ಸಂತೋಷ್ ಆನಂದ್ ರಾಮ್ ಬೆನ್ನು ತಟ್ಟಿದ ಕಿಚ್ಚ ಸುದೀಪ್
Recommended Video

ಕನ್ನಡದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಎರಡೇ ಎರಡು ಸಿನಿಮಾ ಮಾಡಿದ್ದರು ಕೂಡ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ತಮ್ಮ ಎರಡು ಸಿನಮಾಗಳ ಮೂಲಕ ದೊಡ್ಡ ಯಶಸ್ಸು ಕಂಡಿರುವ ಸಂತೋಷ್ ಅವರಿಗೆ ಈಗ ಕಿಚ್ಚ ಸುದೀಪ್ ಬೆನ್ನು ತಟ್ಟಿದ್ದಾರೆ.
ಇತ್ತೀಚಿಗಷ್ಟೆ ನಟ ಸುದೀಪ್ ಚಿತ್ರರಂಗದಲ್ಲಿ 22 ವರ್ಷಗಳನ್ನು ಪೂರೈಸಿದ್ದರು. ಈ ಹಿನ್ನಲೆಯಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಟ್ವಿಟ್ಟರ್ ಖಾತೆಯಲ್ಲಿ ''22 ವರ್ಷ ಕಂಪ್ಲೀಟ್ ಮಾಡಿರುವ ಸುದೀಪ್ ಸರ್ ನಿಮಗೆ ಶುಭಾಶಯ. ಇದೇ ರೀತಿ ನಮಗೆ ಸ್ಫೂರ್ತಿ ನೀಡುತ್ತಿರಿ'' ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ಗೆ ಸುದೀಪ್ ನಿನ್ನೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂತೋಷ್ ಆನಂದ್ ರಾಮ್ ಅವರಿಗೆ ಧನ್ಯವಾದ ಹೇಳಿರುವ ಸುದೀಪ್ ''ನಿಮ್ಮ ಅತ್ಯುತ್ತಮ ಕೆಲಸವನ್ನು ಮುಂದುವರೆಸಿ. ಮತ್ತು ಇದೇ ರೀತಿಯ ಒಳ್ಳೆಯ ಮನಸು ನಿಮಗೆ ಇರಲಿ.'' ಎಂದು ಹೇಳಿದ್ದಾರೆ.

ಈ ಹಿಂದೆಯೇ ಸುದೀಪ್ ಜೊತೆಗೆ ಸಂತೋಷ್ ಆನಂದ್ ರಾಮ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆ ವೇಳೆ ಸಂತೋಷ್ ಕೂಡ ಮಾತನಾಡಿ ''ನಾನು ಸುದೀಪ್ ಸರ್ ಜೊತೆ ಖಂಡಿತ ಸಿನಿಮಾ ಮಾಡುತ್ತೇನೆ. ಆದರೆ ಅದು ಯಾವಾಗ ಅಂತ ಗೊತ್ತಿಲ್ಲ'' ಎಂದು ಹೇಳಿದ್ದರು. ಇನ್ನೂ ಸಂತೋಷ್ ಆನಂದ್ ರಾಮ್ ಸದ್ಯ ಮತ್ತೆ ಪುನೀತ್ ರಾಮ್ ಕುಮಾರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.


Click it and Unblock the Notifications











