''ನಾನು ಕೈಗೆ ಬಳೆ ಹಾಕಿಲ್ಲ'' : ಸಂಚಲನ ಮೂಡಿಸಿದ ಸುದೀಪ್ ಟ್ವೀಟ್
Recommended Video
'ಪೈಲ್ವಾನ್' ಸಿನಿಮಾದ ಪೈರಸಿ ವಿವಾದ ಈಗ ಬೇರೆಯದ್ದೇ ರೂಪ ಪಡೆದುಕೊಳ್ಳುತ್ತಿದೆ. ಇದೀಗ ನಟ ಕಿಚ್ಚ ಸುದೀಪ್ ಈ ಬಗ್ಗೆ ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.
''ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೆನುಗೊತಿಲ್ಲ. ನನ್ನ ಮೌನ, ನನ್ನ ತಾಳ್ಮೆ, ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ, ಇನ್ನು ಕೆಲವು ದಿನಗಳು ಮಾತ್ರ.'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ರಾತ್ರಿ (ಸಪ್ಟೆಂಬರ್ 20) ಸುದೀಪ್ ಈ ಟ್ವೀಟ್ ಮಾಡಿದ್ದು, ಇಡೀ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿದೆ. ಇದ್ದಕ್ಕಿದ್ದ ಹಾಗೆ ಸುದೀಪ್ ಈ ಮಾತನ್ನು ಹೇಳಿದ್ದು, ಮುಂದೆ ಏನಾಗುತ್ತದೆ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ, ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್, ಫ್ಯಾನ್ಸ್ ವಾರ್ ಜೋರಾಗಿ ನಡೆಯುತ್ತಿದೆ. ಇದರ ಬಿಸಿಯನ್ನು ಸುದೀಪ್ ಟ್ವೀಟ್ ಮತ್ತಷ್ಟು ಹೆಚ್ಚು ಮಾಡಿದೆ.
ತಮ್ಮ 'ಪೈಲ್ವಾನ್' ಸಿನಿಮಾದ ಪೈರಸಿ ಮಾಡಿ, ಸಿನಿಮಾದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಿ, ಚಿತ್ರವನ್ನು ಸೋಲಿಸಲು ಪ್ರಯತ್ನ ಮಾಡುತ್ತಿರುವರ ವಿರುದ್ಧ ಸುದೀಪ್ ಸಮರ ಸಾರಿದ್ದಾರೆ.
ಪೈರಸಿ ವಿಷಯಕ್ಕೆ ಸಂಬಂಧಿಸಿದಂತೆ, ನಿನ್ನೆ (ಸಪ್ಟೆಂಬರ್ 20) ರಾಕೇಶ್ ವಿರಾಟ್ ಎಂಬ ನೆಲಮಂಗಲದ ಯುವಕನನ್ನು ಸೈಬಲ್ ಕ್ರೈಂ ಪೊಲೀಸರು ಬಂಧನ ಮಾಡಿದ್ದರು.


Click it and Unblock the Notifications











