ಚೇತರಿಸಿಕೊಳ್ಳಲು ಇನ್ನೂ ಸಮಯ ಬೇಕು: ಸುದೀಪ್

By ಫಿಲ್ಮ್ ಡೆಸ್ಕ್

ಕಿಚ್ಚ ಸುದೀಪ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಕಿಚ್ಚ ಕಳೆದ ಒಂದು ವಾರದಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸುದೀಪ್‌ಗೆ ಏನಾಗಿದೆ ಎಂದು ಅಭಿಮಾನಿಗಳು ಸಹ ಆತಂಕ ಪಟ್ಟುಕೊಂಡಿದ್ದು, ಬೇಗ ಗುಣಮಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Recommended Video

ಕಿಚ್ಚ ಸುದೀಪ್ ಗೆ ಇನ್ನೂ ವಿಶ್ರಾಂತಿ ಬೇಕಂತೆ !!! | Filmibeat Kannada

ಅನಾರೋಗ್ಯಕ್ಕೆ ತುತ್ತಾಗಿರುವ ಬಗ್ಗೆ ಸುದೀಪ್ ಕಳೆದ ವಾರ ಮಾಹಿತಿ ಹಂಚಿಕೊಂಡಿದ್ದರು. ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಕಿಚ್ಚ ಕಳೆದ ವಾರದ ಎಪಿಸೋಡ್ ನಡೆಸಿಕೊಡಲು ಸಾಧ್ಯವಾಗಲ್ಲ ಎಂದು ಹೇಳಿದ್ದರು. ಇದೀಗ ಮತ್ತೆ ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ್ದು, ಚೇತರಿಸಿಕೊಳ್ಳಲು ಇನ್ನು ಸಮಯ ಬೇಕು ಎಂದು ಹೇಳಿದ್ದಾರೆ.

ಇನ್ನೂ ವಿಶ್ರಾಂತಿ ಬೇಕಾದ ಕಾರಣ ಈ ವಾರ ಕೂಡ ರಿಯಾಲಿಟಿ ಶೋ ನಡೆಸಿಕೊಡಲು ಸಾಧ್ಯವಾಗುವುದಿಲ್ಲ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಕಿಚ್ಚನ ಟ್ವೀಟ್‌ಗೆ ಅಭಿಮಾನಿಗಳು ಕಾಮೆಂಟ್ ಮಾಡಿ, ಬೇಗ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ಆದಷ್ಟು ಬೇಗ ಕಾರ್ಯಕ್ರಮ ನಡೆಸಿಕೊಡುವಂತೆ ಆಗಲಿ ಎಂದು ಹಾರೈಸುತ್ತಿದ್ದಾರೆ.

 Sudeep update about his health, He says bit more rest needed

ಅಷ್ಟೆಯಲ್ಲ ಸಾಕಷ್ಟು ಮಂದಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನೆಚ್ಚಿನ ನಟ ಬೇಗ ಗಣಮುಖರಾಗಲಿ ಎಂದು ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಈ ಫೋಟೋವನ್ನು ಸುದೀಪ್ ಶೇರ್ ಮಾಡಿ, ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಚೆನ್ನಗಿರಿಯ (ತಾ) ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್ ‍ಷಾ ಕಿಚ್ಚ ಸುದೀಪ್ ಸೇನೆ ಸದಸ್ಯರು ಆಂಜನೇಯ ದೇವಸ್ಥಾನದಲ್ಲಿ ಸುದೀಪ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುದೀಪ್ ಸದ್ಯ ಕೋಟಿಗೊಬ್ಬ-3 ಮತ್ತು ವಿಕ್ರಾಂತ್ ರೋಣ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

More from Filmibeat

English summary
Actor Sudeep update about his health. He says bit more rest needed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X