ಯುವರಾಜ್ ಸಿಂಗ್ ಬಗ್ಗೆ ಸ್ಫೂರ್ತಿದಾಯಕ ಟ್ವೀಟ್ ಮಾಡಿದ ಸುದೀಪ್
Recommended Video
ಭಾರತ ಕ್ರಿಕೆಟ್ ತಂಡ ಎಡಗೈ ಆಲ್ ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಯುವರಾಜ್ ನಿವೃತ್ತಿ ನೀಡಿದ್ದಕ್ಕಾಗಿ ಕ್ರೀಡಾಭಿಮಾನಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
2011 ವರ್ಲ್ಡ್ ಕಪ್ ಹೀರೋ ವಿ ಮಿಸ್ ಯೂ....ಮತ್ತೆ ನಿಮ್ಮನ್ನ ಬ್ಲೂ ಜೆರ್ಸಿಯಲ್ಲಿ ನೋಡ್ಬೇಕು.... ನೀವು ಇನ್ನಷ್ಟು ಕಾಲ ಆಡಬೇಕಿತ್ತು....ಎಂದೆಲ್ಲ ಹೇಳುತ್ತಿದ್ದಾರೆ.
ಇದೀಗ, ಸಿಕ್ಸರ್ ಸಿಂಗ್ ವಿದಾಯ ಹೇಳಿರುವ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ''ನಿಮ್ಮ ಬಗ್ಗೆ ಟ್ವೀಟ್ ಮಾಡುತ್ತಿರುವ ನಮ್ಮ ಬಗ್ಗೆ ನಿಮಗೆ ಗೊತ್ತಿಲ್ಲದೇ ಇರಬಹುದು. ನಾವು ನಿಮ್ಮ ಎಷ್ಟು ಪ್ರೀತಿಸುತ್ತೇವೆ, ನೀವು ಅನೇಕರಿಗೆ ಸ್ಫೂರ್ತಿ ಎಂಬುದನ್ನ ತೋರಿಸಲು ನಾವು ಟ್ವೀಟ್ ಮಾಡುತ್ತಿದ್ದೇವೆ. ನನ್ನಿಂದ ಸಾಧ್ಯವಾದರೇ ಸಮಯವನ್ನ ಹಿಂದಕ್ಕೆ ಹಾಕಿ ಮತ್ತೆ ನಿಮ್ಮ ಬ್ಲೂ ಜೆರ್ಸಿಯಲ್ಲಿ ನೋಡುವ ಆಸೆ. ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೇವೆ'' ಎಂದು ಸುದೀಪ್ ಹೇಳಿದ್ದಾರೆ.

ಕಿಚ್ಚ ಸುದೀಪ್ ಗೆ ಕ್ರಿಕೆಟ್ ಆಟದ ಮೇಲೆ ಹೆಚ್ಚು ಆಸ್ತಿ ಇದೆ. ಸಿಸಿಎಲ್, ಕೆಪಿಎಲ್, ಕೆಸಿಸಿ, ಲಂಡನ್ ಕಾರ್ಪೋರೇಟ್ ಕ್ರಿಕೆಟ್ ಟೂರ್ನಿ ಸೇರಿದಂತೆ ಹಲವು ಕಡೆ ಕ್ರಿಕೆಟ್ ಆಡಿರುವ ಅನುಭವವಿದೆ. ಹೀಗಾಗಿ, ಯುವರಾಜ್ ಸಿಂಗ್ ವಿದಾಯ ಸಹಜವಾಗಿ ಸುದೀಪ್ ಅವರಿಗೆ ಬೇಸರ ತಂದಿರುತ್ತೆ.
ಸದ್ಯ, ಲಂಡನ್ ನಲ್ಲಿ ಕ್ರಿಕೆಟ್ ಆಡಲು ಹೋಗಿರುವ ಸುದೀಪ್ ಕಾರ್ಪೋರೇಟ್ ಕ್ರಿಕೆಟ್ ಡೆ ಟೂರ್ನಿಯಲ್ಲಿ ಆಡಲಿದ್ದಾರೆ. ಜೂನ್ 14 ರಂದು ಈ ಟೂರ್ನಿ ಅರಂಭವಾಗಲಿದೆ.


Click it and Unblock the Notifications











