ದಂಪತಿ ಸಮೇತ ಲಂಡನ್ ಗೆ ಹಾರಿದ ಕಿಚ್ಚ ಸುದೀಪ್ ಮತ್ತು ಆಪ್ತರು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊನ್ನೆ ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರದ ಮೂಹೂರ್ತಕ್ಕೆ ಅತಿಥಿಯಾಗಿದ್ದ ಆಗಮಿಸಿದ್ದರು. ನಿನ್ನೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ವಿತರಿಸಿದ್ದರು. ಇಂದು ನೋಡಿದ್ರೆ ಲಂಡನ್ ಗೆ ಹಾರಿದ್ದಾರೆ.

ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್, ರಾಜೀವ್ ಮತ್ತು ಪತ್ನಿ, ಪ್ರದೀಪ್ ಮತ್ತು ಪತ್ನಿ ಹೀಗೆ ಮೂವರು ತಾರಾದಂಪತಿಗಳು ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ನಟ ಪ್ರದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ಇದೆನಪ್ಪಾ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿರುವ ಸುದೀಪ್ ದಿಢೀರ್ ಅಂತ ಲಂಡನ್ ಗೆ ಹೋದ್ರು ಎಂದು ಯೋಚನೆ ಮಾಡುತ್ತಿದ್ದೀರಾ. ಅದರಲ್ಲು ಮೂವರು ತಮ್ಮ ಪತ್ನಿಯರ ಜೊತೆ ಹೋಗಿರುವುದರಿಂದ ಇದು ಹಾಲಿಡೇ ಟ್ರಿಪ್ ಇರಬಹುದಾ ಎಂಬ ಕುತೂಹಲ ಕಾಡುತ್ತಿದ್ಯಾ?

Sudeep went to london with his wife priya

ನಿಮ್ಮ ನಿರೀಕ್ಷೆ ಇದೇ ಆಗಿದ್ದರೆ ಬಹುಶಃ ನಿರಾಸೆಯಾಗುತ್ತೆ. ಯಾಕಂದ್ರೆ, ಸುದೀಪ್ ಮತ್ತು ಆಪ್ತರು ಲಂಡನ್ ಗೆ ಹೋಗಿರುವುದು ಕ್ರಿಕೆಟ್ ಆಡುವುದಕ್ಕೆ. ಹೌದು, ಜೂನ್ 12 ರಂದು ಇಂಗ್ಲೆಂಡ್ ನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿ ನಡೆಯುತ್ತಿದ್ದು, ಇದರಲ್ಲಿ ಸುದೀಪ್ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಲಂಡನ್ ಗೆ ಹೋಗಿದ್ದಾರೆ.

ಅದಕ್ಕೂ ಮುಂಚೆ 2017ನೇ ವರ್ಷದಲ್ಲಿ ನಡೆದಿದ್ದ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ವಿಷನೈರ್ ತಂಡದ ಪರವಾಗಿ ಆಡಿದ್ದ ಸುದೀಪ್ ಚಾಂಪಿಷನ್ ತಂಡದಲ್ಲಿದ್ದರು. ಇದೀಗ ಮತ್ತೆ ಅದೇ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

More from Filmibeat

English summary
Kannada actor, kiccha sudeep went to london with his wife. and Rajeev and pradeep family also joined with sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X