ಮತ್ತೊಮ್ಮೆ ಬುರ್ಜ್ ಖಲೀಫಾಗೆ ಎಂಟ್ರಿ ಕೊಡಲಿರುವ ಕಿಚ್ಚ ಸುದೀಪ್?

ಭಾರತೀಯ ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ 'ವಿಕ್ರಾಂತ್ ರೋಣ' ಸಿನಿಮಾ ಟೈಟಲ್ ಲೋಗೋ ಅನಾವರಣ ಮಾಡಿದ್ದರು. ಈ ಮೂಲಕ ಬುರ್ಜ್ ಖಲೀಫಾ ಮೇಲೆ ಕನ್ನಡ ನಟನೊಬ್ಬನ ಸಿನಿಮಾದ ಟೀಸರ್ ಪ್ರದರ್ಶನ ಕಂಡಿದ್ದು ಇದೇ ಮೊದಲ ಸಲ ಆಗಿತ್ತು.

Recommended Video

ಮತ್ತೆ ಬುರ್ಜ್ ಖಲೀಫಾ ಕಡೆ ಮುಖ ಮಾಡಿದ ಕಿಚ್ಚ ಸುದೀಪ್ | Hostel Hudugaru Bekagiddare | Filmibeat Kannada

ದುಬೈನಲ್ಲಿ ಆಯೋಜಿಸಿದ್ದ ಈ ವಿಶೇಷ ಕಾರ್ಯಕ್ರಮ ಮುಗಿಸಿ ಈಗಾಗಲೇ ಸುದೀಪ್ ಬೆಂಗಳೂರಿಗೆ ಬಂದಿದ್ದಾರೆ. ಸಿಲಿಕಾನ್ ಸಿಟಿಗೆ ವಾಪಸ್ ಆಗಿರುವ ಬಾದ್‌ಶಾ ಬಿಗ್ ಬಾಸ್‌ ಶೋಗಾಗಿ ತಯಾರಾಗುತ್ತಿದ್ದಾರೆ. ಈ ನಡುವೆ ಮತ್ತೊಮ್ಮೆ ಬುರ್ಜ್ ಖಲೀಫಾಗೆ ಎಂಟ್ರಿ ಕೊಡುತ್ತಿದ್ದಾರೆ ಅಭಿನಯ ಚಕ್ರವರ್ತಿ. ಸುದೀಪ್ ಮತ್ತೆ ಬುರ್ಜ್ ಖಲೀಫಾ ಬಳಿ ಹೋಗ್ತಾರಾ ಎಂಬ ಕುತೂಹಲ ಹುಟ್ಟುಹಾಕಿರುವುದು ಹಾಸ್ಟೆಲ್ ಹುಡುಗರು. ಏಕೆ? ಮುಂದೆ ಓದಿ...

ಹಾಸ್ಟೆಲ್ ಹುಡುಗರಿಗಾಗಿ ಮತ್ತೊಮ್ಮೆ ಬುರ್ಜ್ ಖಲೀಪಾಗೆ ಸುದೀಪ್?

ಹಾಸ್ಟೆಲ್ ಹುಡುಗರಿಗಾಗಿ ಮತ್ತೊಮ್ಮೆ ಬುರ್ಜ್ ಖಲೀಪಾಗೆ ಸುದೀಪ್?

'ವಿಕ್ರಾಂತ್ ರೋಣ' ಚಿತ್ರಕ್ಕಾಗಿ ಬುರ್ಜ್ ಖಲೀಫಾಗೆ ಹೋಗಿದ್ದ ಸುದೀಪ್ ಈಗ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎಂಬ ಹೊಸಬರ ಚಿತ್ರಕ್ಕಾಗಿ ಮತ್ತೊಮ್ಮೆ ದುಬೈ ಹಾರಲಿದ್ದಾರೆ. ಬುರ್ಜ್ ಖಲೀಫಾದಲ್ಲಿ ''ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'' ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸುದೀಪ್. ಹೀಗಂತ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಪೋಸ್ಟ್ ಮಾಡಿ ಕುತೂಹಲ ಮಾಡಿದೆ.

ವಿಭಿನ್ನ ಪ್ರಮೋಷನ್‌ಗೆ ಸ್ಟಾರ್ ನಟರ ಫಿದಾ

ವಿಭಿನ್ನ ಪ್ರಮೋಷನ್‌ಗೆ ಸ್ಟಾರ್ ನಟರ ಫಿದಾ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ಪ್ರಚಾರದ ವಿಧಾನಕ್ಕೆ ಸ್ಯಾಂಡಲ್‌ವುಡ್ ಫಿದಾ ಆಗಿದೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರಿಂದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದರು. ಆ ವೇಳೆಯೂ ಈ ಚಿತ್ರತಂಡ ಪ್ರಮೋಷನ್ ಬಹಳ ಗಮನ ಸೆಳೆದಿತ್ತು. ಈಗ ಬುರ್ಜ್ ಖಲೀಫಾ ಎಂಬ ವಿಚಾರವನ್ನಿಟ್ಟು ಮತ್ತೇನು ಮಾಡ್ತಾರೋ ಎಂಬ ಕುತೂಹಲ ಮೂಡಿದೆ.

ನಿಜಕ್ಕೂ ಬುರ್ಜ್ ಖಲೀಲಾ ಮೇಲೆ ಟೀಸರ್ ಲಾಂಚ್ ಆಗುತ್ತಾ?

ನಿಜಕ್ಕೂ ಬುರ್ಜ್ ಖಲೀಲಾ ಮೇಲೆ ಟೀಸರ್ ಲಾಂಚ್ ಆಗುತ್ತಾ?

ಬುರ್ಜ್ ಖಲೀಫಾ ಕಟ್ಟಡದ ಮೇಲಿಂದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಟೀಸರ್ ರಿಲೀಸ್ ಆಗುವುದು ಪಕ್ಕಾ. ಆದರೆ, ಬೆಂಗಳೂರಿನಲ್ಲಿರುವ ಸುದೀಪ್ ದುಬೈಗೆ ಯಾವಾಗ ಹೋಗ್ತಾರೆ, ಬುರ್ಜ್ ಖಲೀಫಾ ಮೇಲೆ ಈ ಕಾರ್ಯಕ್ರಮ ನಡೆಯುತ್ತಾ ಎಂಬುದನ್ನು ಸೋಮವಾರ (ಫೆಬ್ರವರಿ 15) ಸಂಜೆ 6 ಗಂಟೆಗೆ ಗೊತ್ತಾಗಲಿದೆ.

ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್

ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್

ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗುಲ್‌ಮೊಹರ್‌ ಫಿಲ್ಮ್ಸ್‌ ಮತ್ತು ವರುಣ್‌ ಸ್ಟುಡಿಯೋಸ್‌ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ 30ಕ್ಕೂ ಅಧಿಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

More from Filmibeat

English summary
Kannada actor Kiccha Sudeep will launch 'Hostel Hudugaru Bekagiddare' movie teaser at Burj Khalifa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X