ಕಿಚ್ಚ ಸುದೀಪ್ ರಿಲೀಸ್ ಮಾಡ್ತಾರಂತೆ ಉಪೇಂದ್ರ ಸಿನಿಮಾದ ಟ್ರೈಲರ್
ಕಿಚ್ಚ ಸುದೀಪ್ ಇತ್ತೀಚಿಗೆ ಸಾಕಷ್ಟು ಚಿತ್ರಗಳ ಟ್ರೈಲರ್ ಮತ್ತು ಟೀಸರ್ ಗಳನ್ನು ರಿಲೀಸ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರುತ್ತಾರೆ. ಸಾಕಷ್ಟು ಹೊಸಬರ ಚಿತ್ರಗಳಿಗೆ ಸಾಥ್ ನೀಡುವ ಕಿಚ್ಚ ಈಗ ಉಪೇಂದ್ರ ಚಿತ್ರದ ಟ್ರೈಲರ್ ರಿಲೀಸ್ ಮಾಡುತ್ತಿದ್ದಾರೆ. ರಿಯಾಲ್ ಸ್ಟಾರ್ ಅಭಿನಯದ 'ಐ ಲವ್ ಯು' ಚಿತ್ರದ ಎರಡನೇ ಟ್ರೈಲರ್ ಸುದೀಪ್ ಕೈಯಿಂದ ಬಿಡುಗಡೆಯಾಗಲಿದೆಯಂತೆ.
'ಐ ಲವ್ ಯು' ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಬಹುನಿರೀಕ್ಷೆಯ ಚಿತ್ರ. ಈಗಾಗಲೆ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ಐ ಲವ್ ಯು' ಸಿನಿಮಾದ ಎರಡನೆ ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ರಿಯಲ್ ಸ್ಟಾರ್ ಪ್ರಜಾಕಿಯದಲ್ಲಿ ಬ್ಯುಸಿ ಇದ್ದ ಕಾರಣ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಲೆ ಇತ್ತು.
ಪ್ರಜಾಕೀಯದಿಂದ ಸ್ವಲ್ಪ ಬಿಡುವು ಪಡೆದಿರುವ ರಿಯಲ್ ಸ್ಟಾರ್ ಈಗ ಸಿನಿಮಾ ರಿಲೀಸ್ ಕಡೆ ಗಮನ ಹರಿಸಿದ್ದಾರೆ. ಅಂದ್ಹಾಗೆ 'ಐ ಲವ್ ಯು' ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. ಸದ್ಯ ಎರಡನೇ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿರುವ 'ಐ ಲವ್ ಯು' ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ.

ಇನ್ನು ವಿಶೇಷ ಅಂದ್ರೆ ಈ ಸಿನಿಮಾ ಕನ್ನಡ ಜೊತೆಗೆ ತೆಲುಗಿನಲ್ಲು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ವರ್ಷಗಳ ಬಳಿಕ ಎಂಟ್ರಿ ಕೊಡುತ್ತಿರುವ ರಿಲಯ್ ಸ್ಟಾರ್ ಅಭಿನಯದ 'ಐ ಲವ್ ಯು' ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ಬಿಡುಗಡೆ ಮಾಡುತ್ತಿರುವುದು ರಿಯಲ್ ಸ್ಟಾರ್ ಮತ್ತು ಅಭಿನಯ ಚಕ್ರವರ್ತಿ ಅಭಿಮಾನಿಗಳಿಗೆ ಸಂತಸ ತಂದಿದೆ.


Click it and Unblock the Notifications











