'ದೃಶ್ಯ' ಸಿನಿಮಾ ನಿರ್ಮಾಣ ಮಾಡಬೇಕಿದ್ದಿದ್ದು ಸುದೀಪ್!

ಉತ್ತಮ ಸಿನಿಮಾಗಳನ್ನು ಕನ್ನಡದ ಪ್ರೇಕ್ಷಕರಿಗೆ ತೋರಿಸಬೇಕು ಎಂಬ ಆಸೆ ಸುದೀಪ್‌ರದ್ದು. ಹಾಗಾಗಿಯೇ ಅವರು, 'ಸ್ವಾತಿ ಮುತ್ತು', 'ಶಾಂತಿ ನಿವಾಸ', 'ಆಟೋಗ್ರಾಫ್' ಅಂಥಹಾ ಸಿನಿಮಾಗಳನ್ನು ಗುಣಮಟ್ಟದ ರೀಮೇಕ್ ಮಾಡಿ ಕನ್ನಡ ಪ್ರೇಕ್ಷಕರಿಗೆ ತೋರಿಸಿದರು.

ಅಂತೆಯೇ ನಟ ಸುದೀಪ್, ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ 'ದೃಶ್ಯಂ' ಸಿನಿಮಾವನ್ನು ಕನ್ನಡದಲ್ಲಿ ನಿರ್ಮಾಣ ಮಾಡಲು ಇಚ್ಛಿಸಿದ್ದರು. ರವಿಚಂದ್ರನ್ ಅವರಿಗೆ ಮೊದಲು 'ದೃಶ್ಯಂ' ಸಿನಿಮಾ ನೋಡುವಂತೆ ಸೂಚಿಸಿದ್ದು ಸಹ ಸುದೀಪ್ ಅವರೇ ಅಂತೆ.

ನಿನ್ನೆ ಬೆಂಗಳೂರಿನಲ್ಲಿ ನಡೆದ 'ದೃಶ್ಯ 2' ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಸುದೀಪ್ ಗುಟ್ಟು ಬಿಟ್ಟುಕೊಟ್ಟರು.

ವೇದಿಕೆ ಮೇಲೆ ಮಾತನಾಡಿದ ಸುದೀಪ್, 'ಮಾಣಿಕ್ಯ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ, ಯಾವುದೋ ಒಂದು ಫೈಟ್ ದೃಶ್ಯದ ಚಿತ್ರೀಕರಣ ಮಾಡುವ ಸಮಯದಲ್ಲಿ ನಾನು ರವಿಚಂದ್ರನ್ ಅವರಿಗೆ ಮಲಯಾಳಂನ 'ದೃಶ್ಯಂ' ಸಿನಿಮಾ ನೋಡುವಂತೆ ಹೇಳಿದೆ. ಅವರು ಆರಂಭದಲ್ಲಿ ಹೂ ಎಂದರಾದರೂ ಕೆಲವು ದಿನ ಹಾಗೆಯೇ ತಳ್ಳಾಡುತ್ತಾ ಬಂದರು'' ಎಂದರು ಸುದೀಪ್.

ಕೊನೆಗೆ ರಾಕ್‌ಲೈನ್‌ ಮಾಲ್‌ನಲ್ಲಿ ಸಿನಿಮಾ ವೀಕ್ಷಿಸಲು ನಾನೇ ವ್ಯವಸ್ಥೆ ಮಾಡಿಸಿ ರವಿಚಂದ್ರನ್ ಅವರನ್ನು ಕಳಿಸಿದೆ. ಅವರು ಸಿನಿಮಾ ನೋಡಿ ಬಹಳ ಇಷ್ಟಪಟ್ಟರು. ಆಗ ಹೇಳಿದೆ, ನೀವು ಮಾಡುವುದಾದರೆ ನಾನು ನಿರ್ಮಾಣ ಮಾಡುತ್ತೇನೆ, ನೀವು ಇಂಥಹಾ ಸಿನಿಮಾಗಳಲ್ಲಿ ನಟಿಸಬೇಕು ಎಂದೆ'' ಅವರು ಸಹ ಸರಿ ಎಂದು ಒಪ್ಪಿಕೊಂಡರು ಎಂದು 7 ವರ್ಷದ ಹಿಂದಿನ ಘಟನೆಗಳನ್ನು ನೆನಪು ಮಾಡಿಕೊಂಡರು ಸುದೀಪ್.

