»   » ಕಿಚ್ಚ ಸುದೀಪ್ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಮುದ್ದು ಮಡದಿ ಪ್ರಿಯಾ.!

ಕಿಚ್ಚ ಸುದೀಪ್ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಮುದ್ದು ಮಡದಿ ಪ್ರಿಯಾ.!

Posted By:
Subscribe to Filmibeat Kannada
Sudeep Wife Priya Visits 'The Villain' Shooting Spot | Filmibeat Kannada

ಮನಸ್ತಾಪ, ಕೋಪ, ಭಿನ್ನಾಭಿಪ್ರಾಯ... ಎಲ್ಲವನ್ನ ಬದಿಗಿಟ್ಟು ಕನ್ನಡದ ಕೆಚ್ಚೆದೆಯ ಕಿಚ್ಚ ಸುದೀಪ್ ಹಾಗೂ ಪತ್ನಿ ಪ್ರಿಯಾ ಕೋರ್ಟ್ ಗೆ ಸಲ್ಲಿಸಿದ್ದ ವಿಚ್ಛೇದನದ ಅರ್ಜಿಯನ್ನ ವಾಪಸ್ ಪಡೆದಿದ್ದಾರೆ.

ಹಳೆಯದ್ದನ್ನೆಲ್ಲ ಮರೆತು ಒಂದಾಗಿರುವ ಸುದೀಪ್ ಹಾಗೂ ಪತ್ನಿ ಪ್ರಿಯಾ ಇದೀಗ ಒಟ್ಟಾಗಿ ಕಾಣಿಸಿಕೊಳ್ತಿರೋದನ್ನ ನೋಡ್ತಿದ್ರೆ, ಎಂಥವರಿಗೂ ಖುಷಿ ಆಗುತ್ತೆ.

ಮೊನ್ನೆಮೊನ್ನೆಯಷ್ಟೇ 'ದೊನ್ನೆ ಬಿರಿಯಾನಿ ಮನೆ'ಯಲ್ಲಿ ಪತಿ ಸುದೀಪ್ ಜೊತೆಯಾಗಿ ಬಂದಿದ್ದ ಪ್ರಿಯಾ ಈಗ 'ದಿ ವಿಲನ್' ಶೂಟಿಂಗ್ ಸ್ಪಾಟ್ ಗೂ ಒಂದು ವಿಸಿಟ್ ಕೊಟ್ಟಿದ್ದಾರೆ. ಮುಂದೆ ಓದಿರಿ....

'ದಿ ವಿಲನ್' ಶೂಟಿಂಗ್ ಸ್ಪಾಟ್ ನಲ್ಲಿ ಸುದೀಪ್ ಪತ್ನಿ ಪ್ರಿಯಾ

'ದಿ ವಿಲನ್' ಚಿತ್ರದ ಶೂಟಿಂಗ್ ಸದ್ಯ ಚಿಕ್ಕಮಗಳೂರಿನಲ್ಲಿ ನಡೆಯುತ್ತಿದೆ. ಸಾಹಸ ದೃಶ್ಯಗಳನ್ನ ಚಿತ್ರೀಕರಿಸಿಕೊಳ್ಳಲಾಗುತ್ತಿದ್ದು, ನಟ ಸುದೀಪ್ ಹಾಗೂ ಆಮಿ ಜಾಕ್ಸನ್ ಪಾಲ್ಗೊಂಡಿದ್ದಾರೆ. ವಿಶೇಷ ಅಂದ್ರೆ, ಇದೇ ಶೂಟಿಂಗ್ ಸ್ಪಾಟ್ ಗೆ ನಟ ಸುದೀಪ್ ಪತ್ನಿ ಪ್ರಿಯಾ ಕೂಡ ಭೇಟಿ ಕೊಟ್ಟಿದ್ದಾರೆ.

'ಬಿರಿಯಾನಿ ಮನೆ'ಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಸುದೀಪ್-ಪ್ರಿಯಾ ದಂಪತಿ

ಆಮಿ ಜಾಕ್ಸನ್ ಜೊತೆ ಪ್ರಿಯಾ ಪೋಸ್

'ದಿ ವಿಲನ್' ಚಿತ್ರದ ನಾಯಕಿ ಆಮಿ ಜಾಕ್ಸನ್ ಜೊತೆ ಶೂಟಿಂಗ್ ಸ್ಪಾಟ್ ನಲ್ಲಿ ಸುದೀಪ್ ಪತ್ನಿ ಪ್ರಿಯಾ ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದಾರೆ.

ಬಿಳಿ ಪಂಚೆ, ಬಿಳಿ ಶರ್ಟ್ ಹಾಕ್ಕೊಂಡು 'ಮದುಮಗ'ನಂತೆ ಮಿಂಚಿದ ಸುದೀಪ್

ಶೂಟಿಂಗ್ ಸ್ಪಾಟ್ ನಲ್ಲಿ ಪತಿ-ಪತ್ನಿ

ಅಲ್ಲಿಗೆ, ಪತಿ ಸುದೀಪ್ ಭಾಗದ 'ದಿ ವಿಲನ್' ಚಿತ್ರೀಕರಣವನ್ನ ಪ್ರಿಯಾ ಕಣ್ತುಂಬಿಕೊಂಡಿದ್ದಾರೆ ಅಂತರ್ಥ. ಸುದೀಪ್ ಹಾಗೂ ಪ್ರಿಯಾ ಹೀಗೆ ಸದಾ ಒಟ್ಟಿಗೆ ಖುಷಿ ಖುಷಿ ಆಗಿರಲಿ ಅನ್ನೋದೇ ಅಭಿಮಾನಿಗಳ ಹಾರೈಕೆ.

'ಬಿರಿಯಾನಿ ಮನೆ'ಯಲ್ಲಿ ಸುದೀಪ್ ದಂಪತಿ

ಇತ್ತೀಚೆಗಷ್ಟೇ ನಡೆದ ಸಿ.ಸಿ.ಎಲ್ ಆಟಗಾರ ರಾಜೀವ್ ಅವರ 'ದೊನ್ನೆ ಬಿರಿಯಾನಿ ಮನೆ' ಉದ್ಘಾಟನೆ ಸಮಾರಂಭಕ್ಕೂ ಸುದೀಪ್, ಪತ್ನಿ ಪ್ರಿಯಾ ಸಮೇತ ಆಗಮಿಸಿದ್ದರು.

English summary
Kannada Actor Kiccha Sudeep wife Priya visits 'The Villain' shooting spot. Take a look at the photo of Priya with 'The Villain' Actress Amy Jackson.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada