ಕಿಚ್ಚ ಸುದೀಪ್ ಕಂಠಸಿರಿಯಲ್ಲಿ 'ರಾಗ' ಚಿತ್ರದ ಟ್ರೈಲರ್
ಮಿತ್ರ ಎಂಟರ್ ಟೈನರ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಪಿ.ಸಿ.ಶೇಖರ್ ನಿರ್ದೇಶನದ 'ರಾಗ' ಚಿತ್ರದ ಟ್ರೈಲರ್ ಗೆ ಕಿಚ್ಚ ಸುದೀಪ್ ಧ್ವನಿ ನೀಡುತ್ತಿದ್ದಾರೆ. ಈ ತಿಂಗಳಾಂತ್ಯಕ್ಕೆ 'ರಾಗ' ಚಿತ್ರದ ಟ್ರೈಲರ್ ಬಿಡುಗಡೆ ಆಗಲಿದೆ.
'ರಾಗ' ಚಿತ್ರದಲ್ಲಿ ಮಿತ್ರ ಕುರುಡನ ಪಾತ್ರ ನಿರ್ವಹಿಸುತ್ತಿದ್ದಾರೆ. ಅಂಧರ ಮೇಲೆ ಅಪಾರ ಅಭಿಮಾನ ಹೊಂದಿರುವ ಕಿಚ್ಚ ಸುದೀಪ್, 'ರಾಗ' ಚಿತ್ರಕಥೆಯನ್ನು ಕೇಳಿದ ಕೂಡಲೆ 'ವಾಯ್ಸ್ ಓವರ್' ನೀಡಲು ಒಪ್ಪಿಗೆ ನೀಡಿದ್ದಾರೆ.

''ಮೊದಲಿನಿಂದಲೂ ನನಗೆ ಸುದೀಪ್ ಧ್ವನಿ ಅಂದ್ರೆ ಬಹಳ ಇಷ್ಟ. ನನ್ನ ನಿರ್ದೇಶನದ ಚಿತ್ರಕ್ಕೆ ಅವರು ಧ್ವನಿ ನೀಡುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ'' ಎನ್ನುತ್ತಾರೆ ನಿರ್ದೇಶಕ ಪಿ.ಸಿ.ಶೇಖರ್.
ವೈದಿ ಛಾಯಾಗ್ರಹಣ ಇರುವ 'ರಾಗ' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮಿತ್ರ, ಭಾಮಾ, ಅವಿನಾಶ್, ಜೈಜಗದೀಶ್, ರಮೇಶ್ ಭಟ್, ಸಿಹಿ ಕಹಿ ಚಂದ್ರು ರಂತಹ ದೊಡ್ಡ ತಾರಾಬಳಗ 'ರಾಗ' ಚಿತ್ರದಲ್ಲಿದೆ.
ಸುದೀಪ್ ಧ್ವನಿ ಇರುವ 'ರಾಗ' ಚಿತ್ರದ ಬಹುನಿರೀಕ್ಷಿತ ಟ್ರೈಲರ್ ನಿರೀಕ್ಷಿಸಿ....


Click it and Unblock the Notifications











