'99' ಚಿತ್ರದ ಗಣೇಶ್ ಲುಕ್ ಬಗ್ಗೆ ಸುದೀಪ್ ಟ್ವೀಟ್
ತಮಿಳಿನ ಸೂಪರ್ ಹಿಟ್ ಸಿನಿಮಾ '96' ಕನ್ನಡಕ್ಕೆ '99' ಹೆಸರಿನಲ್ಲಿ ಬರುತ್ತಿರುವ ವಿಷಯ ಎಲ್ಲರಿಗೆ ತಿಳಿದಿದೆ. ಇತ್ತೀಚಿಗಷ್ಟೆ ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಮೂಲಕ ಗಣೇಶ್ ಅವರ ಲುಕ್ ರಿವೀಲ್ ಆಗಿದೆ.
ಸಿನಿಮಾದ ಲುಕ್ ಕೆಲವರಿಗೆ ಇಷ್ಟ ಆಗಿದ್ದರೆ, ಇನ್ನು ಕೆಲವರಿಗೆ ಇಷ್ಟ ಆಗಿಲ್ಲ. ಹೀಗಿರುವಾಗ ನಟ ಸುದೀಪ್ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ.
'99' ಚಿತ್ರದ ಪೋಸ್ಟರ್ ಅನ್ನು ಮೆಚ್ಚಿಕೊಂಡಿರುವ ಸುದೀಪ್ ''ನನ್ನ ಸಹೋದರ ಗಣೇಶ್ ಗೆ ಶುಭ ಹಾರೈಸುತ್ತೇನೆ. ನಾನು ಈ ಸಿನಿಮಾ ನೋಡಲು ಉತ್ಸುಕನಾಗಿದ್ದೇನೆ'' ಎಂದಿದ್ದಾರೆ. ಜೊತೆಗೆ ಅರ್ಜುನ್ ಜನ್ಯ ಸಂಗೀತವನ್ನು ಮೆಚ್ಚಿಕೊಂಡಿದ್ದಾರೆ.

ವಿಜಯ್ ಸೇತುಪತಿ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದು, ತ್ರಿಶಾ ಆಗಿ ಭಾವನ ಕಾಣಿಸಿಕೊಳ್ಳುತ್ತಿದ್ದಾರೆ. ಜೂನಿಯರ್ ಜಾನು ಆಗಿ ಸಮೀಕ್ಷಾ ಹಾಗೂ ಸ್ಕೂಲ್ ಹುಡುಗನ ಪಾತ್ರದಲ್ಲಿ ಹೇಮಂತ್ ಅಭಿನಯಿಸುತ್ತಿದ್ದಾರೆ.
ಪ್ರೀತಮ್ ಗುಬ್ಬಿ ಚಿತ್ರದ ನಿರ್ದೇಶನ ಮಾಡಿದ್ದು, ರಾಮು ಬಂಡವಾಳ ಹಾಕಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ 100 ನೇ ಸಿನಿಮಾ ಇದಾಗಿದೆ.


Click it and Unblock the Notifications