Sudeep Wanted To Produce Drishya Movie For Ravichandran

ಆದರೆ ಅಷ್ಟರಲ್ಲಿ ಒಬ್ಬರು ಕರೆ ಮಾಡಿ, ನೀವು ರವಿಚಂದ್ರನ್ ಅವರ ಬಳಿ 'ದೃಶ್ಯಂ' ಸಿನಿಮಾ ಬಗ್ಗೆ ಮಾನಾಡಿದ್ದೀರಂತೆ, ನೀವು ಒಪ್ಪುವುದಾದರೆ ನಾವು ಆ ಸಿನಿಮಾ ರವಿಚಂದ್ರನ್ ಜೊತೆ ಮಾಡುತ್ತೇವೆ ಎಂದರು. ನಾನು ಒಂದು ಷರತ್ತು ಹಾಕಿ ಒಪ್ಪಿಕೊಂಡೆ. ನಮ್ಮಲ್ಲಿ ಸಿನಿಮಾದ ರೈಟ್ಸ್ ತೆಗೆದುಕೊಳ್ಳಬೇಕಾದರೆ ಒಬ್ಬರ ಹೆಸರಿರುತ್ತದೆ ಅದಾದ ಮೇಲೆ ನಿರ್ಮಾಣ ಮತ್ತೊಬ್ಬರು ಮಾಡುತ್ತಾರೆ. ಹಾಗಾಗಿ ನೀವು ಹಕ್ಕು ಖರೀದಿಸಿದ್ದರೆ ನೀವೇ ನಿರ್ಮಾಣ ಮಾಡಿ, ಗುಣಮಟ್ಟದ ಸಿನಿಮಾ ಮಾಡುವುದಾದರೆ ಮಾತ್ರ ಮಾಡಿ ಇಲ್ಲವಾದರೆ ನಾನು ಅವರಿಗೆ ಮಾತುಕೊಟ್ಟು ನಂತರ ತಪ್ಪಿ ನಡೆದಂತಾಗುತ್ತದೆ ಎಂದಿದ್ದರಂತೆ ಸುದೀಪ್. ಅಂತೆಯೇ ಎಲ್ಲರೂ ಮಾತಿಗೆ ತಕ್ಕಂತೆ ನಡೆದುಕೊಂಡು ನಂತರ 'ದೃಶ್ಯ' ಸಿನಿಮಾ ನಿರ್ಮಾಣವಾಗಿ, ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಈಗ 'ದೃಶ್ಯ 2' ಸಿನಿಮಾ ಸಹ ನಿರ್ಮಾಣವಾಗಿ, ಬಿಡುಗಡೆಗೆ ತಯಾರಾಗಿದೆ.

ರವಿಚಂದ್ರನ್ ನಟನೆಯ 'ದೃಶ್ಯ' ಸಿನಿಮಾವು ಮಲಯಾಳಂನ 'ದೃಶ್ಯಂ' ಸಿನಿಮಾದ ರೀಮೇಕ್. ಮೂಲ ಸಿನಿಮಾದಲ್ಲಿ ಮೋಹನ್‌ಲಾಲ್ ನಟಿಸಿದ್ದರು, ಸಿನಿಮಾವನ್ನು ಜೀತು ಜೋಸೆಫ್ ನಿರ್ಮಾಣ ಮಾಡಿದ್ದರು. ಈಗ ಜೀತು ಜೋಸೆಫ್ ಅವರು ತಮ್ಮ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗ ನಿರ್ಮಾಣ ಮಾಡಿದ್ದಾರೆ. ಅದೇ ಸಿನಿಮಾವನ್ನು ಕನ್ನಡದಲ್ಲಿಯೂ ರೀಮೇಕ್ ಮಾಡಲಾಗಿದೆ. 'ದೃಶ್ಯ' ಸಿನಿಮಾ ನಿರ್ದೇಶಿಸಿದ್ದ ಪಿ ವಾಸು ಅವರೇ 'ದೃಶ್ಯ 2' ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Actor Sudeep wanted to produce 'Drishya' movie for Ravichandran. He said I only insist Ravichandran watch Malayalam 'Drishyam' and asked him to act in its remake in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X