For Quick Alerts
  ALLOW NOTIFICATIONS  
  For Daily Alerts

  ಉಪವಾಸ ಕುಳಿತ ಅಭಿಮಾನಿಗೆ ಕಿಚ್ಚನ ಕಿವಿಮಾತು

  By Pavithra
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನ ಭೇಟಿ ಮಾಡಬೇಕು. ಅದಕ್ಕಾಗಿ ಉಪವಾಸ ಮಾಡುತ್ತೇನೆ ಎಂದು ನಿರ್ಧಾರ ಮಾಡಿ ಕಿಚ್ಚನ ಅಭಿಮಾನಿಯೊಬ್ಬರು ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದಾರೆ. ಕನಕಪುರ ಬಳಿ ಇರುವ ಸಾತನೂರಿನ ನಾಗಸೊಂಡೆ ಗ್ರಾಮದಲ್ಲಿ ವಾಸವಾಗಿರುವ ಕಿಚ್ಚ ಶಿವು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾರೆ.

  ಈ ವಿಡಿಯೋ ನೋಡಿದ ಸುದೀಪ್ ಅಭಿಮಾನಿಗಳು ಹಾಗೂ ಸಾಮಾನ್ಯ ಜನರು ಇಂತಹ ಕೆಲಸ ಮಾಡುವುದರಿಂದ ನಿಮಗೂ ಹಾಗೂ ಸುದೀಪ್ ಅವರಿಗೂ ತೊಂದರೆ ಆಗುತ್ತದೆ. ಇವೆಲ್ಲವನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡಿದ್ದರು.

  ಕಿಚ್ಚ ಸುದೀಪ್ ಗಾಗಿ ಉಪವಾಸ ಕುಳಿತ ಅಭಿಮಾನಿ

  ಈ ವಿಚಾರ ಅಭಿಮಾನಿಗಳ ಮೂಲಕ ಕಿಚ್ಚ ಸುದೀಪ್ ಅವರಿಗೆ ತಲುಪಿದೆ. ಉಪವಾಸ ಕೂರುತ್ತೇನೆ ಎಂದು ನಿರ್ಧಾರ ಮಾಡಿದ ಅಭಿಮಾನಿಗೆ ಕಿಚ್ಚ ಕಿವಿ ಮಾತು ಹೇಳಿದ್ದಾರೆ. ಹುಚ್ಚು ಅಭಿಮಾನಿಗೆ ಸುದೀಪ್ ಹೇಳಿದ ನೀತಿ ಪಾಠವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಕಿಚ್ಚ ಹುಟ್ಟು ಅಭಿಮಾನಿ

  ಕಿಚ್ಚ ಹುಟ್ಟು ಅಭಿಮಾನಿ

  ತಮ್ಮನ್ನು ಭೇಟಿ ಮಾಡಲು ಉಪವಾಸ ಆರಂಭ ಮಾಡಿರುವ ಅಭಿಮಾನಿಯ ವಿಚಾರ ಸುದೀಪ್ ಅವರಿಗೆ ವಿಚಾರ ಮುಟ್ಟಿದೆ. ಅಭಿಮಾನಿಗಳಿಂದ ಈ ಬಗ್ಗೆ ತಿಳಿದುಕೊಂಡ ಕಿಚ್ಚ ಟ್ವಿಟ್ ಮೂಲಕ ತಿಳಿ ಹೇಳಿದ್ದಾರೆ.

  ಕಿಚ್ಚನಿಂದ ಅಭಿಮಾನಿಗೆ ಕಿವಿ ಮಾತು

  ಕಿಚ್ಚನಿಂದ ಅಭಿಮಾನಿಗೆ ಕಿವಿ ಮಾತು

  ಉಪವಾಸ ಮಾಡುತ್ತಿರುವ ಬಗ್ಗೆ ತಿಳಿದ ಸುದೀಪ್ ಅಭಿಮಾನಿಗೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ. "ನೀವು ಚೆನ್ನಾಗಿದ್ದರೆ ನನಗೆ ಖುಷಿ ಉಪವಾಸ ಮಾಡಿ ನೋವು ನೀಡಬೇಡಿ" ಎಂದು ಟ್ವಿಟ್ ಮಾಡಿದ್ದಾರೆ.

  ಪ್ರೀತಿ, ತಾಳ್ಮೆ ಸದಾ ಜೊತೆಯಲ್ಲಿರಲಿ

  ಪ್ರೀತಿ, ತಾಳ್ಮೆ ಸದಾ ಜೊತೆಯಲ್ಲಿರಲಿ

  "ನನ್ನನ್ನು ಭೇಟಿ ಮಾಡಲು ಸಾಕಷ್ಟು ದಾರಿ ಇದೆ ಅದರಲ್ಲಿ ಉತ್ತಮವಾದುದ್ದನ್ನ ಮಾತ್ರ ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿರುವ ಸುದೀಪ್ ಪ್ರೀತಿ ಜೊತೆಯಲ್ಲಿ ತಾಳ್ಮೆ ಇರಲಿ. ಭೇಟಿ ಮಾಡಲು ನನಗೂ ಸಮಯ ಬೇಕಾಗಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರರುಣಿ" ಎಂದಿದ್ದಾರೆ.

  ಉಪವಾಸ ಕೈ ಬಿಡುವಂತೆ ಅಭಿಮಾನಿಗಳ ಮನವಿ

  ಉಪವಾಸ ಕೈ ಬಿಡುವಂತೆ ಅಭಿಮಾನಿಗಳ ಮನವಿ

  ಅಭಿಮಾನಿಯ ಬಗ್ಗೆ ಕಾಳಜಿ ವಹಿಸಿ ಸುದೀಪ್ ಟ್ವಿಟ್ ಮಾಡಿರುವುದನ್ನ ನೋಡಿರುವ ಅಭಿಮಾನಿಗಳು ಇನ್ನಾದರೂ ಉಪವಾಸ ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಕಿಚ್ಚ ಶಿವು ಅವರಿಗೆ ತಿಳಿಸಿದ್ದಾರೆ.

  ಸ್ನೇಹಿತೆ ರಮ್ಯಾ ಹಾದಿಯಲ್ಲೇ ಹೆಜ್ಜೆ ಹಾಕಿದ ಐಂದ್ರಿತಾ

  English summary
  Kannada actor Sudeep tweeted about a fan who started fasting to meet Sudeep, Sudeep wrote "Neevu chaanaagidhare nanage khushi.upavaasa maadi nanage novu kidabedi. bheti maadalu bekaagiruvudhu Samaya,preethi haagu thaalme. Nimmelara preethige sadha chiraruni"

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X