ದುನಿಯಾ ವಿಜಿಯ 'ಸಲಗ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ 'ಸಲಗ' ಚಿತ್ರ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಈಗಾಗಲೇ ಸಲಗ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶುಭ ಕೋರಿ ವಿಜಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಇದೀಗ, ಬ್ಲಾಕ್ ಕೋಬ್ರಾನ ಸಲಗಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಥ್ ಕೊಡುತ್ತಿದ್ದಾರೆ. ಸಲಗ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವ ಮೂಲಕ ಕರಿಚಿರತೆಯ ಹೊಸ ಜರ್ನಿಗೆ ಜೊತೆಯಾಗಲಿದ್ದಾರೆ.

Sudeep will come to salaga movie launch

ಈ ಬಗ್ಗೆ ಸಲಗ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್ ಟ್ವೀಟ್ ಮಾಡಿದ್ದು, ಸಲಗ ಸಿನಿಮಾ ಲಾಂಚ್ ಗೆ ಸುದೀಪ್ ಬರುವುದಾಗಿ ಹೇಳಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ. ಸುದೀಪ್ ಕೂಡ ಶ್ರೀಕಾಂತ್ ಅವರ ಟ್ವೀಟ್ ಗೆ 'ಸದಾ ಸಿದ್ಧ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹಾಗ್ನೋಡಿದ್ರೆ, ಈ ಹಿಂದೆ ದುನಿಯಾ ವಿಜಯ್ ಅವರು ಪುನೀತ್ ಹಾಗೂ ಶಿವಣ್ಣ ಅವರನ್ನ ಭೇಟಿ ಮಾಡಿದ್ದರ ಹಿಂದೆ ಕೂಡ ಇಂತಹದ್ದೇ ಏನಾದರೂ ವಿಷ್ಯ ಇರಬಹುದು ಎಂಬ ಕುತೂಹಲ ಕಾಡ್ತಿದೆ. ಅಂದ್ರೆ, ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶದಿಂದ ಭೇಟಿಯಾಗಿರಬಹುದು. ಆದರೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

Sudeep will come to salaga movie launch

ಸದ್ಯ 'ಸಲಗ' ಚಿತ್ರದ ಪೋಸ್ಟರ್ ಮತ್ತು ಟೀಸರ್ ಮಾಡುವ ಉದ್ದೇಶದಿಂದ ಫೋಟೋಶೂಟ್ ನಡೆಯುತ್ತಿದ್ದು, ಕೆಲವು ಮೇಕಿಂಗ್ ಚಿತ್ರಗಳು ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚುತ್ತಿದ್ದು, ವಿಜಿಗೆ ಟಕ್ಕರ್ ಕೊಡಲಿದ್ದಾರೆ. ವಿಜಿ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿಲ್ಲವಾದರೂ ರಗಡ್ ಲುಕ್ ಗಮನ ಸೆಳೆಯುತ್ತಿದೆ.

ಇನ್ನುಳಿದಂತೆ ಟಗರು ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ಅದೇ ತಂತ್ರಜ್ಞರನ್ನ ಉಳಿಸಿಕೊಂಡಿದ್ದು, ಕನ್ನಡಕ್ಕೊಂದು ಭರ್ಜರಿ ಸಿನಿಮಾ ಕೊಡುವ ತಯಾರಿಯಲ್ಲಿದ್ದಾರೆ.

More from Filmibeat

English summary
Kannada actor Kiccha sudeep has agrees to come for salaga movie launch. salaga is duniya vijay starrer and directional movie. produced by kp srikanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X