twitter
    For Quick Alerts
    ALLOW NOTIFICATIONS  
    For Daily Alerts

    VR vs Pushpa vs KGF 1: ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಿಲೀಸ್ ಆದ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    |

    'ವಿಕ್ರಾಂತ್ ರೋಣ' ಬಿಡುಗಡೆವರೆಗೂ ಒಂದು ಟೆನ್ಸನ್. 'ವಿಕ್ರಾಂತ್ ರೋಣ' ರಿಲೀಸ್ ಆದ್ಮೇಲೆ ಒಂದು ಟೆನ್ಷನ್. ಕಿಚ್ಚ ಸುದೀಪ್ ಅಭಿನಯದ ಪೂರ್ಣ ಪ್ರಮಾಣದ ಪ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ದಾಖಲೆಗಳನ್ನು ಎದುರು ನೋಡಲಾಗುತ್ತಿದೆ.

    ಮೊದಲ ದಿನ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗುತ್ತೆ? ಯಾವ್ಯಾವ ಸಿನಿಮಾದ ದಾಖಲೆಗಳನ್ನು ಉಡೀಸ್ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನೂ 'ವಿಕ್ರಾಂತ್ ರೋಣ' ಅಧಿಕೃತವಾಗಿ ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಅನ್ನು ರಿಲೀಸ್ ಮಾಡಿಲ್ಲ. ಟ್ರೇಡ್ ಅನಲಿಸ್ಟ್‌ಗಳು ನೀಡಿದ ವರದಿಯನ್ನೇ ಆಧಾರವಾಗಿಟ್ಟುಕೊಂಡು ಫಸ್ಟ್ ಡೇ ಕಲೆಕ್ಷನ್ ಲೆಕ್ಕ ಹಾಕಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ದಕ್ಷಿಣ ಭಾರತದ ಮೂರು ಪ್ರಮುಖ ಪ್ಯಾನ್ ಇಂಡಿಯಾ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಹೀಗಿದೆ.

    ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?

    ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ', ಅಲ್ಲು ಅರ್ಜುನ್ 'ಪುಷ್ಪ' ಹಾಗೂ 'ಕೆಜಿಎಫ್ ಚಾಪ್ಟರ್ 1' ಈ ಮೂರು ಸಿನಿಮಾ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಖಾಡಕ್ಕೆ ಇಳಿದಿತ್ತು. ಇವುಗಳ ಮುಂದೆ 'ವಿಕ್ರಾಂತ್ ರೋಣ' ಕಲೆಕ್ಷನ್ ಹೇಗಿದೆ? ಅನ್ನೋದರ ರಿಪೋರ್ಟ್ ಇಲ್ಲಿದೆ.

    ಪ್ಯಾನ್ ಇಂಡಿಯಾ ಚಿತ್ರಕ್ಕೆ ಪೈಪೋಟಿ

    ಪ್ಯಾನ್ ಇಂಡಿಯಾ ಚಿತ್ರಕ್ಕೆ ಪೈಪೋಟಿ

    ಕಿಚ್ಚ ಸುದೀಪ್ ಸಿನಿಮಾ 'ವಿಕ್ರಾಂತ್ ರೋಣ' ವಿಶ್ವದಾದ್ಯಂತ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಈ ಸಿನಿಮಾಗೇನೋ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅದೇ ಹಿಂದಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಜೆಗಳು, ಹಬ್ಬ ಹರಿದಿನಗಳು ಇಲ್ಲದ ವೇಳೆ ರಿಲೀಸ್ ಆಗಿದ್ದರು ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಗೆದ್ದ ಸಿನಿಮಾಗಳ ಮೊದಲ ದಿನದ ಗಳಿಕೆಗೆ 'ವಿಕ್ರಾಂತ್ ರೋಣ' ಸಖತ್ತಾಗೇ ಪೈಪೋಟಿ ನೀಡಿದೆ.

    ಪ್ರೀ ರಿಲೀಸ್ ಬುಕಿಂಗ್‌ನಲ್ಲಿಯೇ ಕೋಟ್ಯಂತರ ಬಾಚಿದ 'ವಿಕ್ರಾಂತ್ ರೋಣ'ಪ್ರೀ ರಿಲೀಸ್ ಬುಕಿಂಗ್‌ನಲ್ಲಿಯೇ ಕೋಟ್ಯಂತರ ಬಾಚಿದ 'ವಿಕ್ರಾಂತ್ ರೋಣ'

    'ವಿಕ್ರಾಂತ್ ರೋಣ' Vs 'ಪುಷ್ಪ'

    'ವಿಕ್ರಾಂತ್ ರೋಣ' Vs 'ಪುಷ್ಪ'

