ಹಾಲಿವುಡ್ 'ರೈಸನ್'ಗೆ ಮತ್ತೆ ಜೀವ ನೀಡಿದ ಸುದೀಪ್
ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಇಷ್ಟೋತ್ತಿಗಾಲೇ ಚಿತ್ರಮಂದಿರಕ್ಕೆ ಈ ಸಿನಿಮಾ ಬರಬಹುದು ಎಂಬ ಲೆಕ್ಕಾಚಾರವನ್ನ ಫ್ಯಾನ್ಸ್ ಆಗಲೇ ಹಾಕಿದ್ದರು.
ಆದ್ರೆ, ಈ ಸಿನಿಮಾ ಶೂಟಿಂಗ್ ನಲ್ಲಿ ಸುದೀಪ್ ಭಾಗವಹಿಸಲಿಲ್ಲ. ಈ ಮಧ್ಯೆ 'ರೈಸನ್' ಟ್ರೈಲರ್ ಬಿಡುಗಡೆಯಾಗಿತ್ತು. ಈ ಟ್ರೈಲರ್ ನಲ್ಲಿ ಎಲ್ಲಿಯೂ ಸುದೀಪ್ ದೃಶ್ಯ ಇರಲಿಲ್ಲ. ಹೀಗಾಗಿ, ಸುದೀಪ್ ಈ ಸಿನಿಮಾ ಬಿಟ್ಟರಾ ಎಂಬ ಅನುಮಾನ ಕಾಡಿತ್ತು. ಆಮೇಲೆ ಸುದೀಪ್ ಅವರೇ ಖಚಿತಪಡಿಸಿದ್ದರು. ನಾನಿನ್ನು ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಈ ವರ್ಷ ಹೋಗ್ತಿದ್ದೀನಿ ಅಂತ.
ಇದೀಗ, ಆ ಸಮಯ ಬಂದಿದೆ. ಸ್ವತಃ ಸುದೀಪ್ ಅವರೇ ಹೇಳಿದಂತೆ ಫೆಬ್ರವರಿ ತಿಂಗಳಲ್ಲಿ 'ರೈಸನ್' ಚಿತ್ರೀಕರಣಕ್ಕೆ ಕಿಚ್ಚ ತೆರಳುತ್ತಿದ್ದಾರೆ. ಸುದೀಪ್ ಭಾಗದ ಶೂಟಿಂಗ್ ಮುಗಿಸಿಕೊಟ್ಟು ಬರ್ತಾರಂತೆ.

ಆದ್ರೆ, ಸಿನಿಮಾ ಯಾವಾಗ ರಿಲೀಸ್? ಅವರ ಪ್ಲಾನ್ ಏನು ಎಂಬುದರ ಬಗ್ಗೆ ಅಂತಿಮವಾಗಿಲ್ಲ ಎಂದು ಸುದೀಪ್ ಹೇಳಿದ್ದಾರೆ. ಈಗಾಗಲೇ ಪೈಲ್ವಾನ್ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಬಳಿಕ ಕೋಟಿಗೊಬ್ಬ 3 ಮುಗಿಸಿ ಅಲ್ಲಿಂದ ನೇರವಾಗಿ ರೈಸನ್ ಕಡೆ ಹಾರಲಿದ್ದಾರೆ.


Click it and Unblock the Notifications











