twitter
    For Quick Alerts
    ALLOW NOTIFICATIONS  
    For Daily Alerts

    ಶಿವಣ್ಣನ ಸಾಂಗ್ ರಿಲೀಸ್ ಮಾಡಲಿದ್ದಾರೆ ಕಿಚ್ಚ ಸುದೀಪ್

    |

    ದಿ ವಿಲನ್ ಚಿತ್ರದ ನಂತರ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇಬ್ಬರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾದರು. ಇದೀಗ, ತುಂಬಾ ದಿನದ ನಂತರ ಶಿವಣ್ಣನ ಚಿತ್ರಕ್ಕೆ ಸುದೀಪ್ ಸಾಥ್ ನೀಡುತ್ತಿದ್ದಾರೆ.

    ಹೌದು, ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾದ ಹಾಡೊಂದನ್ನ ಕಿಚ್ಚ ಸುದೀಪ್ ಬಿಡುಗಡೆ ಮಾಡುತ್ತಿದ್ದಾರೆ. ಮಾರ್ಚ್ 15 ರಂದು ಕವಚ ಸಿನಿಮಾದ 'ರೆಕ್ಕೆಯಾ' ಹಾಡಿನ ವಿಡಿಯೋ ವರ್ಷನ್ ರಿಲೀಸ್ ಮಾಡಲಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡನ್ನ ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಶ್ರೀಯಾ ಜಯದೀಪ್ ಈ ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

    ಹಲವು ವರ್ಷದ ನಂತರ ಒಟ್ಟಿಗೆ ಬರ್ತಿದ್ದಾರೆ 'ಕೋದಂಡರಾಮ'ಹಲವು ವರ್ಷದ ನಂತರ ಒಟ್ಟಿಗೆ ಬರ್ತಿದ್ದಾರೆ 'ಕೋದಂಡರಾಮ'

    ಈಗಾಗಲೇ ಕವಚ ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಯಾಗಿದ್ದು ಸ್ಯಾಂಡಲ್ ವುಡ್ ಪ್ರೇಕ್ಷಕರ ಗಮನ ಸೆಳೆದಿದೆ. ಏಪ್ರಿಲ್ 5 ರಂದು ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ.

    Sudeep to release kavacha video song

    ಟಿವಿಯಲ್ಲಿ 'ದಿ ವಿಲನ್' ನೋಡಿದ ಅಭಿಮಾನಿಗಳು ಏನೆಲ್ಲಾ ಮಾಡಿದ್ರು ನೋಡಿಟಿವಿಯಲ್ಲಿ 'ದಿ ವಿಲನ್' ನೋಡಿದ ಅಭಿಮಾನಿಗಳು ಏನೆಲ್ಲಾ ಮಾಡಿದ್ರು ನೋಡಿ

    2016ರಲ್ಲಿ ತೆರೆಕಂಡಿದ್ದು ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ ಸಿನಿಮಾ ಇದಾಗಿದ್ದು, ಹಲವು ವರ್ಷದ ನಂತರ ಶಿವಣ್ಣ ರೀಮೇಕ್ ಮಾಡ್ತಿದ್ದಾರೆ. ಜಿವಿಆರ್ ವಾಸು ನಿರ್ದೇಶನದ ಈ ಚಿತ್ರದಲ್ಲಿ ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ನಟಿಸಿದ್ದಾರೆ.

    English summary
    Kannada actor kiccha sudeep will release video song of kavacha movie, starring Hatric hero shiva rajkumar in the lead role.
    Friday, March 15, 2019, 10:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X