    ಅಲ್ಲು ಅರ್ಜುನ್ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'. ಇದು ವಿಶ್ವದಾದ್ಯಂತ ಮೊದಲ ದಿನ 50 ಕೋಟಿ ರೂ. ಗಳಿಸಿತ್ತು. ತೆಲುಗು ರಾಜ್ಯಗಳಲ್ಲಿ ಹೆಚ್ಚು ಗಳಿಕೆ ಕಂಡಿದ್ದರೂ, ಹಿಂದಿಯಲ್ಲಿ 3.33 ಕೋಟಿ, ತಮಿಳಿನಲ್ಲಿ 4 ಕೋಟಿ ರೂ. ಗಳಿಕೆ ಕಂಡಿತ್ತು. ಇತ್ತ 'ವಿಕ್ರಾಂತ್ ರೋಣ' ವರ್ಲ್ಡ್‌ ವೈಡ್ 30 ರಿಂದ 35 ಕೋಟಿ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ 1 ಕೋಟಿ ರೂ. ಹಾಗೂ ತೆಲುಗು ರಾಜ್ಯಗಳು ಹಾಗೂ ತಮಿಳುನಾಡು ಹಾಗೂ ಕೇರಳದಲ್ಲಿ ತಲಾ 1 ಕೋಟಿ ರೂ. ಆಸು-ಪಾಸಿನಲ್ಲಿ ಗಳಿಕೆ ಕಂಡಿದೆ ಎನ್ನಲಾಗುತ್ತಿದೆ. ಈ ಮೂಲಕ ಹೆಚ್ಚು ಕಡಿಮೆ 'ಪುಷ್ಪ' ಜೊತೆ 'ವಿಕ್ರಾಂತ್ ರೋಣ' ನಿಂತ ಹಾಗಾಗಿದೆ.

    'ಕೆಜಿಎಫ್ 1' Vs 'ವಿಕ್ರಾಂತ್ ರೋಣ'

    'ಕೆಜಿಎಫ್ 1' Vs 'ವಿಕ್ರಾಂತ್ ರೋಣ'

    ಯಶ್ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 1'. ಈ ಸಿನಿಮಾ ಬಿಡುಗಡೆಯಾದಾಗಲೂ ಇಂತಹದ್ದೇ ಸವಾಲು ಎದುರಾಗಿತ್ತು. 'ಕೆಜಿಎಫ್ ಚಾಪ್ಟರ್ 1' ಮೊದಲ ದಿನ ಭಾರತದಾದ್ಯಂತ 18.01 ಕೋಟಿ ರೂ. ಕಲೆಕ್ಷನ್ ಆಗಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 2.10 ಕೋಟಿ ರೂ. ಕಲೆ ಹಾಕಿತ್ತು. ತಮಿಳಿನಲ್ಲಿ 1 ಕೋಟಿ ರೂ. ತೆಲುಗಿನಲ್ಲಿ 2 ಕೋಟಿ ಹಾಗೂ ಮಲಯಾಳಂನಲ್ಲಿ 50 ಲಕ್ಷ ರೂ. ಕಲೆಕ್ಷನ್ ಆಗಿದೆ ಎಂದು ವರದಿಯಾಗಿತ್ತು. ಈ ಮೂಲಕ 'ವಿಕ್ರಾಂತ್ ರೋಣ' ಕನ್ನಡದ್ದೇ ಆದ 'ಕೆಜಿಎಫ್ ಚಾಪ್ಟರ್ 1' ಕಲೆಕ್ಷನ್‌ ಅನ್ನು ಬೀಟ್ ಮಾಡಿದೆ.

    '777 ಚಾರ್ಲಿ' Vs 'ವಿಕ್ರಾಂತ್ ರೋಣ'

    '777 ಚಾರ್ಲಿ' Vs 'ವಿಕ್ರಾಂತ್ ರೋಣ'

    ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬಿಡುಗಡೆಯಾಗಿತ್ತು. '777 ಚಾರ್ಲಿ' ಪಕ್ಕಾ ಕ್ಲಾಸ್ ಸಿನಿಮಾ ಆಗಿದ್ದರೂ ಮೊದಲ ದಿನ ಭಾರತದಾದ್ಯಂತ 6.2 ಕೋಟಿರೂ ಗಳಿಸಿತ್ತು. ಕರ್ನಾಟಕದಲ್ಲೇ ಬರೋಬ್ಬರಿ 5.51 ಕೋಟಿ ರೂ. ಹಿಂದಿಯಲ್ಲಿ 15 ಲಕ್ಷ ರೂ. ತೆಲುಗಿನಲ್ಲಿ 30 ಲಕ್ಷ, ತಮಿಳು 10 ಲಕ್ಷ ಹಾಗೂ ಮಲಯಾಳಂನಲ್ಲಿ 16 ಲಕ್ಷ ಎಂದು ಕಲೆಹಾಕಿದೆ ಎಂದು ವರದಿಯಾಗಿತ್ತು. ಮೊದಲ ದಿನವೇ ಉತ್ತಮ ಮೌತ್ ಟಾಕ್ ಸಿಕ್ಕಿದ್ದರಿಂದ ನಂತರದ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಿತ್ತು.

    English summary
    Sudeep Vikrant Rona Vs Allu Arjun Pushpa Vs KGF Chapter 1 Box Office Collection Day 1, Know More.
    Friday, July 29, 2022, 15:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X