ನಟಿ ಶ್ರುತಿ ಹರಿಹರನ್ ಹೊಗಳಿದ ಕಿಚ್ಚ ಸುದೀಪ್

Recommended Video

Sudeep watched Mane Maratakkide movie and tweets about the movie | FILMIBEAT KANNADA

ನಟಿ ಶ್ರುತಿ ಹರಿಹರನ್ ಅಭಿನಯದ 'ಮನೆ ಮಾರಾಟಕ್ಕಿದೆ' ಸಿನಿಮಾ ಇತ್ತೀಚಿಗಷ್ಟೆ ಬಿಡುಗಡೆ ಆಗಿತ್ತು. ಈ ಸಿನಿಮಾವನ್ನು ಇದೀಗ ನಟ ಕಿಚ್ಚ ಸುದೀಪ್ ವೀಕ್ಷಿಸಿದ್ದಾರೆ.

ಚಿತ್ರತಂಡ ಸುದೀಪ್ ಗಾಗಿ ವಿಶೇಷ ಪ್ರದರ್ಶನ ಏರ್ಪಾಡು ಮಾಡಿತ್ತು. ಸಿನಿಮಾ ನೋಡಿದ ಸುದೀಪ್ ಮೆಚ್ಚುಗೆ ಸೂಚಿಸಿದರು. ಈ ವೇಳೆ ಸಿನಿಮಾದ ನಿರ್ದೇಶಕ ಮಂಜು ಸ್ವರಾಜ್, ನಟ ರವಿಶಂಕರ್, ನಟಿ ಕಾರುಣ್ಯ ರಾಮ್, ನಟರಂಗ, ಸಂಗೀತ ನಿರ್ದೇಶಕ ಅಭಿಮಾನ್ ರಾಯ್ ಭಾಗಿಯಾಗಿದ್ದರು.

ಸಿನಿಮಾದ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಾರೆ. ''ಚಿತ್ರದ ಕಾನ್ಸೆಪ್ಟ್, ಹೆಸರಿಸುವ ಕೆಲವು ಅಂಶಗಳು ಹೊಸ ಐಡಿಯಾದಲ್ಲಿ ಮಾಡಲಾಗಿದೆ. ಸಾಧು ಕೋಕಿಲ, ರವಿಶಂಕರ್, ಚಿಕ್ಕಣ್ಣ, ಕುರಿ ಪ್ರತಾಪ್ ಚೆನ್ನಾಗಿ ನಟಿಸಿದ್ದಾರೆ. ಶ್ರುತಿ ಹರಿಹರನ್ ರನ್ನು ತೆರೆ ಮೇಲೆ ನೋಡಲು ಖುಷಿ ಆಗುತ್ತದೆ. ಅವರು ಚೆನ್ನಾಗಿ ಕಾಣುತ್ತಾರೆ.'' ಎಂದು ಸುದೀಪ್ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ವಿಶೇಷ ಪ್ರದರ್ಶನ ಆಯೋಜನೆ ಮಾಡಿದ್ದ ಚಿತ್ರತಂಡಕ್ಕೆ ಧನ್ಯವಾದ ಹೇಳಿದ್ದಾರೆ.

Sudeep Watched Mane Maratakkide Movie

ನಟಿ ಶ್ರುತಿ ಹರಿಹರನ್ ಈ ಸಿನಿಮಾಗೂ ಮುಂಚೆ ಸುದೀಪ್ ಜೊತೆಗೆ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ನಟಿಸಿದ್ದರು. ಆ ಬಳಿಕ 'ಮನೆ ಮಾರಾಟಕ್ಕಿದೆ' ಸಿನಿಮಾ ಮಾಡಿದ್ದರು. ಆ ಸಿನಿಮಾ ಬಿಡುಗಡೆ ತಡ ಆದ ಕಾರಣ ಈಗ ರಿಲೀಸ್ ಆಗಿದೆ. ಹಾರರ್ ಕಾಮಿಡಿ ಸಿನಿಮಾ ಜನರಿಗೆ ಕಿಕ್ ನೀಡಿದೆ.

More from Filmibeat

English summary
Actor Sudeep watched Mane Maratakkide movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X