ಪತಿಯೆ ಬೆಸ್ಟ್ ಫ್ರೆಂಡ್ ಎಂದು ಹೇಳಿದ ಪ್ರಿಯಾ ಸುದೀಪ್
ಚಿರಕಾಲ ಇರಲಿ ಈ ಸ್ನೇಹ ಎಂದು ಇವತ್ತು ಪ್ರತಿಯೊಬ್ಬರು ತಮ್ಮ ಸ್ನೇಹಿತರಿಗೆ ಶುಭಕೊರುತ್ತಿದ್ದಾರೆ. ಸ್ನೇಹಕ್ಕಾಗಿಯೆ ಒಂದು ದಿನ ಮೀಸಲಿಟ್ಟು ಸ್ನೇಹಿತರ ದಿನಾಚರಣೆ ಆಚರಿಸುತ್ತಿರುವುದು ಸಂತಸದ ವಿಚಾರ. ಸ್ನೇಹವಿಲ್ಲದೆ ಮುನುಷ್ಯ ಒಬ್ಬೊಂಟಿಯಾಗಿ ಜೀವಿಸುವುದು ಕಷ್ಟ. ಒಂದು ವೇಳೆ ಸಂಬಂಧಿಕರಿಂದ ದೂರವಾಗಿ ಬದುಕಬಹುದೇನೋ, ಆದ್ರೆ ಸ್ನೇಹವಿಲ್ಲದೆ ಇರುವವರು ಯಾರು ಇಲ್ಲ ಅನ್ಸುತ್ತೆ.
ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಸುಂದರವಾದ ಬಂಧವೆ ಸ್ನೇಹ. ಜೀವನದಲ್ಲಿ ಗೆಳೆತನ ಎನ್ನುವುದು ಅಮೂಲ್ಯವಾದ ಪಾತ್ರವನ್ನು ವಹಿಸುತ್ತದೆ. ಅಂತಹ ಸುಂದರ ಬಂಧಕ್ಕಾಗಿಯೆ ಒಂದು ದಿನವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಬಂಧದ ದಿನ ವಿಶೇಷವಾಗಿ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಪತಿಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಪ್ರಿಯಾ ಸುದೀಪ್ ಪಾಲಿಗೆ ಪತಿಯೆ ಬೆಸ್ಟ್ ಫ್ರೆಂಡ್. ಪ್ರಿಯಾ ತನ್ನ ಗೆಳೆಯ, ಪತಿ ಸುದೀಪ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
"ನನ್ನ ಗೆಳೆಯನ ಜೊತೆ ಸಿಲ್ಲಿಯಾಗಿರುವುದು ಈ ಅವತಾರದಲ್ಲಿ ನಿಮ್ಮ ಪೈಲ್ವಾನ್ ಅನ್ನು ಎಂದಾದರು ನೋಡಿದ್ದೀರಾ? ಬಿಗ್ ಹಗ್ ಮೈ ಬೆಸ್ಟಿ ಸುದೀಪ್" ಎಂದು ಹೇಳಿ ಪತಿ ಜೊತೆಗಿರುವ ಕ್ಯೂಟ್ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.

ಪ್ರಿಯಾ ಇಬ್ಬರ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಇಬ್ಬರ ಮುದ್ದಾದ ಫೋಟೋಗೆ ಲೈಕ್ಸ್ ಗಳ ಸುರಿಮಳೆಯೆ ಹರಿದುಬಂದಿದೆ. ಸುದೀಪ್ ಸದ್ಯ 'ಕೋಟಿಗೊಬ್ಬ-3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಹಿಂದಿಯ 'ದಬಾಂಗ್-3' ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಪೈಲ್ವಾನ್ ಚಿತ್ರದ ರಿಲೀಸ್ ಎದುರುನೋಡುತ್ತಿದ್ದಾರೆ.


Click it and Unblock the Notifications











