಡದಲ್ಲಿ ಭರ್ಜರಿ ಯಶಸ್ಸು ದಾಖಲಿಸಿದ ಬಚ್ಚನ್ ಚಿತ್ರ ತೆಲುಗಿಗೆ ಅದೇ ಹೆಸರಿನಲ್ಲಿ ಡಬ್ ಆಗಿದ್ದು ಇದೀಗ ತೆರೆ ಕಾಣಲು ಸಜ್ಜಾಗಿದೆ. ಇದೇ ಏಪ್ರಿಲ್ 18ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿ ಮೂವರು ನಾಯಕಿಯರು ಇದ್ದಾರೆ. ಪರುಲ್ ಯಾದವ್, ಭಾವನಾ ಮತ್ತು ತುಲಿಪ್ ಜೋಷಿ ಚಿತ್ರದ ಹೀರೋಯಿನ್ಸ್.
ಶಶಾಂಕ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಐಟಂ ಹಾಡಿನಲ್ಲಿ ಡೈಸಿ ಶಾ ತಮ್ಮ ಮೈಮಾಟ ತೋರಿದ್ದು ತೆಲುಗು ಪ್ರೇಕ್ಷಕರ ಅಭಿರುಚಿ ತಣಿಸಲಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ತುಮ್ಮಲಪಲ್ಲಿ ರಾಮಸತ್ಯನಾರಾಯಣ ಎಂಬುವವರು ಕನ್ನಡ ಚಿತ್ರದ ಡಬ್ಬಿಂಗ್ ರೈಟ್ಸ್ ಪಡೆದಿದ್ದು ಬಚ್ಚನ್ ಹೆಸರಿನಲ್ಲೇ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಸುದೀಪ್ ಚಿರಪರಿತರಾಗಿದ್ದಾರೆ.
ಕೂಲಾಗಿದ್ದಾಗ ಮಾತ್ರ ನಾನು ಜಂಟಲ್ ಮೆನ್ ಕೋಪ ಬಂದಾಗ ನಾನು ಬಾರ್ಸೋ ಬಚ್ಚನ್, ನನ್ ಹೊಡ್ತಾನೆ ನನ್ ವಿಸಿಟಿಂಗ್ ಕಾರ್ಡ್, ಗೂಂಡಾಗಿರಿ ಮಾಡೋರ್ ಮುಂದೆ ಗಾಂಧಿಗಿರಿ ನಡೆಯಲ್ಲ ಬಚ್ಚನ್ ಗಿರಿನೇ ತೋರಿಸ್ಬೇಕು...ಈ ರೀತಿಯ ಪಂಚಿಂಗ್ ಡೈಲಾಗ್ಸ್ ಮೂಲಕ ಚಿತ್ರ ಸುದೀಪ್ ಅಭಿಮಾನಿಗಳನ್ನು ರಂಜಿಸಿತ್ತು.
ಇದೀಗ ಇದೇ ರೀತಿಯ ಡೈಲಾಗ್ ಗಳು ತೆಲುಗು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುವುದು ಗ್ಯಾರಂಟಿ ಎಂಬ ನಿರೀಕ್ಷೆಯಲ್ಲಿದ್ದಾರೆ ನಿರ್ಮಾಪಕರು. ಕನ್ನಡ ಚಿತ್ರವನ್ನು ಉದಯ್ ಕೆ ಮೆಹ್ತಾ ನಿರ್ಮಿಸಿದ್ದರು. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.
ಉಳಿದ ಪಾತ್ರವರ್ಗದಲ್ಲಿ ರವಿಶಂಕರ್, ಆಶಿಶ್ ವಿದ್ಯಾರ್ಥಿ, ನಾಜರ್, ಪ್ರದೀಪ್ ರಾವತ್, ಜೈ ಜಗದೀಶ್, ಸುಧಾ ಬೆಳವಾಡಿ, ರಾಮಕೃಷ್ಣ, ಶ್ರೀಧರ್, ಅಚ್ಯುತ ಕುಮಾರ್, ಶ್ರುತಿ, ಡೈಸಿ ಶಾ, ಸಾಧು ಕೋಕಿಲ, ಬುಲೆಟ್ ಪ್ರಕಾಶ್ ಮುಂತಾದವರು.
ಬಚ್ಚನ್ ಚಿತ್ರದ ಇನ್ನೊಂದು ವಿಶೇಷ ಎಂದರೆ, ಗಲ್ಫ್ ದೇಶಗಳಲ್ಲೂ ಬಿಡುಗಡೆಯಾಗಿ ಅಲ್ಲೂ ಸದ್ದು ಮಾಡಿದ್ದು. ದುಬೈ, ಅಬುಧಾಬಿ ಹಾಗೂ ಶಾರ್ಜಾದಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.


Click it and Unblock the Notifications











