ಮತ್ತೆ ಗುರುನಂದನ್ ಸಹಾಯಕ್ಕೆ ಬಂದ ಸುದೀಪ್

ನಟ ಗುರುನಂದನ್ ಅವರ 'ರಾಜು ಕನ್ನಡ ಮೀಡಿಯಂ' ಸಿನಿಮಾದಲ್ಲಿ ಸುದೀಪ್ ಒಂದು ಪ್ರಮುಖ ಪಾತ್ರ ಮಾಡಿದ್ದರು. ಸಿನಿಮಾದ ಗೆಲುವಿಗೆ ಇದು ಕೂಡ ಒಂದು ಕಾರಣ ಆಗಿತ್ತು. ಕಳೆದ ವರ್ಷ ಈ ಸಿನಿಮಾ ಬಿಡುಗಡೆಯಾಗಿತ್ತು.

ಅಂದಹಾಗೆ, 'ರಾಜು ಕನ್ನಡ ಮೀಡಿಯಾ' ಬಳಿಕ ಗುರುನಂದನ್ ಅವರ ಮತ್ತೊಂದು ಸಿನಿಮಾಗೆ ಸುದೀಪ್ ಸಹಾಯ ಮಾಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸುದೀಪ್ ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಬದಲಿಕೆ ಗುರು ಚಿತ್ರದ ಟ್ರೇಲರ್ ಅನ್ನು ಕಿಚ್ಚ ಬಿಡುಗಡೆ ಮಾಡಿಕೊಡುತ್ತಿದ್ದಾರೆ.

ಗುರುನಂದನ್ ಮುಂದಿನ ಸಿನಿಮಾ 'ಮಿಸ್ಸಿಂಗ್ ಬಾಯ್' ಚಿತ್ರದ ಟ್ರೇಲರ್ ಸುದೀಪ್ ರಿಲೀಸ್ ಮಾಡಲಿದ್ದಾರೆ. ಈ ಚಿತ್ರದ ಟ್ರೇಲರ್ ಮಾರ್ಚ್ 7 ರಂದು ಬಿಡುಗಡೆಯಾಗಲಿದೆ. ಈ ವಿಷಯವನ್ನು ಚಿತ್ರದ ನಿರ್ದೇಶಕ ರಘುರಾಮ್ ಹಂಚಿಕೊಂಡಿದ್ದಾರೆ. ರಘುರಾಮ್ ಈ ಹಿಂದೆ 'ಚೆಲುವೆ ನಿನ್ನೆ ನೋಡಲು' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು.

sudeep will be releasing missing boy kannada movie trailer

5 ವರ್ಷದ ಒಬ್ಬ ಹುಡುಗ ತಂದೆ, ತಾಯಿ ಇಂದ ತಪ್ಪಿಸಿಕೊಂಡು ಹೋಗುತ್ತಾನೆ. ಈ ರೀತಿ ಮಿಸ್ ಆದ ಹುಡುಗನ ಕಥೆಯೇ 'ಮಿಸ್ಸಿಂಗ್ ಬಾಯ್'. ಸಿನಿಮಾದ ಟೀಸರ್ ಈಗಾಗಲೇ ಹೊರಬಂದಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆಕೊಂಡಿದೆ. ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಮಾರ್ಚ್ 22ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.

English summary
Actor Sudeep will be releasing Gurunandan 'Missing Boy' kannada movie trailer. The movie is directed by Raghuram. 'Missing Boy' is a emotional drama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X