ಶೀತಲ್ ಶೆಟ್ಟಿಗೆ ಪತಿ ಹುಡುಕಿಕೊಡುತ್ತಾರೆ ಕಿಚ್ಚ ಸುದೀಪ್
Recommended Video

ತಮ್ಮ ನಗುವಿನಿಂದಲೇ ಪ್ರಖ್ಯಾತಿ ಪಡೆದಿರುವ ನಟಿ ಶೀತಲ್ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಪತಿಯನ್ನು ಹುಡುಕಿಕೊಡಲು ಮುಂದಾಗಿದ್ದಾರಂತೆ. ಅರೆ ಸುದೀಪ್ ಪತಿ ಹುಡುಕುತ್ತಾರಾ? ಅಂತ ಯೋಚನೆ ಮಾಡಬೇಡಿ, ನಾವು ಹೇಳುತ್ತಿರುವುದು ಸಿನಿಮಾ ಬಗ್ಗೆ.
ಶೀತಲ್ ಶೆಟ್ಟಿ 'ಪತಿ ಬೇಕು ಡಾಟ್' ಕಾಮ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಸಖತ್ ಸುದ್ದಿ ಮಾಡಿದ್ದು ಸಿನಿಮಾದ ಟ್ರೇಲರ್ ಜುಲೈ 26 ರಂದು ಬಿಡುಗಡೆ ಆಗುತ್ತಿದೆ.

ಕಿಚ್ಚ ಸುದೀಪ್ ಟ್ರೇಲರ್ ಬಿಡುಗಡೆ ಮಾಡುತ್ತಿದ್ದು, 'ಪತಿ ಬೇಕು ಡಾಟ್ ಕಾಮ್' ಸಿನಿಮಾ ಮಹಿಳಾ ಪ್ರಧಾನ ಚಿತ್ರ ಅಂದರೆ ತಪ್ಪಾಗೊದಿಲ್ಲ. ಈ ಹಿಂದೆ 'ತರ್ಲೆ ನನ್ ಮಕ್ಳು' ಸಿನಿಮಾ ನಿರ್ದೇಶನ ಮಾಡಿದ್ದ ರಾಕೇಶ್ ಪತಿ ಬೇಕು ಡಾಟ್ ಕಾಂ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ನಿರ್ದೇಶಕ ರಾಕೇಶ್, ಶ್ರೀನಿವಾಸ್ ಹಾಗೂ ಮಂಜುನಾಥ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಕೌಶಿಕ್ ಹರ್ಷ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಶೀತಲ್ ಜೊತೆಯಾಗಿ ಹರಿಣಿ ಮತ್ತು ಕೃಷ್ಣ ಅಡಿಗ ಕೂಡ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.


Click it and Unblock the Notifications











