ಟ್ವಿಟ್ಟರ್ ನಲ್ಲಿ ದರ್ಶನ್ ರನ್ನು ಅನ್ ಫಾಲೋ ಮಾಡಿದ ಸುದೀಪ್: ಮತ್ತಷ್ಟು ದೂರವಾಯ್ತು ಹಳೆ ದೋಸ್ತಿ!
ಒಂದು ಕಾಲಕ್ಕೆ ನಟ ದರ್ಶನ್ ಹಾಗೂ ಸುದೀಪ್ ಇಬ್ಬರನ್ನು ವಿಷ್ಣುವರ್ಧನ್ ಅಂಬರೀಶ್ ಗೆ ಹೋಲಿಕೆ ಮಾಡುತ್ತಿದ್ದರು. ಅದೇ ರೀತಿ ಈ ಇಬ್ಬರು ನಟರು ಕುಚುಕು ಕುಚುಕು ಎಂದು ಹಾಡು ಹೇಳುತ್ತಿದ್ದರು. ಆದರೆ, ಈಗ ಯಾವುದು ಸರಿ ಇಲ್ಲ.
ದರ್ಶನ್ ಹಾಗೂ ಸುದೀಪ್ ನಡುವಿನ ಸ್ನೇಹ ಹಳಸಿದೆ. ಎಲ್ಲರಿಗೂ ತಿಳಿದಿರುವ ಹಾಗೆ ಕೆಲ ವರ್ಷಗಳಿಂದ ದರ್ಶನ್ ಹಾಗೂ ಸುದೀಪ್ ಇಬ್ಬರೂ ಅಂತರ ಕಾಯ್ದುಕೊಂಡಿದ್ದಾರೆ. ಅದರೊಂದಿಗೆ ಈ ನಟರು ಮುಂದೆ ಒಂದಾಗುವ ಲಕ್ಷಣಗಳು ದಿನೇ ದಿನೇ ಕಣ್ಮರೆ ಆಗುತ್ತಿವೆ.
ಇಬ್ಬರು ನಡುವೆ ಏನೇ ಮುನಿಸು ಇದ್ದರೂ, ಪ್ರೀತಿಯ ಸ್ನೇಹಿತ ದರ್ಶನ್ ರನ್ನು ಟ್ವಿಟ್ಟರ್ ನಲ್ಲಿ ಫಾಲೋ ಸುದೀಪ್ ಮಾಡುತ್ತಿದ್ದರು. ಆದರೆ, ಈಗ ಅದರಿಂದಲೂ ದರ್ಶನ್ ರಿಂದ ಸುದೀಪ್ ದೂರ ಸರಿದಿದ್ದಾರೆ.

ಕುಚುಕು ಸ್ನೇಹಿತನನ್ನು ಅನ್ ಫಾಲೋ ಮಾಡಿದ ಸುದೀಪ್
ಸುದೀಪ್ ಮತ್ತು ದರ್ಶನ್ ನಡುವೆ ಏನೇ ಆಗಿದ್ದರೂ, ಇಲ್ಲಿಯವರೆಗೆ ದರ್ಶನ್ ರನ್ನು ಸುದೀಪ್ ಫಾಲೋ ಮಾಡುತ್ತಿದ್ದರು. ದರ್ಶನ್ ತಮ್ಮನ್ನು ಅನ್ ಫಾಲೋ ಮಾಡಿದ್ದ ಮೇಲೂ, ಸುದೀಪ್ ಮಾತ್ರ ಆ ನಿರ್ಧಾರ ಮಾಡಿರಲಿಲ್ಲ. ಆದರೆ, ಈಗ ಇದ್ದಕ್ಕಿದ್ದ ಹಾಗೆ ದರ್ಶನ್ ರನ್ನು ಟ್ವಿಟ್ಟರ್ ನಿಂದ ಹಿಂಬಾಲಿಸುವುದನ್ನು ನಿಲ್ಲಿಸಿದ್ದಾರೆ.

