For Quick Alerts
  ALLOW NOTIFICATIONS  
  For Daily Alerts

  ಕಾಶಿ ವಿಶ್ವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸುದೀಪ್ ಭೇಟಿ: ಕಿಚ್ಚನನ್ನು ನೋಡಲು ಮುಗಿಬಿದ್ದ ಅಭಿಮಾನಿಗಳು

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇತ್ತೀಚಿಗೆ ಕೋಲಾರ ಜಿಲ್ಲೆಯ ಕೋರಗೊಂಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಗ್ರಾಮದ ಪುರಾತನ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಖ್ಯಾತ ನಟ ಕಿಚ್ಚ ಸುದೀಪ್ ಭೇಟಿ ನೀಡಿದ್ದರು.

  ಬೆಂಗಳೂರು ದಕ್ಷಿಣ ವಲಯದ ಡಿಸಿಪಿ ದೇವರಾಜ್, ಸುದೀಪ್ ಅವರ ಆಪ್ತ. ತನ್ನ ಹುಟ್ಟೂರಿನ ಕಾರ್ಯಕ್ರಮಕ್ಕೆ ಕಿಚ್ಚನನ್ನು ಆಹ್ವಾನಿಸಿದ್ದರು. ಗೆಳೆಯ ಪ್ರೀತಿಯ ಆಹ್ವಾನಕ್ಕೆ ಗೌರವ ನೀಡಿ ಸುದೀಪ್ ದೇವಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

  ಉಪೇಂದ್ರ 'ಕಬ್ಜ' ಚಿತ್ರೀಕರಣ: ಸುದೀಪ್ ಎಂಟ್ರಿಗೆ ಸಮಯ ನಿಗದಿಉಪೇಂದ್ರ 'ಕಬ್ಜ' ಚಿತ್ರೀಕರಣ: ಸುದೀಪ್ ಎಂಟ್ರಿಗೆ ಸಮಯ ನಿಗದಿ

  ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದರ್ಶನ ಪಡೆದ ಕಿಚ್ಚ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಜೊತೆ ಕೆಲವು ಸಮಯ ಮಾತನಾಡಿದ್ದಾರೆ.

  ಇನ್ನು ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪೀಠಾಧಿಪತಿಯಾದ ಶ್ರೀ ಶ್ರೀ ನಿರ್ಮಲಾನಂದ ಸ್ವಾಮಿಗಳು ಕೂಡ ಆಗಮಿಸಿದ್ದರು. ಕಾಶಿವಿಶ್ವೇಶ್ವರ ಸ್ವಾಮಿ ಲಿಂಗಕ್ಕೆ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದ್ದಾರೆ. ನೂನಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.

  Sudeep visits Kashi Vishweshwara temple in Kolar

  Recommended Video

  ಸುದೀಪ್ ಬಳಿ ಮನವಿ ಮಾಡಿಕೊಂಡ ಡಿ ಬಾಸ್ ಅಭಿಮಾನಿಗಳು | D Boss Fans | Bigg Boss Kannada Season 8

  ಸುದೀಪ್ ಬರ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದಂತೆ ಅಭಿಮಾನಿಗಳು ದೇವಸ್ಥಾನದ ಬಳಿ ಬಂದು ಜಮಾಯಿಸಿದ್ದರು. ಸುದೀಪ್ ಕಾರು ಎಂಟ್ರಿ ಕೊಡುತ್ತಿದ್ದಾರೆ ಪ್ರೀತಿಯ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಒಮ್ಮೆಗೆ ಮುತ್ತಿಗೆ ಹಾಕಿದ ಅಭಿಮಾನಿಗಳು ಸುದೀಪ್ ಗೆ ಜೈಕಾರ ಕೂಗಿದರು. ಬಳಿಕ ಸುದೀಪ್ ಕಾರಿನ ಮೇಲೆ ಹತ್ತಿ ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

  English summary
  Kichcha Sudeep visits Kashi Vishweshwara temple in Kolar.
  Tuesday, March 9, 2021, 18:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X