»   » ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದ ಮಾಣಿಕ್ಯ ಸುದೀಪ್

ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದ ಮಾಣಿಕ್ಯ ಸುದೀಪ್

Posted By:
Subscribe to Filmibeat Kannada

ಗಾಂಧಿ ನಗರದಲ್ಲಿ 'ಎಟಿಎಂ' ಅಂತಾನೇ ಪ್ರಖ್ಯಾತಿ ಪಡೆದುಕೊಂಡಿರುವ ಸಿನಿಮಾ "ಅಟೆಂಪ್ಟ್ ಟು ಮರ್ಡರ್', ಹೊಸಬರೆ ಸೇರಿಕೊಂಡು ಮಾಡಿರುವ ಈ ಚಿತ್ರಕ್ಕೆ ಬಿಗ್ ಸ್ಟಾರ್ ಗಳು ಸಾಥ್ ನೀಡುತ್ತಾ ಬಂದಿದ್ದಾರೆ. ಒಂದು ಕೊಲೆಯ ಸುತ್ತಾ ನಡೆದ ಘಟನೆಯನ್ನ ಸಿನಿಮಾವನ್ನಾಗಿ ಮಾಡಿದ್ದಾರೆ ನಿರ್ದೇಶಕ ಅಮರ್. ನಿರೂಪಕಿ ಆಗಿ ಗುರುತಿಸಿಕೊಂಡಿರುವ ಹೇಮಲತಾ ನಾಯಕಿಯಾಗಿ ಅಭಿನಯಿಸಿದ್ದು ಚಿತ್ರ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ ಎನ್ನುವುದು ವಿಶೇಷ.

ಮಾರ್ಚ್ 17 ರಂದು ಅಟೆಂಪ್ಟ್ ಟು ಮರ್ಡರ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಈ ಹಿಂದೆ ಚಿತ್ರದ ಹಾಡುಗಳನ್ನ ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿದ್ದರು ಈಗ ಹಿಂದಿನಿಂದಲೂ ಹೊಸಬರ ಬೆನ್ನಿಗೆ ನಿಂತು ಸಹಾಯ ಮಾಡುತ್ತಾ ಬಂದಿರುವ ಕಿಚ್ಚ ಸುದೀಪ್ ಹೊಸ ಕಲಾವಿದರ ಚಿತ್ರದ ಟ್ರೇಲರ್ ರಿಲೀಸ್ ಮಾಡಲಿದ್ದಾರೆ.

Sudeep will be releasing the Kannada Attempt to Murder movie trailer.

ಕಿಚ್ಚನ ಖದರಿಗೆ ಜೊತೆಯಾದ ಶೃತಿ ಹರಿಹರನ್

ಅಟೆಂಪ್ಟ್ ಟು ಮರ್ಡರ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಅಮರ್ ಅವರೇ ವಹಿಸಿಕೊಂಡಿದ್ದು , ಎಸ್.ವಿ.ನಾರಾಯಣ್ ಹಾಗೂ ಎಸ್.ವಿ.ಕೃಷ್ಣಮೂರ್ತಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ,

ಗೃಹಲಕ್ಷ್ಮಿ, ಲಕ್ಷ್ಮೀಬಾರಮ್ಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಚಂದು ಹಾಗೂ ನಟ ವಿನಯ್ ಚಿತ್ರದಲ್ಲಿ ನಾಯಕ ನಟರು, ಶೋಭಿತ ಶಿವಣ್ಣ ಹಾಗೂ ಹೇಮಲತಾ ಈ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಟೈಟಲ್ ನಿಂದಲೇ ಬಾರಿ ಕುತೂಹಲವನ್ನು ಹುಟ್ಟುಹಾಕಿದ್ದ ಅಟೆಂಪ್ಟ್ ಟು ಮರ್ಡರ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಬರಲಿದೆ.

'ವಿಲನ್' ಬಳಗ ಸೇರಿದ ಮೂವರು 'ಸ್ಟಾರ್' ನಟಿಯರು.!

English summary
Kannada actor Sudeep will be releasing the Kannada Attempt to Murder movie trailer. Film directed by Attempt to Murder Arun Gowda. Vinay, Shobhita and Hemalatha have acted in the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X