ದರ್ಶನ್ ನಂತರ 'ವಾಸು'ಗೆ ಸಾಥ್ ನೀಡಿದ ಸುದೀಪ್
Recommended Video

ಅನಿಶ್ ತೇಜೇಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಇದೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 'ವಾಸು' ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿ ವಾಸು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಈಗ ದರ್ಶನ್ ನಂತರ ಕಿಚ್ಚ ಸುದೀಪ್ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ವಾರ ತೆರೆಕಾಣಲಿರುವ ಈ ಚಿತ್ರದ ಟ್ರೈಲರ್ ನ್ನ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಸುದೀಪ್, ''ಇಡೀ ಚಿತ್ರತಂಡಕ್ಕೆ ಹಾಗೂ ನಟ ಅನಿಶ್ ಗೆ ಶುಭವಾಗಲಿ'' ಎಂದು ಹಾರೈಸಿದ್ದಾರೆ.
ಇನ್ನು ಸುದೀಪ್ ಅವರ ವಾಸು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದನ್ನ ಕಂಡು ಅನಿಶ್ ಖುಷಿಯಾಗಿದ್ದಾರೆ. ಇದಕ್ಕಾಗಿ ಸುದೀಪ್ ಅವರಿಗೆ ಥ್ಯಾಂಕ್ಸ್ ಕೂಡ ಹೇಳಿದ್ದಾರೆ.

'ಅಕಿರಾ' ಚಿತ್ರದ ನಂತರ ಅನಿಶ್ ಅಭಿನಯದ ಸಿನಿಮಾ ವಾಸು ನಾನ್ ಪಕ್ಕಾ ಕಮರ್ಷಿಯಲ್. ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ವಿಶೇಷ ಅಂದ್ರೆ ಈ ಚಿತ್ರವನ್ನ ಸ್ವತಃ ಅನಿಶ್ ತೇಜೇಶ್ವರ್ ನಿರ್ಮಾಣ ಮಾಡಿದ್ದಾರೆ. ಹೀಗಾಗಿ, ಅನಿಶ್ ಗೆ ಈ ಚಿತ್ರ ತುಂಬಾ ಮುಖ್ಯವಾಗಿದೆ. ನಟನೆಯಲ್ಲಿ ಬ್ರೇಕ್ ಸಿಗುವ ನಿರೀಕ್ಷೆಯಲ್ಲಿರುವ ಅನಿಶ್, ನಿರ್ಮಾಪಕನಾಗಿಯೂ ಸಕ್ಸಸ್ ಪಡೆಯಬೇಕಿದೆ.


Click it and Unblock the Notifications