ಕಾರಣ ಏನು?
ಸುದೀಪ್ ಈಗ ಯಾಕೆ ದರ್ಶನ್ ರನ್ನು ಅನ್ ಫಾಲೋ ಮಾಡಿದರು ಎಂದು ಕಾರಣ ಹೇಳಿಲ್ಲ. ಹಾಗೆ ನೋಡಿದರೆ, ಇಬ್ಬರ ಮಧ್ಯೆ ಮುನಿಸು ಬಂದು ವರ್ಷಗಳೆ ಕಳೆದಿವೆ. ಆಗ ಇಲ್ಲದ ಕಾರಣ ಈಗ ಏನಿದೆ? ಎನ್ನುವ ಅನುಮಾನ ಮಾಡಿದೆ. ಸುದೀಪ್ ಮತ್ತು ದರ್ಶನ್ ನಡುವೆ ಇತ್ತೀಚಿಗೆ ಮತ್ತೆ ಮನಸ್ತಾಪಗಳು ಆಗಿವೆ ಎನ್ನುವ ಮಾತು ಗಾಂಧಿನಗರದಲ್ಲಿ ಇವೆ.

ಸುದೀಪ್ ಬಗ್ಗೆಯ ಪ್ರಶ್ನೆಗೆ ದರ್ಶನ್ ಗರಂ ಆಗಿದ್ದರು
ಇತ್ತೀಚಿಗಷ್ಟೆ 'ಕುರುಕ್ಷೇತ್ರ' ಸಿನಿಮಾದ ಪ್ರೆಸ್ ಮೀಟ್ ನಲ್ಲಿ ದರ್ಶನ್ ಗೆ ಸುದೀಪ್ ಬಗ್ಗೆ ಪ್ರಶ್ನೆ ಬಂದಿತ್ತು. ಆಗ ದರ್ಶನ್ ಆಕ್ರೋಶಗೊಂಡು ಪ್ರತಿಕ್ರಿಯೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇತ್ತ, ಸುದೀಪ್ ರ ಒಂದು ಟ್ವೀಟ್ ಕೂಡ ದೊಡ್ಡ ಚರ್ಚೆ ಮಾಡಿತ್ತು. ಇದು ಸುದೀಪ್ ಟ್ವೀಟ್ ದರ್ಶನ್ ಸಂಬಂಧಪಟ್ಟಿದೆಯಾ ಎನ್ನುವ ಗುಸು ಗುಸು ಇತ್ತು.

ಮತ್ತಷ್ಟು ದೂರ ಆದ ಸುದೀಪ್ - ದರ್ಶನ್
ದರ್ಶನ್ - ಸುದೀಪ್ ಮತ್ತೆ ಒಂದಾಗಬೇಕು ಎನ್ನುವುದು ಎಷ್ಟೋ ಅಭಿಮಾನಿಗಳ ಆಸೆ ಆಗಿತ್ತು. ಆದರೆ, ಇನ್ನು ಮುಂದೆ ಈ ಹಳೆ ದೊಸ್ತಿಗಳು ಮತ್ತೆ ಒಂದಾಗುವುದು ಅನುಮಾನ. ಯಾಕೆಂದರೆ, ಪದೇ ಪದೇ ಈ ಜೋಡಿ ನಡುವೆ ಬಿರುಕು ಹೆಚ್ಚಾಗುತ್ತಲೇ ಇದೆ. ಅಲ್ಲದೆ, ಅಂಬರೀಶ್ ಇಲ್ಲದೆ ವೇಳೆ ಈ ಇಬ್ಬರ ನಡುವೆ ನಿಂತು ಒಂದು ಮಾಡಲು ಚಿತ್ರರಂಗದ ಬೇರೆ ಯಾರೂ ಮುಂದೆ ಬರುವುದಿಲ್ಲ.


Click it and Unblock the Notifications











