ಅನಾರೋಗ್ಯದಿಂದ ಬಳಲುತ್ತಿರುವ ಅಭಿಮಾನಿಯ ಕೋರಿಕೆಗೆ ಮಣಿದ ಸುದೀಪ್
Recommended Video

ಕಿಚ್ಚ ಸುದೀಪ್ ಅವರನ್ನ ನೋಡಬೇಕು ಎಂದು ಆಸೆಯಿಟ್ಟುಕೊಂಡಿರುವ ಅಭಿಮಾನಿಯನ್ನ ಸುದೀಪ್ ಶುಕ್ರವಾರ ಭೇಟಿ ಮಾಡಲಿದ್ದಾರೆ. ಸುದೀಪ್ ಅವರ ಅಭಿಮಾನಿಯಾಗಿರುವ 12 ವರ್ಷದ ರಾಹುಲ್, ಬ್ರೈನ್ ಟ್ಯೂಮರ್ (ಮೆದುಳು ಗಡ್ಡೆ) ನಿಂದ ಬಳಲುತ್ತಿದ್ದಾರೆ.
ರಾಹುಲ್ ತಂದೆ ಜಲಿಂದರ್ ಬೆಂಗಳೂರಿನಲ್ಲಿ ವಾಸವಾಗಿದ್ದು, ತಿಂಗಳಿಗೆ 8000 ಸಾವಿರ ರೂಪಾಯಿ ಆದಾಯವಿದೆ. ಮಗನ ಚಿಕಿತ್ಸೆಗಾಗಿ ಈಗಾಗಲೇ ನಾಲ್ಕು ಲಕ್ಷದವರೆಗೂ ಹಣ ಖರ್ಚು ಮಾಡಿದ್ದಾರೆ. ಸುಮಾರು 7 ಲಕ್ಷದವರೆಗೂ ಚಿಕಿತ್ಸೆಗೆ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರಂತೆ.
ಹೀಗಿರುವಾಗ, ರಾಹುಲ್ ಸುದೀಪ್ ಅವರ ಅಭಿಮಾನಿ. ತಮ್ಮ ನೆಚ್ಚಿನ ನಟನನ್ನ ನೋಡಬೇಕು ಎಂಬ ಆಸೆಯನ್ನ ವ್ಯಕ್ತಪಡಿಸಿದ್ದಾರೆ. ಈ ವಿಷ್ಯ ಟ್ವಿಟ್ಟರ್ ಮೂಲಕ ಸುದೀಪ್ ಗಮನಕ್ಕೆ ಬಂದಿದೆ.

ರಾಹುಲ್ ವಿಷ್ಯ ತಿಳಿದ ಸುದೀಪ್, ಶುಕ್ರವಾರ ರಾಹುಲ್ ಅವರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯ, ರಾಹುಲ್ ಪೋಷಕರ ಮನವಿಗೆ ಸ್ಪಂದಿಸಿರುವ ಸುದೀಪ್, ಚಿಕಿತ್ಸೆಗೆ ನೆರವು ನೀಡಬಹುದು.
ಸದ್ಯ, 'ಪೈಲ್ವಾನ್' ಮತ್ತು 'ಸೈರಾ' ಚಿತ್ರದ ಶೂಟಿಂಗ್ ಗಾಗಿ ಸುದೀಪ್ ಹೈದಾರಬಾದ್ ನಲ್ಲಿದ್ದಾರೆ. ಬಿಗ್ ಬಾಸ್ ರೆಕಾರ್ಡಿಂಗ್ ಕಾರಣ ಶುಕ್ರವಾರ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಈ ವೇಳೆ ರಾಹುಲ್ ಭೇಟಿ ಮಾಡಲಿದ್ದಾರೆ.


Click it and Unblock the Notifications











