ಬಿಗ್ ಸರ್ಪ್ರೈಸ್ ಕೊಟ್ಟ ಕಿಚ್ಚ ಸುದೀಪ್.! ಏನ್ ಗೊತ್ತಾ.?
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ಪೈಲ್ವಾನ್' ಆಗಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಘರ್ಜಿಸಿದರು. ಇನ್ನೂ 'ದಬಾಂಗ್-3' ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ತೊಡೆ ತಟ್ಟಿದ ಸುದೀಪ್ ಸದ್ಯಕ್ಕೆ 'ಕೋಟಿಗೊಬ್ಬ-3' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಿದ್ದಾರೆ.
'ಕೋಟಿಗೊಬ್ಬ-3' ಮುಗಿದ ಮೇಲೆ ಸುದೀಪ್ ಯಾವ ಪ್ರಾಜೆಕ್ಟ್ ನ ಕೈಗೆತ್ತಿಕೊಳ್ಳಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇರುವಾಗಲೇ ಬಿಗ್ ಸರ್ಪ್ರೈಸ್ ಸಿಕ್ಕಿದೆ.
ಆ ಸರ್ಪ್ರೈಸ್ ಏನಪ್ಪಾ ಅಂದ್ರೆ, ಕಿಚ್ಚ ಸುದೀಪ್ ಮರಳಿ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ. 'ಮಾಣಿಕ್ಯ' ಬಳಿಕ ನಟನೆಯಲ್ಲೇ ಬಿಜಿಯಾದ ಸುದೀಪ್ ಇದೀಗ ಮತ್ತೆ ನಿರ್ದೇಶನದ ಕಡೆ ಮುಖ ಮಾಡಿದ್ದಾರೆ.

ಏಳು ವರ್ಷಗಳ ನಂತರ ಚಿತ್ರ ನಿರ್ದೇಶನಕ್ಕೆ ಇಳಿದಿರುವ ಬಗ್ಗೆ ಸುದೀಪ್ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದಾರೆ. ''ನಾನು ನಿರ್ದೇಶನ ಮಾಡುತ್ತಿರುವ ಚಿತ್ರದ ಬಗ್ಗೆ ಶೀಘ್ರದಲ್ಲಿ ಮಾಹಿತಿ ಹಂಚಿಕೊಳ್ಳುತ್ತೇನೆ. ಯಾವುದನ್ನ ಮಾಡಲು ನಾನು ಸದಾ ಇಷ್ಟ ಪಡುತ್ತೇನೋ, ಅದನ್ನ ಮಾಡುತ್ತಿರುವುದಕ್ಕೆ ನನಗೆ ಖುಷಿ ಇದೆ. ಏಳು ವರ್ಷಗಳ ಗ್ಯಾಪ್ ಬಳಿಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದೇನೆ. ನೀವೆಲ್ಲರೂ ನನ್ನೊಂದಿಗೆ ಇರಿ. ನಾನು ನಿಮ್ಮನ್ನು ನಿರಾಸೆ ಮಾಡುವುದಿಲ್ಲ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಮಾಡಿರುವ ಈ ಟ್ವೀಟ್ ನೋಡಿ ಫ್ಯಾನ್ಸ್ ಹಾರ್ಟ್ ಬೀಟ್ ರೈಸ್ ಆಗಿದೆ. ಸುದೀಪ್ ನಿರ್ದೇಶನದ ಚಿತ್ರದ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ಅಪ್ಪಿ ತಪ್ಪಿ ಸುದೀಪ್ ಏನಾದರೂ ರೀಮೇಕ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರಾ ಎಂಬ ಡೌಟ್ ಹಲವರಲ್ಲಿ ಇದೆ. ಅದಕ್ಕೂ ಟ್ವಿಟ್ಟರ್ ನಲ್ಲೇ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.
''ಈ ಬಾರಿ ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾ ರೀಮೇಕ್ ಅಲ್ಲ. ರೀಮೇಕ್ ಮಾಡುವುದನ್ನು ಬಹಳ ಹಿಂದೆಯೇ ನಿಲ್ಲಿಸಿದೆ'' ಎಂದು ಟ್ವೀಟಿಸಿದ್ದಾರೆ ಸುದೀಪ್.
ಅಲ್ಲಿಗೆ, ಸುದೀಪ್ ಫ್ರೆಶ್ ಕಥೆಯೊಂದನ್ನು ಹೊತ್ತು ಬರುವುದು ಪಕ್ಕಾ ಅಂತಾಯ್ತು. ವರ್ಷಾಂತ್ಯದಲ್ಲಿ ನಿರ್ದೇಶನದ ಬಗ್ಗೆ ಬಿಗ್ ಸರ್ಪ್ರೈಸ್ ಕೊಟ್ಟಿರುವ ಸುದೀಪ್, ಮುಂದಿನ ವರ್ಷಾರಂಭದಲ್ಲಿ ಏನೇನ್ ಬ್ರೇಕಿಂಗ್ ನ್ಯೂಸ್ ಕೊಡ್ತಾರೋ.?!


Click it and Unblock the Notifications











